ಬಂಗಾಳ ವಿರುದ್ಧ ಸೆಮಿಫೈಟ್; ಕರ್ನಾಟಕಕ್ಕೆ ಬರಲಿದೆ ಆನೆ ಬಲ

ಬೆಂಗಳೂರು: 2019-20ನೇ ಸಾಲಿನ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ಮುಂದುವರಿಸಿರುವ ಕರ್ನಾಟಕ ತಂಡವು ಸೆಮಿಫೈನಲ್‌ಗೆ ಪ್ರವೇಸಿಸಿದೆ. ಮಹತ್ವದ ಕಾರ್ಟರ್ ಫೈನಲ್ ಪಂದ್ಯದಲ್ಲಿ ಕರುಣ್ ನಾಯರ್ ಬಳಗವು ಜಮ್ಮು ಮತ್ತು ಕಾಶ್ಮೀರ ವಿರುದ್ಧ 167 ರನ್ ಅಂತರದ ಭರ್ಜರಿ ಗೆಲುವು ಬಾರಿಸಿತ್ತು. ಏಳು ವಿಕೆಟ್ ಪಡೆದ ಕೆ ಗೌತಮ್ ಗೆಲುವಿನ ರೂವಾರಿ ಎನಿಸಿದ್ದರು. ಕರ್ನಾಟಕ ತಂಡವು ಫೆಬ್ರವರಿ 29 ಶನಿವಾರ ಆರಂಭವಾಗಲಿರುವ ಎರಡನೇ ಸೆಮಿಫೈನಲ್ ಮುಖಾಮುಖಿಯಲ್ಲಿ ಬಂಗಾಳ ಸವಾಲನ್ನು ಎದುರಿಸಲಿದೆ. ಕೋಲ್ಕತಾದ ಈಡೆನ್ ಗಾರ್ಡೆನ್ ಮೈದಾನದಲ್ಲಿ ನಡೆಯಲಿರುವ ಪಂದ್ಯವು ಕರ್ನಾಟಕದ ಪಾಲಿಗೆ ಸವಾಲಿನಿಂದ ಕೂಡಿರಲಿದೆ. ಈ ನಡುವೆ ನಿರ್ಣಾಯಕ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಕರ್ನಾಟಕ ತಂಡಕ್ಕೆ ಆನೆ ಬಲ ಬಂದಿದೆ. ಅಮೋಘ ಫಾರ್ಮ್‌ನಲ್ಲಿರುವ ತಂಡವನ್ನು ಸೇರಿಕೊಳ್ಳುವುದು ಖಚಿತವೆನಿಸಿದೆ. ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸಿರುವ ರಾಹುಲ್, ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಕೊನೆಯ 10 ಏಕದಿನ ಹಾಗೂ ಟಿ20 ಇನ್ನಿಂಗ್ಸ್‌ಗಳಲ್ಲಿ ಶತಕ ಹಾಗೂ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದರು. ಆದರೂ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಈ ನಡುವೆ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಿಂದ ರಾಹುಲ್‌ಗೆ ವಿಶ್ರಾಂತಿ ಸೂಚಿಸಲಾಗಿತ್ತು. ಇದೀಗ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ತಮ್ಮ ಸೇವೆಯನ್ನು ಸಲ್ಲಿಸಲಿದ್ದಾರೆ. ಕಿವೀಸ್ ಪ್ರವಾಸದ ಬಳಿಕ ಮನೀಶ್ ಪಾಂಡೆ ನೇರವಾಗಿ ಕರ್ನಾಟಕ ರಣಜಿ ತಂಡದ ಪರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾಗವಹಿಸಿದ್ದರು. ಒಟ್ಟಿನಲ್ಲಿ ಬಲಾಢ್ಯ ಕರ್ನಾಟಕ ತಂಡವು ಮಗದೊಂದು ಬಾರಿ ಚಾಂಪಿಯನ್ನು ಪಟ್ಟವನ್ನು ಎದುರು ನೋಡುತ್ತಿದೆ. ರಣಜಿ ಟ್ರೋಫಿ ಸೆಮಿಫೈನಲ್ ವೇಳಾಪಟ್ಟಿ: ಮೊದಲ ಸೆಮಿಫೈನಲ್: ಗುಜರಾತ್ vs ಸೌರಾಷ್ಟ್ರ ರಾಜ್‌ಕೋಟ್ ದ್ವಿತೀಯ ಸೆಮಿಫೈನಲ್: , ಕೋಲ್ಕತಾ ದಿನಾಂಕ: ಫೆ.29ರಿಂದ ಮಾ.04 ವರೆಗೆ ಫೈನಲ್: ಮಾ.9ರಿಂದ 13ರ ವರೆಗೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2w06vfW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...