‘ಅಮೆರಿಕಾ ಭಾರತವನ್ನು ಗೌರವಿಸುತ್ತದೆ’ ಟ್ರಂಪ್‌ನಿಂದ ಮತ್ತೊಂದು ಹಿಂದಿ ಟ್ವೀಟ್‌

ಹೊಸದಿಲ್ಲಿ: ಭಾರತ ಪ್ರವಾಸದಲ್ಲಿರುವ ಅಮೆರಿಕಾದ ಅಧ್ಯಕ್ಷ ಹಿಂದಿ ಭಾಷೆಯಲ್ಲೇ ಎರಡೆರಡು ಬಾರಿ ಟ್ವೀಟ್‌ಗಳನ್ನು ಮಾಡುವ ಮೂಲಕ ಭಾರತೀಯರ ಮನಗೆದ್ದಿದ್ದಾರೆ. ಅಮೆರಿಕಾ ಭಾರತವನ್ನು ಗೌರವಿಸುತ್ತದೆ ಎಂದು ಮತ್ತೊಮ್ಮೆ ಟ್ವೀಟ್‌ ಮಾಡಿದ್ದು, ಟ್ರಂಪ್ ಹಿಂದಿ ಪ್ರೇಮಕ್ಕೆ ಟ್ವಿಟ್ಟರಿಗರು ಫುಲ್ ಖುಷಿಯಾಗಿದ್ದಾರೆ. ಡೊನಾಲ್ಡ್‌ ಟ್ರಂಪ್ ಭಾರತಕ್ಕೆ ಬರುವ ಮೊದಲು “ನಾವು ಭಾರತಕ್ಕೆ ಬರಲು ಎದುರು ನೋಡುತ್ತಿದ್ದೇವೆ. ನಾವು ದಾರಿಯಲ್ಲಿದ್ದೇವೆ, ಕೆಲವೇ ಗಂಟೆಗಳಲ್ಲಿ ಎಲ್ಲರನ್ನೂ ಭೇಟಿಯಾಗುತ್ತೇವೆ” ಎಂದು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ ಅತಿಥಿ ದೇವೋಭವ ಎಂದು ಮರು ಟ್ವೀಟ್‌ ಮಾಡಿದ್ದರು. ಹಿಂದಿ ಭಾಷೆಯಲ್ಲಿ ಟ್ರಂಪ್ ಮಾಡಿರುವ ಟ್ವೀಟ್‌ ಟ್ವಿಟ್ಟರ್‌ನಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದು. ಹಲವರು ಟ್ರಂಪ್ ಹಿಂದಿ ಪ್ರೇಮಕ್ಕೆ ಸಂತಸ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಹಿಂದಿ ಭಾಷೆಯಲ್ಲಿ ಟ್ವೀಟ್‌ ಮಾಡಿರುವ ಟ್ರಂಪ್, “ಪ್ರಥಮ ಮಹಿಳೆ ಮತ್ತು ನಾನು ಈ ದೇಶದ ಪ್ರತಿಯೊಬ್ಬ ಪ್ರಜೆಗೆ ಸಂದೇಶವನ್ನು ನೀಡಲು ಸುಮಾರು 8000 ಮೈಲುಗಳಷ್ಟು ದೂರದಿಂದ ಬಂದಿದ್ದೇವೆ. ಅಮೆರಿಕಾ ಭಾರತವನ್ನು ಪ್ರೀತಿಸುತ್ತದೆ , ಅಮೆರಿಕ ಭಾರತವನ್ನು ಗೌರವಿಸುತ್ತದೆ ಹಾಗೂ ಅಮೆರಿಕದ ಜನರು ಯಾವಾಗಲೂ ಭಾರತದ ಜನರ ನಿಜವಾದ ಮತ್ತು ನಿಷ್ಠಾವಂತ ಸ್ನೇಹಿತರಾಗಿ ಉಳಿಯುತ್ತದೆ” ಎಂದು ಟ್ವೀಟ್‌ ಮಾಡಿದ್ದರು. ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆದ 'ಮಸ್ತೆ ಟ್ರಂಪ್' ಕಾರ್ಯಕ್ರಮದಲ್ಲಿ ಮಾಡಿದ ಭಾಷಣದಲ್ಲಿ ಟ್ರಂಪ್ ಭಾರತದ ಬಗ್ಗೆ ಈ ಮಾತನ್ನು ಆಡಿದ್ದರು. ಬಳಿಕ ಹಿಂದಿಯಲ್ಲಿ ಇದನ್ನು ಟ್ವೀಟ್‌ ಮಾಡುವ ಮೂಲಕ ಗಮನಸೆಳೆದಿದ್ದಾರೆ.


from India & World News in Kannada | VK Polls https://ift.tt/3c18K36

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...