ವಾಷಿಂಗ್ಟನ್: ನಮ್ಮ ಸೌರಮಂಡಲದ ಕೇಂದ್ರ ಬಿಂದುವಾಗಿರುವ ಭಾಸ್ಕರ ಭೂಮಿ ಸಕಲ ಜೀವಾರಾಶಿಗಳ ಬದುಕಿಗೆ ಮೂಲಾಧಾರ. ಸೂರ್ಯನ ಶಕ್ತಿ ವಸುಧೆ ಮೇಲೆ ಜೀವ ಸಂಕುಲ ಬಾಳಿ ಬದುಕಲು ಮೂಲ ಕಾರಣ. ಸಮಸ್ತ ಸೌರಮಂಡಲದ ಒಡೆಯನಾಗಿರುವ ಈ ಭಾಸ್ಕರನ ಕುರಿತು ಮಾನವನ ಜ್ಞಾನ ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಲೇ ಇದೆ. ತಂತ್ರಜ್ಞಾನ ಬೆಳವಣಿಗೆಯಾದಂತೆಲ್ಲಾ ಖಗೋಳ ವಿಜ್ಞಾನ ಕ್ಷೇತ್ರ ಸೂರ್ಯನ ಕುರಿತಾದ ಜ್ಞಾನವನ್ನು ವೃದ್ಧಿಸಿಕೊಳ್ಳುತ್ತಲೇ ಇದೆ. ಅದರಂತೆ ಹಲವಾರು ದಶಕಗಳಿಂದ ಸೂರ್ಯನ ಅಧ್ಯಯನದಲ್ಲಿ ನಿರತವಾಗಿರುವ , ಈ ಅವಧಿಯಲ್ಲಿ ಸೂರ್ಯನ ಕುರಿತು ಅಗಾಧ ಮಾಹಿತಿಗಳನ್ನು ಕಲೆ ಹಾಕಿದೆ. ಇದೀಗ ಸೂರ್ಯನ 10 ವರ್ಷದ ಅವಧಿಯ ಪರಿಭ್ರಮಣೆಯ ವಿಡಿಯೋ ಬಿಡುಗಡೆ ಮಾಡಿರುವ ನಾಸಾ, ಇಡೀ ವಿಶ್ವದ ಖಗೋಳ ಪ್ರಿಯರ ಗಮನ ಸೆಳೆದಿದೆ. ಈ 10 ವರ್ಷಗಳ ಅವಧಿಯಲ್ಲಿ ಸೂರ್ಯನಲ್ಲಾದ ಬದಲಾವಣೆಗಳು, ಚಟುವಟಿಕೆಗಳ ಕುರಿತು ಈ ವಿಡಿಯೋ ಸುದೀರ್ಘ ಮಾಹಿತಿ ನೀಡುತ್ತದೆ. ನಾಸಾದ ಸೌರ ಡೈನಾಮಿಕ ವೀಕ್ಷಣಾಲಯ(SDO)ದಿಂದ ವೀಕ್ಷಿಸಿದ ಸೂರ್ಯನ 10 ವರ್ಷಗಳ ಚಟುವಟಿಕೆಗಳನ್ನು ವಿಡಿಯೋ ಮೂಲಕ ಬಿಡುಗಡೆ ಮಾಡಲಾಗಿದೆ. ಈ ವೇಳೆ SDO ಸುಮಾರು 450 ಮಿಲಿಯನ್ಗಿಂತಲೂ ಹೆಚ್ಚು ಬಾರಿ ಸೂರ್ಯನ ಹೈ ರೆಸಲ್ಯೂಷನ್ ಚಿತ್ರಗಳನ್ನು ಸೆರೆಹಿಡಿದಿರುವುದು ವಿಶೇಷ. ಈ ವಿಡಿಯೋಗೆ 'A Decade of ' ಎಂಬ ಶೀರ್ಷಿಕೆ ನೀಡಲಾಗಿದ್ದು, ಖಗೋಳ ಪ್ರಿಯರಿಗೆ ರಸದೌತಣ ಉಣಬಡಿಸಲಿರುವುದು ಖಚಿತ.
from India & World News in Kannada | VK Polls https://ift.tt/2BjRLvj