ಕರುನಾಡ ಕಟ್ಟೋಣ ಬನ್ನಿ ಅಭಿಯಾನಕ್ಕೆ ಬುಧವಾರ ಸಿ ಟಿ ರವಿ ಚಾಲನೆ

ಬೆಂಗಳೂರು: ಕೊರೊನೋತ್ತರ ಕರ್ನಾಟಕದ ಪುನಶ್ಚೇತನದ ಉದ್ದೇಶದಿಂದ ವಿಜಯ ರೂಪಿಸಿರುವ 'ಕರುನಾಡ ಕಟ್ಟೋಣ ಬನ್ನಿ' ಅಭಿಯಾನಕ್ಕೆ ಪ್ರವಾಸೋ­ದ್ಯಮ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ. ರವಿ ಅವರು ಬುಧವಾರ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಪ್ರವಾಸೋದ್ಯಮ ಉತ್ತೇಜನದ ಕುರಿತು ಸಂವಾದ, ಚಿಂತನ-­ಮಂಥನವೂ ನಡೆಧಿಯಲಿದೆ. ಕರ್ನಾ­ಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇ­ಶಕ ಕುಮಾರ್‌ ಪುಷ್ಕರ್‌, ಕರ್ನಾಟಕ ಪ್ರದೇಶ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಸಂಘದ ಅಧ್ಯಕ್ಷ ಚಂದ್ರ­ಶೇಖರ್‌ ಹೆಬ್ಬಾರ್‌, ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್‌, ಕರ್ನಾಟಕ ರಾಜ್ಯ ಟ್ರಾವೆಲ್ಸ್‌ ಆಪರೇಟರ್ಸ್ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ, ಖಾಸಗಿ ಬಸ್‌ ಮಾಲೀಕರ ಸಂಘ ಅಧ್ಯಕ್ಷದ ನಟರಾಜ್‌ ಶರ್ಮಾ ಮತ್ತು ರಾಜ್ಯದ ನಾನಾ ಭಾಗಗಳ ಪ್ರವಾಸೋಧಿದ್ಯಮ ವಲಯದ ಪ್ರತಿನಿಧಿಗಳು ಭಾಗವಹಿಸ­ಲಿದ್ದಾರೆ. ಕೈಗಾರಿಕೆ, ಕೃಷಿ, ಆರೋಗ್ಯ, ಶಿಕ್ಷಣ ಇತ್ಯಾದಿ ಕ್ಷೇತ್ರಗಳ ಪುನ­ಶ್ಚೇತನದ ಕುರಿತೂ ಸಂವಾದ ಸರಣಿ ಮುಂದುವರಿಯಲಿದೆ.


from India & World News in Kannada | VK Polls https://ift.tt/3coskoU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...