ಭಾರತಕ್ಕೆ ಚಾರಿತ್ರಿಕ ಸರಣಿ ಗೆಲುವು; ಕ್ಯಾಪ್ಟನ್ ಕೊಹ್ಲಿಗೆ ಅತಿ ಹೆಚ್ಚು ಖುಷಿ ಕೊಟ್ಟ ವಿಷಯವೇನು?

ಮೌಂಟ್ ಮಾಂಗನುಯಿ: ನ್ಯೂಜಿಲೆಂಡ್ ವಿರುದ್ಧ ನಡೆದ ಅಂತಿಮ ಟಿ20 ಪಂದ್ಯದಿಂದ ನಾಯಕ ವಿಶ್ರಾಂತಿ ಪಡೆದಿದ್ದರು. ಆದರೂ ಕೊನೆಯ ಪಂದ್ಯದಲ್ಲೂ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಐದು ಪಂದ್ಯಗಳ ಟಿ20 ಸರಣಿಯನ್ನು 5-0 ಅಂತರದಲ್ಲಿ ವೈಟ್‌ವಾಶ್‌ಗೈದಿದೆ. ಈ ಮೂಲಕ ಟ20 ಸರಣಿಯಲ್ಲಿ 5-0 ಅಂತರದಲ್ಲಿ ಸರಣಿ ಗೆದ್ದ ವಿಶ್ವದ ಮೊದಲ ತಂಡವೆಂಬ ಹಿರಿಮೆಗೆ ಭಾಜನವಾಗಿದೆ. ಇದುವೇ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಅತಿ ಹೆಚ್ಚು ಸಂತಸವನ್ನುಂಟು ಮಾಡಿದೆ. ಖಾಯಂ ನಾಯಕ ವಿರಾಟ್ ಕೊಹ್ಲಿ ಹಾಗೂ ಹಂಗಾಮಿ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲೂ ಭರ್ಜರಿ ಫೈಟ್ ಬ್ಯಾಕ್ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಅಂತಿಮ ಟಿ20 ಪಂದ್ಯದಲ್ಲೂ ಗೆಲುವು ಬಾರಿಸಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, "ಪ್ರತಿಯೊಬ್ಬ ಆಟಗಾರನು ತಮ್ಮ ಶ್ರೇಷ್ಠ ಪ್ರದರ್ಶನವನ್ನು ಹೊರತರಲು ಬಯಸುವುದಾಗಿ ತಿಳಿಸಿದರು. ಇವೆಲ್ಲವೂ ಹುಡುಗರ ಮುಂದೆ ನೀವು ಹೇಗೆ ಯೋಚಿಸುತ್ತೀರಿ ಹಾಗೂ ಹೇಗೆ ಸಜ್ಜಾಗುತ್ತೀರಿ ಎಂಬುದರ ಬಗ್ಗೆ ವಿಷನ್ ಸೃಷ್ಟಿಸುವುದಾಗಿದೆ. ಆಟಗಾರರು ಇದರ ಬಗ್ಗೆ ಗಮನ ಹರಿಸುತ್ತಿದ್ದು, ಪ್ರತಿ ಬಾರಿಯೂ ಶೇಕಡಾ 120ರಷ್ಟು ಅರ್ಪಣಾ ಮನೋಭಾವದ ಅಗತ್ಯವಿದೆ ಎಂಬುದನ್ನು ಮನಗಂಡಿದ್ದಾರೆ" ಎಂದು ವಿವರಿಸಿದರು. "ಹಾಗೆ ಆದಲ್ಲಿ ಮಾತ್ರ ವಿಜಯ ದಾಖಲಿಸಲು ಹಾದಿ ಹುಡುಕಬಹುದಾಗಿದೆ. ಇಂತಹ ಆಲೋಚನೆಯು ಕಳೆದೆರಡು ವರ್ಷಗಳಲ್ಲಿ ಮಹತ್ತರ ಬದಲಾವಣೆಯನ್ನು ತಂದಿದೆ. ಇದೀಗ ಫಲಿತಾಂಶವನ್ನು ನೋಡಿದ್ದೇವೆ. ಖಂಡಿತವಾಗಿಯೂ ಪ್ರತಿ ಬಾರಿಯೂ ಗೆಲ್ಲಲಾರೆವು. ಆದರೂ ಒನ್ ಸೈಡಡ್ ಗೆಲುವುಗಿಂತಲೂ ಇಂತಹ ಗೆಲುವುಗಳು ತುಂಬಾನೆ ಕುಷಿ ಕೊಡುತ್ತಿದೆ" ಎಂದರು. ಅಂತಿಮ ಟಿ20 ಪಂದ್ಯದಿಂದ ನಾಯಕ ವಿರಾಟ್ ಕೊಹ್ಲಿ ಹೊರಗುಳಿದಿದ್ದರು. ಹಂಗಾಮಿ ನಾಯಕ ರೋಹಿತ್ ಶರ್ಮಾ ಗಾಯದಿಂದಾಗಿ ಅರ್ಧದಿಂದಲೇ ನಿವೃತ್ತಿ ಪಡೆಯಬೇಕಾಯಿತು. ಈ ಸಂದರ್ಭದಲ್ಲಿ ನಾಯಕತ್ವದ ಸಂಪೂರ್ಣ ಜವಾಬ್ದಾರಿಯನ್ನು ಕೆಎಲ್ ರಾಹುಲ್ ವಹಿಸಬೇಕಾಯಿತು. ಇದೀಗ ರಾಹುಲ್ ನಾಯಕತ್ವ ಹಾಗೂ ಆಟಗಾರರ ಮನೋಭಾವವನ್ನು ನಾಯಕ ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ. "ಆಟಗಾರರು ಆಡಿದ ರೀತಿಗೆ ಎಲ್ಲರಿಗೂ ಹೆಮ್ಮೆಯಿದೆ. ಇವೆಲ್ಲವೂ ಗೆಲುವಿಗೆ ಹಾದಿ ಹುಡುಕುವುದಾಗಿದೆ. ದುರದಷ್ಟವಶಾತ್ ರೋಹಿತ್ ಶರ್ಮಾ ಗಾಯಾಳುವಾದ ಬಳಿಕ ಈ ಎಲ್ಲ ಆಟಗಾರರು ಜೊತೆಯಾಗಿ ನಿಂತು ಒತ್ತಡವನ್ನು ನಿಭಾಯಿಸಿರುವುದು ಹೊರಗಿನಿಂದು ವೀಕ್ಷಿಸಲು ತುಂಬಾನೇ ಸಂತಸ ತಂದಿದೆ. ಮುಂದಿನ ವರ್ಷಗಳಲ್ಲೂ ಇದೇ ಮನೋಭಾವವನ್ನು ಮುಂದುವರಿಸಲು ಬಯಸುತ್ತೇವೆ" ಎಂದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2OnoHqb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...