ನವದೆಹಲಿ: ಭಾರತದ ಯುವಶಕ್ತಿಯ ತಾಕತ್ತು ಅಭೂತಪೂರ್ವವಾದುದು. ತನಗೆ ಏನು ಬೇಕೆಂದು ಸ್ಪಷ್ಟವಾಗಿ ಗೊತ್ತಿರುವ ಯುವ ಭಾರತಕ್ಕೆ ಬೇರೆ ಯಾರ ಮಾರ್ಗದರ್ಶನದ ಅವಶ್ಯಕತೆಯಿಲ್ಲ. ಸಂಸ್ಕೃತಿಯೊಂದಿಗೆ ಅಭಿವೃದ್ಧಿ ಎಂಬ ಮಂತ್ರದಲ್ಲಿ ನಂಬಿಕೆ ಇಟ್ಟಿರುವ ಇಂದಿನ ಯುವ ಪೀಳಿಗೆ, ಭಾರತವನ್ನು ಮತ್ತೆ ವಿಶ್ವಗುರುವನ್ನಾಗಿ ಮಾಡುವ ಪಣ ತೊಟ್ಟಿದೆ. ಅಲ್ಲದೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವೂ ಆಗಿದೆ. ತನ್ನ ಸಾವಿರಾರು ವರ್ಷಗಳ ಪರಂಪರೆಯನ್ನು ಜೊತೆಯಲ್ಲಿಟ್ಟುಕೊಂಡೇ ಆಧುನಿಕ ಜಗತ್ತಿನೊಂದಿಗೆ ಸರಿಸಮಾನವಾಗಿ ನಿಲ್ಲುವ ತಾಕತ್ತು ಭಾರತಕ್ಕಿದೆ. ಇದೇ ಕಾರಣಕ್ಕೆ ವಿಶ್ವಕ್ಕೆ ಈ ಹಿಂದೆಂದಿಗಿಂತಲೂ ಭಾರತದ ಅವಶ್ಯಕತೆ ಎದುರಾಗಿದೆ. ಅದರಂತೆ ಸಾಮಾಜಿಕ ಜಾಲತಾಣದಲ್ಲಿ ಪದ ಬಳಕೆ ಬೇಡ ಎಂಬ ಅಭಿಯಾನ ಶುರುವಾಗಿದ್ದು, ದೇಶವನ್ನು ಎಂಬ ಪುರಾತನ ಹೆಸರಿನಿಂದಲೇ ಅಧಿಕೃತವಾಗಿ ಕರೆಯಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಹೌದು, ದೇಶದ ಅಧಿಕೃತ ಹೆಸರನ್ನು INDIA ಬದಲಾಗಿ ಭಾರತ ಎಂದು ಪರಿಗಣಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯ ಪರ ಸಾಮಾಜಿಕ ಜಾಲತಾಣದಲ್ಲಿ #ByeByeIndiaOnlyBharat ಎಂಬ ಅಭಿಯಾನ ಆರಂಭವಾಗಿದ್ದು, ಸಾವಿರಾರು ಜನ ಈ ಅಭಿಯಾನವನ್ನು ಬೆಂಬಲಿಸಿ ಟ್ವೀಟ್ ಮಾಡುತ್ತಿದ್ದಾರೆ.
from India & World News in Kannada | VK Polls https://ift.tt/3eKoVCD