ಲಾಡೆನ್ ಓರ್ವ ಹುತಾತ್ಮನೆಂದ ಇಮ್ರಾನ್: ಬೈಗುಳಗಳ ಸುರಿಮಳೆಗೆ ಸುಸ್ತಾದ ಖಾನ್!

ಇಸ್ಲಾಮಾಬಾದ್: ಪಾಕ್ ಪ್ರಧಾನಿ ನೀಡುವ ಹೇಳಿಕೆಗಳು ವಿವಾದಾತ್ಮಕವಾಗಿಯೂ, ಹಾಸ್ಯಾಸ್ಪದವಾಗಿಯೂ ಇರುತ್ತವೆ. ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವವರ ಸಂಖ್ಯೆಗಿಂತ, ಅಪಹಾಸ್ಯ ಮಾಡುವವರ ಸಂಖ್ಯೆಯೇ ಹೆಚ್ಚು. ಅದರಂತೆ ಅಲ್ ಕೈದಾ ಸಂಘಟನೆಯ ಮಾಜಿ ಮುಖ್ಯಸ್ಥ ಮತ್ತು ಅಮೆರಿಕದ ಸೇನೆಯಿಂದ ಹತನಾದ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನನ್ನು ಎಂದು ಕರೆಯುವ ಮೂಲಕ ಇಮ್ರಾನ್ ಖಾನ್ ಹೊಸ ವಿವಾದ ಸೃಷ್ಟಿಸಿದ್ದಾರೆ. ಪಾಕ್ ಸಂಸತ್ತಿನಲ್ಲಿ ಅಮೆರಿಕ-ಪಾಕಿಸ್ತಾನ ನಡುವಿನ ಸಂಬಂಧದ ಕುರಿತು ಮಾತನಾಡುತ್ತಿದ್ದ ಇಮ್ರಾನ್ ಖಾನ್, ಅಬೋಟಾಬಾದ್‌ಗೆ ಬಂದ ಅಮೆರಿಕ ಸೈನಿಕರು ಲಾಡೆನ್‌ನ್ನು ಕೊಂದರು. ಹೋರಾಡುತ್ತಲೇ ಲಾಡೆನ್ ಹುತಾತ್ಮನಾದ ಎಂದು ಹೇಳಿದ್ದಾರೆ. ಇಮ್ರಾನ್ ಖಾನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ವಿಪಕ್ಷಗಳು, ಲಾಡೆನ್‌ನನ್ನು ಹುತಾತ್ಮ ಎಂದು ಕರೆಯುವ ಮೂಲಕ ಪಾಕ್ ಪ್ರಧಾನಿ ದೇಶದ ಮಾನವನ್ನು ಹರಾಜು ಹಾಕಿದ್ದಾರ ಎಂದು ಕಿಡಿಕಾರಿವೆ. ಈ ಕುರಿತು ಮಾತನಾಡಿರುವ ಪಾಕ್ ಮಾಜಿ ವಿದೇಶಾಂಗ ಸಚಿವ ಖ್ವಾಜಾ ಆಸೀಫ್, ಲಾಡೆನ್‌ನನ್ನು ಹುತಾತ್ಮ ಎಂದು ಕರೆಯುವ ಮೂಲಕ ಇಮ್ರಾನ್ ಖಾನ್ ಪಾಕಿಸ್ತಾನಕ್ಕೆ ಅಗೌರವ ತೋರಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಭಯೋತ್ಪಾದನೆ ಕಾರಣಕ್ಕೆ ಇಡೀ ವಿಶ್ವ ಮುಸ್ಲಿಮರಿಂದ ಅಂತರ ಕಾಯ್ದುಕೊಳ್ಳುತ್ತಿದೆ. ಮುಸ್ಲಿಮರು ಎಲ್ಲೆಡೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಪ್ರಧಾನಿ ಲಾಡೆನ್‌ನನ್ನು ಹುತಾತ್ಮ ಎಂದು ಕರೆಯುತ್ತಾರೆ ಎಂದು ಪಾಕ್ ಸಾಮಾಜಿಕ ಹೋಆಟಗಾರ್ತಿ ಮೀನಾಗಬೀನಾ ಹರಿಹಾಯ್ದಿದ್ದಾರೆ.


from India & World News in Kannada | VK Polls https://ift.tt/3i3WKks

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...