'ಅನುರಾಗ್‌ ಮಿಶ್ರಾ' ಶಾರೂಖ್‌ ಆಗಿಲ್ಲ, ಗುಂಡು ಹಾರಿಸಿದ ಆರೋಪಿ ಶಾರೂಖ್ ಶಾರೂಖ್ಖೇ!

ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿ ಪರ ಮತ್ತು ಸಿಎಎ ವಿರೋಧಿ ಬಣಗಳ ನಡುವೆ ಭುಗಿಲೆದ್ದ ಸಂಘರ್ಷ ಹಿಂಸಾಚಾರಕ್ಕೆ ತಿರುಗಿದ್ದು, ಇದೇ ಸಂದರ್ಭ, ಫೆಬ್ರವರಿ 24, 2020ರಂದು ದಿಲ್ಲಿಯ ಜಫ್ರಬಾದ್‌ ಪ್ರದೇಶದಲ್ಲಿ ರಕ್ಷಣಾ ಸಿಬ್ಬಂದಿಯತ್ತ ವ್ಯಕ್ತಿಯೊಬ್ಬ ಪಿಸ್ತೂಲ್‌ ತೋರಿಸಿದ್ದ. ನಂತರ ಹಲವು ಸುತ್ತು ಗುಂಡುಗಳನ್ನು ಹಾರಿಸಿದ್ದ. ನಂತರ ಆತನನ್ನು ಮೊಹಮ್ಮದ್‌ ಶಾರೂಖ್‌ ಎಂದು ಗುರುತಿಸಿ, ಬಂಧಿಸಲಾಗಿತ್ತು. ಸಾಮಾಜಿಕ ತಾಣಗಳಲ್ಲಿ ಗನ್‌ ಹಿಡಿದ ಶಾರೂಖ್‌ ಫೋಟೋಗಳು ವೈರಲ್‌ ಆಗಿದ್ದವು. ಇದೇ ಸಂದರ್ಭ 'ಅನುರಾಗ್‌ ಮಿಶ್ರಾ' ಎಂಬ ವ್ಯಕ್ತಿಯ ಫೋಟೊಗಳು ವೈರಲ್‌ ಆಗಿದ್ದವು. 'ಅಸಲಿಗೆ ಗನ್‌ ಹಿಡಿದಿದ್ದ ವ್ಯಕ್ತಿ ಶಾರೂಖ್‌ ಅಲ್ಲ, ಅನುರಾಗ್‌ ಮಿಶ್ರಾ' ಎಂದು ಬಿಂಬಿಸಲಾಗಿತ್ತು. ''ಅನುರಾಗ್‌ ಮಿಶ್ರಾನನ್ನು ಶಾರೂಖ್‌ ಆಗಿ ಬಿಂಬಿಸಲಾಗಿದೆ. ದಿಲ್ಲಿ ಪೊಲೀಸ್‌ ಮತ್ತು ಮಾಧ್ಯಮ ಹೇಗೆ ಇಸ್ಲಾಂ ವಿರೋಧಿಯಾಗಿದೆ ನೋಡಿ. ಎಂಥ ಪ್ರೊಪಗಾಂಡವಿದು!'' ಎಂಬ ಬರಹವಿರುವ ಹಿಂದಿ ಪೋಸ್ಟ್‌ನಲ್ಲಿ ಅನುರಾಗ್‌ ಡಿ ಮಿಶ್ರಾ ಅವರ ಇತರ ಫೋಟೊಗಳನ್ನು ಹಾಕಿದ್ದಾರೆ. ವಾಟ್ಸ್‌ಆ್ಯಪ್‌, ಟ್ವೀಟರ್‌ ಮತ್ತಿತರ ಸಾಮಾಜಿಕ ತಾಣಗಳಲ್ಲಿ ಗನ್‌ ಹಿಡಿದಾತ ಅನುರಾಗ್‌ ಮಿಶ್ರಾ ಎಂಬು ಬಿಂಬಿಸಿದ ಪೋಸ್ಟ್‌ಗಳು ಹರಿದಾಡಿದ್ದವು. ವಾಸ್ತವವೇನು? ದಿಲ್ಲಿಯ ಜಫ್ರಬಾದ್‌ ಪ್ರದೇಶದಲ್ಲಿ ನಡೆದ ಹಿಂಸಾಚಾರದ ವೇಳೆ ಗನ್‌ ತೋರಿಸಿ, ಹಲವು ಸುತ್ತು ಗುಂಡು ಹಾರಿಸಿದ್ದು ಮೊಹಮ್ಮದ್‌ ಶಾರೂಖ್‌ ಎಂದು ದಿಲ್ಲಿ ಪೊಲೀಸರು ಸ್ಪಷ್ಟ ಪಡಿಸಿದ್ದಾರೆ. ಅನುರಾಗ್‌ ಡಿ ಮಿಶ್ರಾ ಮುಂಬಯಿ ನಿವಾಸಿಯಾಗಿದ್ದು, ಬಾಲಿವುಡ್‌ ನಟರಾಗಿದ್ದಾರೆ. ಟೈಮ್ಸ್‌ ಫ್ಯಾಕ್ಟ್‌ ಚೆಕ್‌ ತಂಡ ಮಿಶ್ರಾ ಅವರನ್ನು ಸಂಪರ್ಕಿಸಿ ಘಟನೆ ಕುರಿತು ಸ್ಪಷ್ಟನೆ ಕೇಳಿದಾಗ, ''ಶಾರೂಖ್‌ ಎಂದು ಬಿಂಬಿಸಿ ನನ್ನ ಚಿತ್ರಗಳು ವೈರಲ್‌ ಆಗಿರುವ ಬಗ್ಗೆ ಸ್ನೇಹಿತರು ಮತ್ತು ಸಂಬಂಧಿಕರಿಂದ ಮಾಹಿತಿ ತಿಳಿಯಿತು. ಅಂದು ನಾನು ವಾರಾಣಸಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದೆ. ಈಗಲೂ ವಾರಾಣಸಿಯಲ್ಲೇ ಇದ್ದೇನೆ. ನನ್ನ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ವಾರಾಣಸಿಯ ಸಿಗ್ರ ಪೊಲೀಸ್‌ ಠಾಣೆ ದೂರು ನೀಡಿದ್ದೇನೆ. ಸೈಬರ್‌ ಠಾಣೆಯಲ್ಲೂ ದೂರು ದಾಖಲಿಸಿದ್ದೇನೆ'' ಎಂದು ವಿವರಿಸಿದರು. ತನ್ನ ಫೋಟೋಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಬಗ್ಗೆ ದೂರು ದಾಖಲಿಸುವುದಾಗಿ ಫೇಸ್ಬುಕ್‌ನಲ್ಲಿ ಎಚ್ಚರಿಕೆ ಪೋಸ್ಟ್‌ ಅನ್ನು ಹಾಕಿದ್ದರು. ಅಂತಿಮ ನಿರ್ಧಾರ ದಿಲ್ಲಿಯ ಜಫ್ರಬಾದ್‌ ಪ್ರದೇಶದಲ್ಲಿ ನಡೆದ ಹಿಂಸಾಚಾರದ ವೇಳೆ ಪಿಸ್ತೂಲ್‌ ತೋರಿಸಿ, ಹಲವು ಸುತ್ತು ಗುಂಡು ಹಾರಿಸಿದ ವ್ಯಕ್ತಿ ಮೊಹಮ್ಮದ್‌ ಶಾರೂಖ್‌ ಅಲ್ಲ, ಅನುರಾಗ್‌ ಡಿ ಮಿಶ್ರಾ ಎಂಬ ಆರೋಪದಲ್ಲಿ ಹುರುಳಿಲ್ಲ. ಇದೊಂದು ದಾರಿ ತಪ್ಪಿಸುವ ಪೋಸ್ಟ್‌ ಆಗಿದೆ. ಶಾರೂಖ್‌ ಮತ್ತು ಅನುರಾಗ್‌ ಇಬ್ಬರು ಬೇರೆ ಬೇರೆ ವ್ಯಕ್ತಿಗಳು. ಅನುರಾಗ್‌ ಡಿ ಮಿಶ್ರಾ ಅವರಿಗೂ ದಿಲ್ಲಿಯಲ್ಲಿ ಗನ್‌ ತೋರಿಸಿದ ಘಟನೆಗೂ ಸಂಬಂಧವಿಲ್ಲ.


from India & World News in Kannada | VK Polls https://ift.tt/3a9YYda

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...