ಬಳ್ಳಾರಿ: ರಾಜ್ಯದಲ್ಲಿ ಪ್ರಶ್ನಾತೀತ ನಾಯಕರು. ಕರ್ನಾಟಕದಲ್ಲಿ ಸೂಪರ್ ಸಿಎಂ ಪ್ರಶ್ನೆಯೇ ಇಲ್ಲ ಎಂದು ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಸಚಿವ ವಿ. ಸೋಮಣ್ಣ ಮಾತನಾಡಿದರು. ನಾನು 40 ವರ್ಷ ರಾಜಕೀಯದಲ್ಲಿ ಇದ್ದೇನೆ. ಅವರು ರಾಜ್ಯದ ಪ್ರಶ್ನಾತೀತ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಹಿಂದಿನಿಂದಲೂ ಯಡಿಯೂರಪ್ಪ ಬಗ್ಗೆ ಭಾರಿ ಜನಪ್ರಿಯತೆ, ಗೌರವ ಇದೆ ಎಂದರು. ಯಡಿಯೂರಪ್ಪ ಅವರ ಮಗ ಮುನ್ನಲೆಗೆ ಬರುತ್ತಾರೆ ಎಂಬುದು ಸದ್ಯ ಇಲ್ಲ. ಬಿಎಸ್ವೈ ಪುತ್ರ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕೆ ಬೇರೆ ಯಾವ ರೀತಿಯ ಅರ್ಥವನ್ನೂ ಕಲ್ಪಿಸಬೇಕಾಗಿಲ್ಲ ಎಂದರು. ವದಂತಿಗಳನ್ನು ಹಬ್ಬಿಸುವುದರಲ್ಲಿ ಸಿಎಂ ಇಬ್ರಾಹಿಂ ನಿಸ್ಸೀಮರು. ಅವರು ನಸಿಪುಡಿ ಹಾಕುತ್ತಿದ್ದಾಗನಿಂದಲೂ ನೋಡುತ್ತಿದ್ದೇನೆ. ನಸಿಪುಡಿ ನೆತ್ತಿಗೇರಿದಾಗ ಏನಾದರೂ ಮಾತನಾಡುತ್ತಾರೆ ಎಂದು ಸೋಮಣ್ಣ ತಿರುಗೇಟು ನೀಡಿದರು. ಇನ್ನು ಮೂರು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಉತ್ತರಾಧಿಕಾರಿಯೂ ಇಲ್ಲ. ಯಾರೂ ಇಲ್ಲ. ಇಲ್ಲಿ ಪಕ್ಷವೇ ಅಂತಿಮ. ಹೈಕಮಾಂಡ್ ನಾಯಕರ ನಿರ್ಧಾರ ಮಾಡಿದಂತೆ ಎಲ್ಲವೂ ನಡೆಯುತ್ತದೆ ಎಂದು ಸಚಿವ ಸೋಮಣ್ಣ ಸ್ಪಷ್ಟಪಡಿಸಿದರು.
from India & World News in Kannada | VK Polls https://ift.tt/2HRgcQm