ಸಾವು ಬದುಕಿನ ನಡುವೆ ಹೋರಾಡುತ್ತಿರುವ ಆರು ಮುಸ್ಲಿಮರ ಪ್ರಾಣ ಕಾಪಾಡಿದ ಹಿಂದು!

ಹೊಸದಿಲ್ಲಿ: ಪರ ಮತ್ತು ವಿರೋಧಿ ಗುಂಪುಗಳ ನಡುವಣ ಸಂಘರ್ಷ ಹಿಂಸಾಚಾರಕ್ಕೆ ತಿರುಗಿದ ಸಂದರ್ಭ ಸಂಕಷ್ಟದಲ್ಲಿದ್ದ ಆರು ಮಂದಿ ಮುಸ್ಲಿಮರ ಪ್ರಾಣವನ್ನು ಕಾಪಾಡಿದ ಹಿಂದು ವ್ಯಕ್ತಿಯೊಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ದಿಲ್ಲಿಯಲ್ಲಿ ಮುಸ್ಲಿಮರ ಮನೆ ಮತ್ತು ಅಂಗಡಿಗಳ ಮೇಲೆ ದಾಳಿ ನಡಿಸಿದ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ನಿರಾಶ್ರಿತ ಮುಸ್ಲಿಮರಿಗೆ ಸಿಖ್‌ ನಿವಾಸಿಗಳು, ಸ್ಥಳೀಯ ಹಿಂದುಗಳ ತಕ್ಷಣ ನೆರವಿಗೆ ಧಾವಿಸಿದರು. ತಮ್ಮ ಮನೆಗಳಲ್ಲಿ, ಗುರುದ್ವಾರಗಳಲ್ಲಿ ಆಶ್ರಯ ನೀಡುವ ಮೂಲಕ ಕೋಮು ಸೌಹಾರ್ದತೆಯನ್ನು ಮೆರೆದರು. ಇದೇ ಸಂದರ್ಭ ಅಪಾಯದಲ್ಲಿದ್ದ 6 ಮಂದಿ ಮುಸ್ಲಿಮರ ಪ್ರಾಣವನ್ನು ಕಾಪಾಡಿದ ಶಿವ್ ವಿಹಾರ್‌ನ ಪ್ರೇಮಕಾಂತ್‌ ಬಾಘಲ್‌ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಶಿವ್‌ ವಿಹಾರ್‌ನಲ್ಲಿ ನೆರೆಯ ಮುಸ್ಲಿಂ ನಿವಾಸಿಗಳ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಕುಟುಂಬ ಮನೆಯೊಳಗೆ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ದೌಡಾಯಿಸಿದ ಪ್ರೇಮಕಾಂತ್‌ ಬಾಘಲ್‌, ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಆರು ಮಂದಿಯ ಜೀವವನ್ನು ಉಳಿಸಿದ್ದಾರೆ. ಈ ಸಂದರ್ಭ ಮನೆಯೊಳಗೆ ಸಿಕ್ಕಿಬಿದ್ದಿದ್ದ ವಯಸ್ಸಾದ ಮಹಿಳೆಯರನ್ನು ಕಾಪಾಡುವಾಗ ಬಾಘಲ್‌ಗೆ ಗಂಭೀರ ಸುಟ್ಟಗಾಯಗಳಾಗಿವೆ. ಸುಟ್ಟ ಗಾಯಗಳ ನೋವಿನಿಂದ ನರಳುತ್ತಿದ್ದ ಬಾಘಲ್‌ನನ್ನು ಆಸ್ಪತ್ರೆಗೆ ದಾಖಲಿಸಲು ಯಾರೊಬ್ಬರು ವಾಹನದ ನೆರವು ಒದಗಿಸಿಲ್ಲ. ಸ್ಥಳೀಯರು ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಹೇಳಿದರೂ ಯಾವುದೇ ವೈದ್ಯಕೀಯ ವಾಹನ ಬರಲಿಲ್ಲ. ಕೊನೆಗೆ ಬಾಘಲ್‌ ಇಡೀ ರಾತ್ರಿ ಶೇ.70ರಷ್ಟು ಸುಟ್ಟಗಾಯಗಳೊಂದಿಗೆ ಮನೆಯಲ್ಲೇ ಕಳೆದಿದ್ದಾರೆ. ಸ್ಥಳೀಯರು ಮತ್ತು ಸ್ನೇಹಿತರು ಬಾಘಲ್‌ ಬದುಕುಳಿಯುವ ಬಗ್ಗೆ ನಿರೀಕ್ಷೆಗಳನ್ನೇ ಕಳೆದುಕೊಂಡಿದ್ದಾರೆ. ಮರುದಿನ ಬೆಳಗ್ಗೆ ಜಿಟಿಬಿ ಆಸ್ಪತ್ರೆಗೆ ಬಾಘಲ್‌ನನ್ನು ದಾಖಲಿಸಲಾಗಿದೆ. ಸಾವಿನ ದವಡೆಯಲ್ಲಿದ್ದರೂ ಆರು ಮಂದಿಯ ಪ್ರಾಣವನ್ನು ಕಾಪಾಡಿದೆ ಎಂಬ ಹೆಮ್ಮೆಯ ಸಂತೋಷ ಬಾಘಲ್‌ ಅವರಿಗಿದೆ. ವೈದ್ಯಕೀಯ ಮಿರಾಕಲ್‌ ನಡೆಯಲಿ, ಬಾಘಲ್‌ ಬದುಕಲಿ, ಧರ್ಮ-ಧರ್ಮಗಳ ನಡುವೆ ಸೌಹರ್ದತೆಯ ಸಂದೇಶ ಸಾರುವ ಇಂತಹ ವ್ಯಕ್ತಿಗಳು ಹೆಚ್ಚಲಿ ಎಂಬುದು ಎಲ್ಲರ ಆಶಯವಾಗಿದೆ.


from India & World News in Kannada | VK Polls https://ift.tt/2PxuhXB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...