ನವದೆಹಲಿ: ಲಡಾಖ್ ಭಾರತ-ಚೀನಾ ಸೈನಿಕರ ನಡುವೆ ಸಂಭವಿಸಿರುವ ಭೀಕರ ಘರ್ಷಣೆ, ಹೆಚ್ಚು ಕಡಿಮೆ ಯುದ್ಧದ ಸನ್ನಿವೇಶವನ್ನು ನಿರ್ಮಾಣ ಮಾಡಿದೆ. ಹಿಂಸಾತ್ಮಕ ಘರ್ಷಣೆಯಿಂದ ಉಂಟಾಗಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆಯಾದರೂ, ಉಭಯ ಸೇನೆಗಳೂ ಸರ್ವ ಸನ್ನದ್ಧ ಸ್ಥಿತಿಯಲ್ಲಿ ಇರುವುದು ಕಂಡುಬರುತ್ತಿದೆ. ಪ್ರಮುಖವಾಗಿ ಗಡಿ ಸುರಕ್ಷತೆಯ ತನ್ನ ನೀತಿಯಲ್ಲೇ ಬದಲಾವಣೆ ತಂದಿರುವ , ಇನ್ಮುಂದೆ ಚೀನಾದ ಅತಿಕ್ರಮಣ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಆದರೆ ಸದ್ಯ ನಿರ್ಮಾಣವಾಗಿರುವ ಯುದ್ಧದ ಸನ್ನಿವೇಶವನ್ನು ಸಮರ್ಥವಾಗಿ ನಿಭಾಯಿಸುವುದು ಭಾರತೀಯ ಸೇನೆಯ ಆದ್ಯತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಗಡಿ ಬೆಳವಣಿಗೆಗಳ 10 ಪ್ರಮುಖ ಅಂಶಗಳನ್ನು ಗಮನಿಸುವುದಾದರೆ.. 1. ಭೀಕರ ಹಿಂಸಾತ್ಮಕ ಘರ್ಷಣೆ ಬಳಿಕ ಗಡಿಯಲ್ಲಿ ಉಭಯ ಸೇನೆಗಳೂ ಸರ್ವ ಸನ್ನದ್ಧ ಸ್ಥಿತಿಯಲ್ಲಿವೆ. ಉನ್ನತ ಸೇನಾಧಿಕಾರಿಗಳ ನಡುವೆ ಶಾಂತಿ ಮಾತುಕತೆ ನಡೆಯುತ್ತಿದೆಯಾದರೂ, ಅಪಾಯದ ಪರಿಸ್ಥಿತಿ ಎದುರಿಸಲು ಸೇನೆ ಸಜ್ಜಾಗಿ ಕುಳಿತಿವೆ. 2. ಗಡಿಯಲ್ಲಿ ಚೀನಿ ಸೈನಿಕರ ಅತಿಕ್ರಮಣವನ್ನು ತಡೆಗಟ್ಟಲು ತನ್ನ ಗಡಿ ಸುರಕ್ಷತಾ ನೀತಿಯಲ್ಲಿ ಬದಲಾವಣೆ ತಂದಿರುವ ಭಾರತೀಯ ಸೇನೆ, ಇನ್ಮುಂದೆ ಚೀನಿ ಅತಿಕ್ರಮಣವನ್ನು ಸಹಿಸದಿರುವ ನಿರ್ಧಾರ ಕೈಗೊಂಡಿದೆ. 3. ಸುಮಾರು 3,800 ಕಿ.ಮೀ. ಉದ್ದದ ವಾಸ್ತವಿಕ ಗಡಿ ನಿಯಂತ್ರಣ ರೇಖೆ(LAC)ಯಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಲು ಮುಂದಾಗಿರುವ ಭಾರತೀಯ ಸೇನೆ, ಚೀನಿ ಸೈನಿಕರ ಚಲನವಲನಗಳ ಮೇಲೆ ತಪ್ಪದೇ ನಿಗಾ ಇರಿಸುವ ನಿರ್ಧಾರ ಕೈಗೊಂಡಿದೆ. 4. ಶಾಂತಿ ಮಾತುಕತೆ ಹೆಸರಲ್ಲಿ ಗಡಿಯಿಂದ ಸೈನ್ಯವನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಭಾರತೀಯ ಸೇನೆ, ಇಷ್ಟು ವರ್ಷಗಳ ಕಾಲ ಚೀನಿ ಅತಿಕ್ರಮಣವನ್ನು ಸಹಿಸಿಕೊಂಡಿದ್ದು ಸಾಕು ಎಂದು ಬಹಿರಂಗವಾಗಿಯೇ ಘೋಷಿಸಿದೆ. 5. ವರ್ಷದ 365 ದಿನಗಳ ಕಾಲವೂ ಗಡಿಯಲ್ಲಿ ಹೆಚ್ಚಿನ ಭದ್ರತೆಗೆ ಒತ್ತು ನೀಡಿಲಾಗುವುದು ಎಂದು ಹೇಳಿರುವ ಸೇನಾ ಮೂಲಗಳು, ಇನ್ಮುಂದೆ ಚೀನಾಗೆ ಅದರದ್ದೇ ಆದ ಭಾಷೆಯಲ್ಲಿ ಉತ್ತರಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. 6. ಗಡಿ ಅತಿಕ್ರಮಣ ಮಾಡಿ ಆ ಬಳಿಕ ಶಾಂತಿ ಮಾತುಕತೆಯ ನಾಟಕವಾಡುವ ಚೀನಾದ PLA ಸೇನೆಯ ಆಟ ಇನ್ಮುಂದೆ ನಡೆಯುವುದಿಲ್ಲ ಎಂದು ಉನ್ನತ ಸೇನಾಧಿಕಾರಿಗಳು ವಾಗ್ದಾನ ನೀಡಿದ್ದಾರೆ. 7. ಗಡಿಯಲ್ಲಿರುವ ಮುಂಚೂಣಿ ನೆಲೆಗಳಿಗೆ ಶಸ್ತ್ರಗಳನ್ನು ಕೊಂಡೊಯ್ಯದಿರುವ ಈ ಹಿಂದಿನ ರಣನೀತಿಯನ್ನು ಸಂಪೂರ್ಣವಾಗಿ ಕೈಬಿಡಲಾಗುವುದು ಎಂದು ಸೇನೆ ಸ್ಪಷ್ಟಪಡಿಸಿದೆ. ಇನ್ಮುಂದೆ ಸೈನಿಕರಿಗೆ ಶಸ್ತ್ರಗಳನ್ನು ನೀಡುವ ನಿರ್ಧಾರಕ್ಕೆ ಬರಲಾಗಿದೆ. 8. ಗಡಿಯಲ್ಲಿ ಚೀನಿ ಸೈನಿಕರ ಅಕ್ರಮ ಪ್ರವೇಶದ ಉದಾಹರಣೆಗಳು:
- 2016: 296 ಬಾರಿ
- 2017: 473 ಬಾರಿ
- 2018: 404 ಬಾರಿ
- 2019: 663 ಬಾರಿ
from India & World News in Kannada | VK Polls https://ift.tt/3fysThP