"ದೇಶದಲ್ಲಿ ಕೊರೊನಾ ಮಾತ್ರ ಹೆಚ್ಚಾಗ್ತಿಲ್ಲ": ಪೆಟ್ರೋಲ್‌, ಡೀಸೆಲ್‌ ದರ ಏರಿಕೆಗೆ ಕೇಂದ್ರದ ವಿರುದ್ಧ ರಾಹುಲ್‌ ಕಿಡಿ

ಹೊಸದಿಲ್ಲಿ: ಪ್ರಧಾನಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವೀಟಾಸ್ತ್ರ ಮುಂದುವರಿಸಿದ್ದಾರೆ. ಈ ಬಾರಿ ಏರುತ್ತಿರುವ ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ಕೊರೊನಾ ವೈರಸ್‌ನ ವೇಗಕ್ಕೆ ಸಮೀಕರಿಸಿ ಕೇಂದ್ರ ಸರಕಾರದ ವಿರುದ್ಧ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ. ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, ದೇಶದಲ್ಲಿ ಕೇವಲ ಮಾತ್ರ ಏರುತ್ತಿಲ್ಲ ಜೊತೆಗೆ ಪೆಟ್ರೋಲ್‌, ಡೀಸೆಲ್‌ ಬೆಲೆಯೂ ಕೂಡ ಏರುಗತಿಯಲ್ಲಿ ಸಾಗುತ್ತಿದೆ ಎಂದು ಕೇಂದ್ರದ ಆಡಳಿತವನ್ನು ಟೀಕಿಸಿದ್ದಾರೆ. ಜೊತೆಗೆ ಗ್ರಾಫ್‌ ಒಂದನ್ನು ಟ್ವೀಟ್‌ ಮಾಡಿ ಹೇಗೆ ಕೊರೊನಾ ವೈರಸ್‌ ಜೊತೆ ಪೆಟ್ರೋಲ್‌, ಡೀಸೆಲ್‌ ದರ ಏರುವ ಬಗೆಯನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಮೇ 25 ರಿಂದ ಜೂನ್‌ 24ರವರಗೆ ಒಂದು ತಿಂಗಳ ಅವಧಿಯಲ್ಲಿ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ, ಪೆಟ್ರೋಲ್‌ ಹಾಗೂ ಡೀಸೆಲ್‌ ದರದ ಏರಿಕೆಯನ್ನು ಗ್ರಾಫ್‌ನಲ್ಲಿ ನಮೂದಿಸಲಾಗಿದೆ. ಮೇ 25 ರಿಂದ ಜೂನ್‌ 6 ರವರೆಗೆ 69 ರೂ. ಆಸುಪಾಸಿನಲ್ಲಿದ್ದ ಡೀಸೆಲ್‌ ದರ ನಿರಂತರವಾಗಿ ಏರಿದ್ದು, ಈಗ 80 ರೂ. ಸಮೀಪ ಬಂದು ನಿಂತಿದೆ. ಇನ್ನು, ಪೆಟ್ರೋಲ್‌ ದರವೂ ಕೂಡ ಜೂನ್‌ 6 ರಿಂದ ಸತತವಾಗಿ ಏರಿಕೆ ಕಂಡಿದ್ದು, 80 ರೂ. ಸಮೀಪ ಇದೆ. ಸತತ 18 ದಿನಗಳಿಂದ ತೈಲ ದರವನ್ನು ಕಂಪನಿಗಳು ಏರಿಸುತ್ತಿರುವುದು ವಾಹನ ಸವಾರರ ಜೇಬಿಗೆ ಹೊರೆಯಾಗಿದೆ. ಕಾರಣದಿಂದ ದೇಶದ ಶೇ.60ರಷ್ಟು ಲಾರಿಗಳು ರಸ್ತೆಗಿಳಿಯುತ್ತಿಲ್ಲ. ಇನ್ನು, ದೆಹಲಿಯಲ್ಲೊ ಪೆಟ್ರೋಲ್‌ ದರಕ್ಕಿಂತ ಡೀಸೆಲ್‌ ದರ ಹೆಚ್ಚಾಗಿದೆ. ಕೊರೊನಾ ವೈರಸ್‌ ಪ್ರಕರಣಗಳು ಸಹ ದೇಶದಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಲಾಕ್‌ಡೌನ್‌ ಸಡಿಲಿಕೆಗೂ ಮುಂಚೆ ಅಂದರೆ ಜೂನ್‌ 1ಕ್ಕೂ ಮುನ್ನ ದಿನನಿತ್ಯ 6 ಸಾವಿರದಿಂದ 7 ಸಾವಿರ ಕೇಸ್‌ಗಳು ಪತ್ತೆಯಾಗುತ್ತಿತ್ತು. ಆದರೆ, ಜೂನ್‌ 1ರ ನಂತರ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೆ ಇದೆ. ಈಗ ಪ್ರತಿ ದಿನ ದಾಖಲಾಗುವ ಪಾಸಿಟಿವ್‌ ಸಂಖ್ಯೆಗಳ ಸಂಖ್ಯೆ 15 ಸಾವಿರ ಸಮೀಪ ಬಂದಿದ್ದು, ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಿದೆ ಎಂದು ಗ್ರಾಫ್‌ನಲ್ಲಿ ವಿವರಿಸಿದ್ದಾರೆ. ಇನ್ನು, ಕಳೆದ ಕೆಲವು ದಿನಗಳಿಂದ ಭಾರತ - ಚೀನಾ ಸಂಘರ್ಷದ ವಿಚಾರವಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್‌ ವಾಗ್ದಾಳಿ ನಡೆಸಿದ್ದರು. ಬಿಕ್ಕಟ್ಟಿನ ಸಮಯದಲ್ಲೂ ಮೋದಿ ಅವರನ್ನು ಚೀನಾ ಹೊಗಳುತ್ತಿರುವುದು ಏಕೆ..? ಶಸ್ತ್ರಾಸ್ತ್ರಗಳಿಲ್ಲದೇ ಸೈನಿಕರನ್ನು ಗಡಿಯಲ್ಲಿ ಕಳುಹಿಸಿದ್ದು ಯಾರು..? ಘಟನೆಗೆ ಜವಾಬ್ದಾರರು ಯಾರು..? ಎಂದು ನಿರಂತರ ಪ್ರಶ್ನೆಗಳ ಸುರಿಮಳೆಗೈದಿದ್ದರು.


from India & World News in Kannada | VK Polls https://ift.tt/3g4NpHt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...