ದಿಲ್ಲಿ ಗಲಭೆಯಲ್ಲಿ 13 ವರ್ಷದ ಬಾಲಕನಿಗೆ ಗುಂಡೇಟು

ಹೊಸದಿಲ್ಲಿ: ಈಶಾನ್ಯ ದಿಲಿಯಲ್ಲಿ ಕಲ್ಲು ತೂರಾಟ ಮತ್ತು ಗುಂಡಿನ ದಾಳಿಗೆ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ದಾಳಿಗೆ 200ಕ್ಕೂ ಅಧಿಕ ಜನರಿಗೆ ಗಾಯವಾಗಿದ್ದು, ಈ ಪೈಕಿ 13 ವರ್ಷದ ಬಾಲಕನೂ ಗುಂಡೇಟು ತಿಂದಿರುವ ದಾರುಣ ಘಟನೆ ನಡೆದಿದೆ. ಬಾಲಕನ ಬೆನ್ನಿಗೆ ಗುಂಡು ಹಾರಿಸಿದ್ದು, ಮನೆಗೆ ಹಿಂದಿರುಗುತ್ತಿದ್ದ ಇಬ್ಬರು ಪುರುಷರ ಮೇಲೂ ಗುಂಡಿನ ದಾಳಿ ವರದಿಯಾಗಿದೆ. ಜತೆಗೆ ನಾಲ್ಕು ಆಸಿಡ್ ದಾಳಿ ಪ್ರಕರಣಗಳೂ ವರದಿಯಾಗಿದೆ. 13 ವರ್ಷದ ಫೈಜಿ ಹುಸೇನ್ ಸೋಮವಾರ ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ಮೌಜ್‌ಪುರದ ಬಳಿಯ ವಿಜಯ್ ಪಾರ್ಕ್‌ನ ತನ್ನ ನೆರೆಹೊರೆಯ ಪ್ರದೇಶದಲ್ಲಿ ಗಲಭೆಗಳು ಭುಗಿಲೆದ್ದಿರುವುದನ್ನು ಗಮನಿಸಿದನು. ಬಳಿಕ ಆತ ಸುರಕ್ಷಿತವಾಗಿ ಮನೆಗೆ ತಲುಪಿದನು. ಆದರೆ ಕುತೂಹಲಕಾರಿ ಯುವಕ ಏನಾಗುತ್ತಿದೆ ಎಂದು ನೋಡಲು ಮನೆಯಿಂದ ಹೊರಟ ಕೆಲವು ನಿಮಿಷಗಳ ನಂತರ, ಎಲ್ಲಿಂದಲೇ ಸಿಡಿದ ಗುಂಡು ಆತನ ಕೆಳ ಬೆನ್ನಿಗೆ ಬಡಿದು ಅವನು ಕುಸಿದನು. ಇನ್ನೊಂದೆಡೆ, ಬಾಲಕನ ಬೆನ್ನುಮೂಳೆಯಲ್ಲಿರುವ ಗುಂಡನ್ನು ತೆಗೆಯದಿರುವುದು ಒಳ್ಳೆಯದು ಎಂದು ವೈದ್ಯರು ಕುಟುಂಬಕ್ಕೆ ತಿಳಿಸಿದ್ದಾರೆ - ಆದ್ದರಿಂದ ಹುಡುಗನು ತನ್ನ ಜೀವನದುದ್ದಕ್ಕೂ ಅದರೊಂದಿಗೆ ಬದುಕಬೇಕಾಗುತ್ತದೆ. ಇನ್ನು, ನಮ್ಮ ಕುಟುಂಬವು ಆಟೋರಿಕ್ಷಾವನ್ನು ಹೊಂದಿಲ್ಲದಿದ್ದರೆ ಬಾಲಕನನ್ನು ಆಸ್ಪತ್ರೆಗೆ ಸೇರಿಸುವುದು ಅಸಾಧ್ಯವಾಗಿತ್ತು ಎಂದು ಹುಸೇನ್ ಅವರ ತಂದೆ ಮುನ್ನಾ ಹೇಳಿಕೊಂಡಿದ್ದಾರೆ. ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಕಲ್ಲುಗಳಿಂದ ನಾವು ಹೊಡೆತ ತಿಂದೆವು. ಪುತ್ರನಿಗೆ ತೀವ್ರ ರಕ್ತಸ್ರಾವವಾಗಿತ್ತು. ನಾನು ಅವನನ್ನು ಕಳೆದುಕೊಳ್ಳುತ್ತೇನೆ ಎಂದು ಹೆದರಿದ್ದೆ ಎಂದೂ ಬೇಸರದಿಂದ ತಂದೆ ಹೇಳಿಕೊಂಡಿದ್ದಾರೆ. ಇನ್ನು, ಬೆನ್ನುಹುರಿಯ ಕೆಳ ಭಾಗದಲ್ಲಿ ಗುಂಡು ಸೇರಿಕೊಂಡಿರುವುದರಿಂದ ಅದನ್ನು ಆಪರೇಷನ್‌ ಮೂಲಕ ತೆಗೆಯುವುದು ಆತನ ಜೀವಕ್ಕೆ ಅಪಾಯ ಎಂದು ವೈದ್ಯರು ಹೇಳಿದ್ದಾರೆ. ಇನ್ನೊಂದೆಡೆ, ರಾಷ್ಟ್ರೀಯ ಕ್ರೀಡಾಪಟುವಾಗಬೇಕೆಂಬ ಆತನ ಬಯಕೆ ಈಡೇರುವುದಿಲ್ಲವೆಂಬ ಭಯ ಕಾಡುತ್ತಿದೆ ಎಂದೂ ತಂದೆ ಹೇಳಿಕೊಂಡಿದ್ದಾರೆ. ಮೌಜ್‌ಪುರದಲ್ಲಿ ನಡೆದ ಗಲಭೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಲ್ಲಿ ಆಕಾಶ್ ಎಂಬ ಪತ್ರಕರ್ತ ಸಹ ಸೇರಿದ್ದಾನೆ. ಗಲಭೆ ಬಗ್ಗೆ ವರದಿ ಮಾಡಲು ತೆರಳಿದ್ದ ಪತ್ರಕರ್ತ ಈತ.


from India & World News in Kannada | VK Polls https://ift.tt/2HU3h03

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...