ಮುಂಬಯಿ: ಮಹಾರಾಷ್ಟ್ರ ರಾಜಕೀಯ ಬಿರುಗಾಳಿಯ ಸೂತ್ರಧಾರ ಅವರು ಭಾನುವಾರ ತಮ್ಮ ನಡೆಯನ್ನು ಸಮರ್ಥಿಸಿಕೊಂಡು ಈಗಲೂ ತಾವು ಎನ್‌ಸಿಪಿ ಜತೆ ಇರುವುದಾಗಿ ಸಮರ್ಥನೆ ನೀಡಿದ್ದಾರೆ. ಇದಕ್ಕೆ ಕೂಡಲೇ ತಿರುಗೇಟು ಕೊಟ್ಟಿರುವ ಎನ್‌ಸಿಪಿ ವರಿಷ್ಠ , ಅಜಿತ್ ಸುಳ್ಳು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಎನ್‌ಸಿಪಿ -ಬಿಜೆಪಿ ಮೈತ್ರಿ ಸಾಧ್ಯವಿಲ್ಲ ಎಂದು ಸಂದೇಶ ರವಾನಿಸಿದ್ದಾರೆ. ಚಿಕ್ಕಪ್ಪ ಮತ್ತು ಅಣ್ಣನ ಮಗನ ನಡುವಿನ ರಾಜಕೀಯ ಮೇಲಾಟ ಮಹಾರಾಷ್ಟ್ರದ ಜನರನ್ನು ಪ್ರತಿಕ್ಷಣ ಕುತೂಹಲಕ್ಕೆ ದೂಡುತ್ತಿದೆ. ಅಜಿತ್ ಪವಾರ್ ಹೇಳಿದ್ದೇನು?
- ನಾನು ಎನ್‌ಸಿಪಿ ಶಾಸಕ. ಈಗಲೂ ಎನ್‌ಸಿಪಿಯಲ್ಲಿಯೇ ಇದ್ದೇನೆ.
- ನಮ್ಮ ನಾಯಕರು ಶರದ್ ಪವಾರ್ ಸಾಹೇಬರು.
- ಮುಂದಿನ ಐದು ವರ್ಷಗಳವರೆಗೆ ಎನ್‌ಸಿಪಿ-ಬಿಜೆಪಿ ಮೈತ್ರಿ ಸರಕಾರ ಸ್ಥಿರ ಆಡಳಿತ ನೀಡಲಿದೆ.
- ಕಾರ್ಯಕರ್ತರು, ಜನರು ಆತಂಕಪಡುವ ಅಗತ್ಯವಿಲ್ಲ, ಎಲ್ಲವೂ ಶೀಘ್ರವೇ ಸರಿದಾರಿಗೆ ಬರಲಿದೆ
- ಬಿಜೆಪಿ ಜತೆಗೆ ಮೈತ್ರಿ ಅಸಾಧ್ಯ.
- ಅಜಿತ್ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ.
- ಸರ್ವಾನುಮತದಿಂದ ಎನ್‌ಸಿಪಿ ಶಾಸಕರು ಶಿವಸೇನೆ, ಕಾಂಗ್ರೆಸ್ ಜತೆಹೋಗಲು ನಿರ್ಧರಿಸಿದ್ದೇವೆ.
- ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಬಹುಮತ ಇದೆ. ಸ್ಥಿರ ಸರಕಾರ ನಮ್ಮಿಂದ ಮಾತ್ರ ಸಾಧ್ಯ.
from India & World News in Kannada | VK Polls https://ift.tt/37yHc2W