ವೇದಿಕೆ ಮೇಲೆ ಒಟ್ಟಾಗಿ ಚಿಕನ್ ತಿಂದ ಸಚಿವರು: ಕಾರಣ ಕೇಳಿದರೆ ಹೀಗಂದರು!

ಹೈದರಾಬಾದ್: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಾರಕ ಕೊರೊನಾ ವೈರಸ್ ಭಾರತವನ್ನೂ ಕಾಡುತ್ತಿರುವುದು ಸುಳ್ಳಲ್ಲ. ಕೊರೊನಾ ವೈರಸ್ ಭಿತಿಯಲ್ಲೇ ದಿನದೂಡುತ್ತಿರುವ ಭಾರತೀಯರು, ಈ ನಿಟ್ಟಿನಲ್ಲಿ ಜಾಗೃತರಾಗಿದ್ದಾರೆ. ಆದರೆ ಕೊರೊನಾ ವೈರಸ್ ಹರಡುವ ಸಾಧ್ಯತೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಭೀತಿಯ ಸುದ್ದಿಗಳು ಹರಿದಾಡುತ್ತಿವೆ. ಪ್ರಮುಖವಾಗಿ ತಿನ್ನುವುದರಿಂದ ಕೊರೊನಾ ವೈರಸ್ ಹರಡುತ್ತದೆ ಎಂಬ ಗಾಳಿ ಸುದ್ದಿ ಜನರನ್ನು ಭಯಭೀತರನ್ನಾಗಿ ಮಾಡಿದೆ. ಚಿಕನ್ ತಿನ್ನುವುದರಿಂದ ಕೊರೊನಾ ವೈರಸ್ ಹರಡುತ್ತದೆ ಎಂಬ ಈ ಗಾಳಿ ಸುದ್ದಿಯಿಂದಾಗಿ ಕುಕ್ಕುಟ ವ್ಯಾಪಾರದ ಮೇಲೆ ಭಾರೀ ದುಷ್ಪರಿಣಾಮ ಬೀರಿದೆ. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಿಕನ್ ಮಾರಾಟ ಕುಂಠಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಚಿಕನ್ ತಿನ್ನುವುದರಿಂದ ಕೊರೊನಾ ವೈರಸ್ ಹರಡುವುದಿಲ್ಲ ಎಂಬ ಸಂದೇಶ ರವಾನಿಸಲು ರಾಜ್ಯ ಸರ್ಕಾರದ ವಿನೂತನ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ಜನರಲ್ಲಿರುವ ಕೊರೊನಾ ವೈರಸ್ ಭೀತಿ ನಿವಾರಿಸಲು ವೇದಿಕೆ ಮೇಲೆಯೇ ತೆಲಂಗಾಣ ಸರ್ಕಾರದ ಸಚಿವರು ಒಟ್ಟಾಗಿ ಚಿಕನ್ ತಿಂದಿದ್ದಾರೆ. ಈ ಮೂಲಕ ಚಿಕನ್ ತಿನ್ನುವುದರಿಂದ ಕೊರೊನಾ ವೈರಸ್ ಹರಡುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ತೆಲಂಗಾಣ ಸಿಎಂ ಕೆ.ಸಿ. ಚಂದ್ರಶೇಖರ್ ರಾವ್ ಪುತ್ರ ಹಾಗೂ ಸಚಿವ ಕೆ.ಟಿ. ರಾಮಾರಾವ್, ಎಟೆಲಾ ರಾಜೇಂದ್ರ, ತಲ್ಸಾನಿ ಶ್ರೀನಿವಾಸ್ ಯಾದವ್ ಸೇರಿದಂತೆ ಹಲವು ಸಚಿವರು ಚಿಕನ್ ತಿನ್ನುವ ಮೂಲಕ ಗಮನ ಸೆಳೆದರು. ಭಾರತದಲ್ಲಿ ಇದುವರೆಗೂ ಮೂರು ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಚೀನಾದಿಂದ ಮರಳಿರುವ ಭಾರತೀಯರ ಮೇಲೆ ಸರ್ಕಾರ ತೀವ್ರ ನಿಗಾ ಇರಿಸಿದೆ. ಆದರೆ ಚಿಕನ್ ತಿನ್ನುವುದರಿಂದ ಮಾರಕ ವೈರಸ್ ತಗಲುತ್ತದೆ ಎಂಬ ವದಂತಿ ಜನರನ್ನು ಭಯಭೀತಗೊಳಿಸಿರುವುದೂ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.


from India & World News in Kannada | VK Polls https://ift.tt/32G9E0D

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...