ಇಂದು 200 ರೈಲುಗಳ ಸಂಚಾರ ಆರಂಭ: ಹೇಗಿದೆ ಹಳಿಗಳ ಮೇಲಿನ ಪ್ರಯಾಣ?

ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಹೇರಲಾಗಿದ್ದ ಸರಣಿ ಲಾಕ್‌ಡೌನ್ ಪರಿಣಾಮವಾಗಿ ದೇಶದಾದ್ಯಂತ ಸ್ಥಗಿತಗೊಂಡಿತ್ತು. ಇದೀಗ ಹಂತ ಹಂತವಾಗಿ ರೈಲು ಸೇವೆ ಪುನರಾರಂಭಗೊಳ್ಳುತ್ತಿದ್ದು, ಇಂದು ದೇಶದಾದ್ಯಂತ ಸುಮಾರು 200 ರೈಲುಗಳು ಸೇವೆ ಆರಂಭಿಸಿವೆ. ಇವುಗಳಲ್ಲಿ 15 ವಿಶೇಷ ರೈಲುಗಳೂ ಸೇರಿವೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ರೈಲು ಸಂಚಾರ ಆರಂಭಗೊಂಡಿದ್ದು, ಸಾಮಾಜಿಕ ಅಂತರದ ನಿಯಮವನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ಇಂದಿನ ರೈಲು ಸಂಚಾರದತ್ತ ಗಮನಹರಿಸಿದರೆ... ಅದರಂತೆ ಬೆಂಗಳೂರಿನ ರೈಲು ನಿಲ್ದಾಣದಿಂದ ಜನ್‌ಶತಾಬ್ಧಿ ರೈಲು ಹುಬ್ಬಳಿಯತ್ತ ಪ್ರಯಾಣ ಬೆಳೆಸಿದೆ. ಅದರಂತೆ ಮುಂಬೈನ ಛತ್ರಪತಿ ಶಿಬಾಜಿ ಮಹಾರಾಜ್ ರೈಲು ನಿಲ್ದಾಣದಿಂದಲೂ ದೇಶದ ವಿವಿಧ ಭಾಗಗಳಿಗೆ ರೈಲು ಸಂಚಾರ ಆರಂಭಗೊಂಡಿದೆ. ಇನ್ನು ತಮಿಳುನಾಡಿನ ಸೇಲಂನಿಂದಲೂ ಎರಡು ರೈಲುಗಳು ಬೇರೆ ಬೇರೆ ಪ್ರದೇಶಗಳಿಗೆ ಪ್ರಯಾಣ ಬೆಳೆಸಿದ್ದು, ನಿಲ್ದಾಣದಲ್ಲಿ ಸಾಮಾಜಿಕ ಅಂತರದ ನಿಯಮವನ್ನು ಕಡ್ಡಾಯವಾಗಿ ಪಾಲಿಸಿದ್ದು ಕಂಡುಬಂದಿತು. ಅದರಂತೆ ಕೇರಳ, ಉತ್ತರಪ್ರದೇಶ, ಆಂಧ್ರ ಹೀಗೆ ದೇಶದ ಎಲ್ಲಾ ರಾಜ್ಯಗಳಲ್ಲಿ ಪ್ರಮುಖ ರೈಲು ಸಂಚಾರ ಪುನರಾರಂಭಗೊಂಡಿದ್ದು, ಮೊದಲ ಹಂತದ ಭಾಗವಾಗಿ ಸುಮಾರು 200 ರೈಲುಗಳ ಓಡಾಟಕ್ಕೆ ಮುನ್ನುಡಿ ಬರೆಯಲಾಗಿದೆ.


from India & World News in Kannada | VK Polls https://ift.tt/3gHA20Q

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...