ಹ್ಯಾರಿ ಮತ್ತು ಮೇಘನ್ ದಂಪತಿಗಿಲ್ಲ ಭದ್ರತೆ: ಅರ್ಥವಾಗಬೇಕು ಸರ್ಕಾರದ ನಿಲುವಿನ ಸೂಕ್ಷ್ಮತೆ!

ಟೊರೊಂಟೋ: ಬ್ರಿಟನ್ ರಾಜಮನೆತನ ತೊರೆದಿರುವ ಪ್ರಿನ್ಸ್ ಹ್ಯಾರಿ ಹಾಗೂ ಮೇಘನ್ ದಂಪತಿ ಇದೀಗ ತೀರ ಸಾಮಾನ್ಯ ಬದುಕು ನಡೆಸುತ್ತಿದ್ದಾರೆ. ಅರಮನೆಯಿಂದ ಹೊರ ಬಂದಿರುವ ಹ್ಯಾರಿ ದಂಪತಿ, ಇದೀಗ ಸಾಮಾನ್ಯ ಪ್ರಜೆಗಳಾಗಿ ಗುರುತಿಸಿಕೊಂಡಿದ್ದಾರೆ. ರಾಜ ವೈಭೋಗ ತೊರೆದಿರುವ ಹ್ಯಾರಿ ದಂಪತಿಗೆ ನೀಡಲಾಗುತ್ತಿದ್ದ ಸಕಲ ಸೌಲಭ್ಯಗಳನ್ನೂ 'ನ ಬಕಿಂಗ್'ಹ್ಯಾಮ್ ಅರಮನೆ ವಾಪಸ್ಸು ಪಡೆದಿದೆ. ತೆರಿಗೆದಾರರ ಹಣವನ್ನು ಇನ್ನು ಮುಂದೆ ಹ್ಯಾರಿ ದಂಪತಿ ಬಳಸುವಂತಿಲ್ಲ. ಅದರಂತೆ ಸರ್ಕಾರ ಕೂಡ ಬ್ರಿಟನ್ ರಾಜಮನೆತನದ ಮಾಜಿ ಪ್ರಿನ್ಸ್ ಹ್ಯಾರಿ ಹಾಗೂ ಮೇಘನ್ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ವಾಪಸ್ ಪಡೆಯುವುದಾಗಿ ಘೋಷಿಸಿದೆ. ಸದ್ಯ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ತಾತ್ಕಾಲಿಕವಾಗಿ ವಾಸವಾಗಿರುವ ಹ್ಯಾರಿ ದಂಪತಿಗೆ ನೀಡಲಾಗಿದ್ದ ಭದ್ರತೆಯನ್ನು ವಾಪಸ್ ಪಡೆದಿರುವುದಾಗಿ ಕೆನಡಾ ಸರ್ಕಾರ ಸ್ಪಷ್ಟಪಡಿಸಿದೆ. ವಿದೇಶಿ ಗಣ್ಯರ ನಿಯಮದಡಿಯಲ್ಲಿ ಹ್ಯಾರಿ ಹಾಗೂ ಮೇಘನ್ ಅವರಿಗೆ ಕೆನಡಾ ಸರ್ಕಾರ ಭದ್ರತೆ ನೀಡುತ್ತಿತ್ತು. ಆದರೆ ಈ ದಂಪತಿ ರಾಜಮನೆತನ ತೊರೆದಿರುವ ಕಾರಣ ಅವರನ್ನು ಸಾಮಾನ್ಯ ಪ್ರಜೆ ಎಂದು ಪರಿಗಣಿಸುವುದಾಗಿ ಕೆನಡಾ ಹೇಳಿದೆ. ಬ್ರಿಟಿಷ್ ಕೊಲಂಬಿಯಾದಲ್ಲಿ ಕಳೆದ ನವೆಂಬರ್'ನಿಂದ ವಾಸವಿರುವ ಹ್ಯಾರಿ ದಂಪತಿಗೆ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಇಲಾಖೆ ಇದುವರೆಗೂ ಭದ್ರತೆ ನೀಡುತ್ತಿತ್ತು. ಆದರೆ ಇದೀಗ ಹ್ಯಾರಿ ದಂಪತಿಯ ರಾಜಮನೆತನ ತೊರೆಯುವ ಪ್ರಕ್ರಿಯೆ ಮುಗಿದಿರುವುದರಿಂದ, ದಂಪತಿಯನ್ನು ಸಾಮಾನ್ಯ ಪ್ರಜೆಗಳೆಂದು ಪರಿಗಣಿಸಿ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ವಾಪಸ್ ಪಡೆಯುತ್ತಿರುವುದಾಗಿ ಕೆನಡಾ ಸರ್ಕಾರ ಮಾಹಿತಿ ನೀಡಿದೆ. ಈ ಕುರಿತು ಮಾತನಡಿರುವ ಕೆನಡಾದ ಸಾರವಜನಿಕ ಭದ್ರತಾ ಸಚಿವ ಬಿಲ್ ಬ್ಲೇರ್, ಮುಂದಿನ ಮಾರ್ಚ್'ನಿಂದ ಹ್ಯಾರಿ ಹಾಗೂ ಮೇಘನ್ ದಂಪತಿಗೆ ನೀಡಲಾಗಿರುವ ಭದ್ರತೆಯನ್ನು ವಾಪಸ್ ಪಡೆಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.


from India & World News in Kannada | VK Polls https://ift.tt/398ldjI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...