ಆ್ಯಪ್ ನಿಷೇಧವೇನೋ ಸರಿ ಆದರೆ ಪಿಎಂ ಕೇರ್ಸ್‌ನಲ್ಲಿರುವ ಚೀನಾ ದುಡ್ಡಿನ ಕತೆ?: ಕಾಂಗ್ರೆಸ್ ಪ್ರಶ್ನೆ!

ನವದೆಹಲಿ: ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಬೆಂಬಲ ಸೂಚಿಸಿರುವ ಪ್ರತಿಪಕ್ಷ , ಚೀನಾಗೆ ಬುದ್ಧಿ ಕಲಿಸುವತ್ತ ಕೇಂದ್ರ ಒಳ್ಳೆಯ ಹೆಜ್ಜೆಯನ್ನಟ್ಟಿದೆ ಎಂದು ಶ್ಲಾಘಿಸಿದೆ. ಆದರೆ ಚೀನಾದ 59 ಆ್ಯಪ್‌ಗಳ ಬಳಕೆ ಮೇಲೆ ನಿಷೇಧ ಹೇರಿರುವುದು ಸರಿಯಾದ ಕ್ರಮವಾದರೂ, ಪಿಎಂ ಕೇರ್ಸ್‌ ನಿಧಿಯಲ್ಲಿ ಇರುವ ಚೀನಾದ ದುಡ್ಡಿನ ಕತೆ ಏನು ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಗಡಿಯಲ್ಲಿ ತಕರಾರು ತೆಗೆದ ಚೀನಾಗೆ 59 ಆ್ಯಪ್‌ಗಳನ್ನು ನಿಷೇಧಿಸುವ ಮೂಲಕ ಕೇಂದ್ರ ಸರ್ಕಾರ ಒಳ್ಳೆಯ ನಿರ್ಧಾರವನ್ನೇ ಕೈಗೊಂಡಿದೆ. ಆದರೆ ಇದೇ ವೇಳೆ ಪಿಎಂ ಕೇರ್ಸ್‌ನಲ್ಲಿರುವ ಚೀನಾದ ದುಡ್ಡಿನ ಭವಷ್ಯವನ್ನೂ ಮೋದಿ ಸರ್ಕಾರ ನಿರ್ಧರಿಸಬೇಕಿದೆ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ. ಆ್ಯಪ್‌ಗಳನ್ನು ನಿಷೇಧಿಸಿರುವ ಕ್ರಮಕ್ಕೆ ದೇಶದಲ್ಲಿ ಭಾರೀ ಜನಬೆಂಬಲ ವ್ಯಕ್ತವಾಗಿದ್ದು, ಪದೇ ಪದೇ ಗಡಿ ತಕರಾರು ತೆಗೆಯುವ ಚೀನಾವನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ಕಠಿಣ ಸಂದೇಶವನ್ನು ರವಾನಿಸಿದಂತಾಗಿದೆ.


from India & World News in Kannada | VK Polls https://ift.tt/3dLYRG2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...