ರಾಜಸ್ಥಾನದಲ್ಲಿ ನದಿಗೆ ಬಸ್‌ ಉರುಳಿ 24 ಜನ ಸಾವು, ಮದುವೆಗೆ ಹೋಗುತ್ತಿದ್ದವರು ಮಸಣಕ್ಕೆ

ಬುಂದಿ (): ಮದುವೆ ದಿಬ್ಬಣಕ್ಕೆ ಹೊರಟಿದ್ದ ಬಸ್‌ ಚಾಲಕನ ನಿಯಂತ್ರಣ ತಪ್ಪಿ ನದಿಗುರುಳಿ 24 ಜನ ಮೃತಪಟ್ಟ ಘಟನೆ ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ ನಡೆದ ಅವಘಡದಲ್ಲಿ 5 ಜನ ಗಾಯಗೊಂಡಿದ್ದಾರೆ. ಬಸ್‌ನಲ್ಲಿ 30 ಜನ ಇದ್ದರೆಂದು ಹೇಳಲಾಗುತ್ತಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಇತ್ತೀಚಿನ ಮಾಹಿತಿ ಪ್ರಕಾರ ಬಸ್‌ ಕೋಟಾದಿಂದ ಸವಾಯ್‌ಮಾದೋಪುರ್‌ಗೆ ತೆರಳುತ್ತಿತ್ತು ಎನ್ನಲಾಗಿದೆ. ಪಾಪಡಿ ಎಂಬ ಹಳ್ಳಿ ಬಳಿ ಮೇಜ್‌ ನದಿಯ ಸೇತುವೆ ಮೇಲಿಂದ ಬಸ್‌ ಉರುಳಿದೆ. ಮದುವೆ ದಿಬ್ಬಣಕ್ಕೆ ಸಾಗುತ್ತಿದ್ದ ಬಸ್‌ನಲ್ಲಿ 30 ಜನ ಇದ್ದರೆಂದು ಹೇಳಲಾಗ್ತಿದೆ. ಪ್ರತ್ಯಕ್ಷದರ್ಶಿಯ ಹೇಳಿಕೆಯಂತೆ ಬಸ್‌ ಬಹಳ ವೇಗವಾಗಿ ಬಂದಿದ್ದರಿಂದ ಈ ಸಂಭವಿಸಿದೆ ಎನ್ನಲಾಗಿದೆ. ಮೇಜ್‌ ನದಿಯ ಸೇತುವೆ ಮೇಲೆ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್‌ ನದಿಗೆ ಉರುಳಿದೆ. ಸ್ಥಳೀಯರು ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲು ಪ್ರಯತ್ನಪಟ್ಟಿದ್ದಾರೆ. ಆದರೆ, ಹೆಚ್ಚಿನವರನ್ನು ರಕ್ಷಿಸಲಾಗಿಲ್ಲ. ಪೊಲೀಸ್‌ ಮತ್ತು ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಇನ್ನು, ಘಟನೆ ಬಗ್ಗೆ, ರಾಜಸ್ಥಾನ್‌ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಟ್ವೀಟ್‌ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಬುಂದಿ ಬಳಿ ಮೇಜ್‌ ನದಿಗೆ ಬಸ್‌ ಉರುಳಿ ಬಿದ್ದು 24 ಜನ ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನನ್ನ ಸಂತಾಪ ಸೂಚಿಸುತ್ತಿದ್ದೇನೆ. ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/2SYM8IY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...