ಬೆಂಗಳೂರು: ಕರ್ನಾಟಕ, ಗೋವಾ, ಮಹಾರಾಷ್ಟ್ರ ನಡುವೆ ನದಿ ನೀರಿನ ವಿಚಾರದಲ್ಲಿ ವ್ಯಾಜ್ಯ ಉಂಟಾಗಿತ್ತು. ಈ ಸಂಬಂಧ 2018ರ ಆಗಸ್ಟ್ 14ರಂದು ಮಹದಾಯಿ ನ್ಯಾಯಾಧಿಕರಣ ಅಂತಿಮ ತೀರ್ಪು ನೀಡಿತ್ತು. ಅದಕ್ಕೆ ಗೋವಾ ಸರಕಾರ ತಕರಾರು ತೆಗೆದಿತ್ತು. ಜತೆಗೆ ತಮ್ಮ ಹೆಚ್ಚುವರಿ ನೀರಿನ ವಿತರಣೆಗೆ ಒತ್ತಾಯಿಸಿ ಮೂರು ರಾಜ್ಯಗಳು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು. ಈ ನಡುವೆ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು ಎಂಬ ಕರ್ನಾಟಕದ ವಾದವನ್ನು ಆಲಿಸಿದ್ದ ಸುಪ್ರೀಂ ಕೋರ್ಟ್ ಮಹದಾಯಿ ತೀರ್ಪಿನ ಅಧಿಸೂಚನೆ ಹೊರಡಿಸುವಂತೆ ಫೆಬ್ರವರಿ 20ರಂದು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಮಹದಾಯಿ ತೀರ್ಪಿನ ಅಧಿಸೂಚನೆ: ರಾಜ್ಯಕ್ಕೆ ಏನೇನು ಸಿಕ್ಕಿದೆ? - ಕೊತ್ತನಿ ಬಳಿ ಮಹದಾಯಿ ಜಲ ವಿದ್ಯುತ್ ಯೋಜನೆಗೆ 8.02 ಟಿಎಂಸಿ ನೀರು - ಬಂಡೂರಿ ನಾಲಾಗೆ 2.18 ಟಿಎಂಸಿ ನೀರು - ಕಳಸಾ ನಾಲಾಗೆ 1.72 ಟಿಎಂಸಿ ನೀರು - ಕುಡಿಯುವ ನೀರು ಮತ್ತು ನೀರಾವರಿಗೆ 1.5 ಟಿಎಂಸಿ ನೀರು - ಒಟ್ಟು ಕರ್ನಾಟಕದ ಪಾಲಿಗೆ 13.42 ಟಿಎಂಸಿ ನೀರು ಸಿಕ್ಕಿದೆ. ನಮ್ಮ ಮನವಿ ಪುರಸ್ಕರಿಸಿದ ಕೇಂದ್ರ ಸರಕಾರಕ್ಕೆ ಅಭಿನಂದನೆಗಳು. ನಮ್ಮ ಪಾಲಿನ 13.42 ಟಿಎಂಸಿ ನೀರನ್ನು ಕಾಲಮಿತಿಯೊಳಗೆ ಸದ್ಬಳಕೆ ಮಾಡಿಕೊಳ್ಳುತ್ತೇವೆ. - ರಮೇಶ್ ಜಾರಕಿಹೊಳಿ, ಜಲಸಂಪನ್ಮೂಲ ಸಚಿವರು ಇದು ಉತ್ತರ ಕರ್ನಾಟಕ ಭಾಗದ ಜನರ ಕನಸು ನನಸಾದ ಕ್ಷಣ. ಇನ್ನು ರಾಜ್ಯ ಸರಕಾರದ ಜವಾಬ್ದಾರಿ ಹೆಚ್ಚಿದ್ದು, ಕೂಡಲೇ ಈ ಯೋಜನೆ ಅನುಷ್ಠಾನಕ್ಕೆ ಸಿಎಂ ಯಡಿಯೂರಪ್ಪ ಪ್ರಸಕ್ತ ಬಜೆಟ್ನಲ್ಲಿ 1 ಸಾವಿರ ಕೋಟಿ ರೂ. ಮೀಸಲಿಡಬೇಕು. - ವೀರೇಶ ಸೊಬರದಮಠ, ರಾಜ್ಯಾಧ್ಯಕ್ಷ, ಹಸಿರು ಸೇನೆ.
from India & World News in Kannada | VK Polls https://ift.tt/2Pxl1mm