ಚೆನ್ನೈ: ಸಂಬಂಧ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿರುವ ಸೂಪರ್ಸ್ಟಾರ್ , ಹಿಂಸಾಚಾರಕ್ಕೆ ಕೇಂದ್ರದ ಗುಪ್ತಚರ ವೈಫಲ್ಯವೇ ಕಾರಣ ಎಂದಿದ್ದಾರೆ. “ನಿಸ್ಸಂಶಯವಾಗಿ ಇದು ಕೇಂದ್ರ ಸರಕಾರದ ಗುಪ್ತಚರ ವೈಫಲ್ಯ. ನಾನು ಕೇಂದ್ರ ಸರಕಾರವನ್ನು ಕಟುವಾಗಿ ಖಂಡಿಸುತ್ತೇನೆ,” ಎಂಬುದಾಗಿ ರಜನಿಕಾಂತ್ ಚೆನ್ನೈನಲ್ಲಿ ಬುಧವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. “ಗುಪ್ತಚರ ಸಂಸ್ಥೆಗಳು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸಿಲ್ಲ. ಗುಪ್ತಚರ ಇಲಾಖೆಯ ವೈಫಲ್ಯವೆಂದರೆ ಅದು ಗೃಹ ಇಲಾಖೆಯ ವೈಫಲ್ಯ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರದ ವೇಳೆಗೆ ದಿಲ್ಲಿ ಕೋಮು ಗಲಭೆಯಲ್ಲಿ 34 ಜನರು ಸಾವನ್ನಪ್ಪಿದ್ದು 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಲಭೆ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಇದೇ ಸಂದರ್ಭದಲ್ಲಿ ರಜನಿಕಾಂತ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದೇ ರಜನಿಕಾಂತ್ ಕೆಲ ದಿನಗಳ ಹಿಂದೆ ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಬೆಂಬಲಿಸಿದ್ದರು. ಇದೀಗ ದಿಲ್ಲಿ ಗಲಭೆ ಸಂಬಂಧ ಇದೇ ಕೇಂದ್ರ ಸರಕಾರದ ವಿರುದ್ಧ ಅವರು ಹರಿಹಾಯ್ದಿದ್ದಾರೆ.
from India & World News in Kannada | VK Polls https://ift.tt/2PJgHAH