ಸಾಬರಮತಿ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಗಾಂಧಿ ಬದಲಾಗಿ ಮೋದಿಗೆ ಮೆಚ್ಚುಗೆ! ಟ್ರಂಪ್‌ ನಡೆಗೆ ನೆಟ್ಟಿಗರ ಕಿಡಿ

ಅಹಮದಾಬಾದ್: ಅಮೆರಿಕಾದ ಅಧ್ಯಕ್ಷ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದು, ಸಂದರ್ಶಕರ ಪುಸ್ತಕದಲ್ಲಿ ಗಾಂಧಿಯ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸುವ ಬದಲಾಗಿ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಸಲ್ಲಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸೋಮವಾರ ಅಹಮದಾಬಾದ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಡೊನಾಲ್ಡ್‌ ಟ್ರಂಪ್‌ ಅಲ್ಲಿಂದ ರಸ್ತೆ ಮಾರ್ಗವಾಗಿ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. ಆಶ್ರಮದಲ್ಲಿ ಟ್ರಂಪ್‌ ದಂಪತಿಗೆ ಮೋದಿ ಚರಕವನ್ನು ಪರಿಚಯಿಸಿದರು. ಆಶ್ರಮಯದಲ್ಲಿ ಸುಮಾರು 15 ರಿಂದ 20 ನಿಮಿಷಗಳನ್ನು ಕಳೆದ ಟ್ರಂಪ್‌ ಬಳಿಕ ಸಂದರ್ಶಕರ ಪುಸ್ತಕಕ್ಕೆ ಸಹಿ ಹಾಕಿದರು. ಪುಸ್ತಕದಲ್ಲಿ ಟ್ರಂಪ್ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಕುರಿತಾಗಿ ಬರೆಯಬಹುದು ಎಂಬ ನಿರೀಕ್ಷೆ ಇತ್ತು. ಆದರೆ ‘ನನ್ನ ಅತ್ಯುತ್ತಮ ಗೆಳೆಯ ಮೋದಿಗೆ’ ‘ಈ ಅದ್ಭುತ ಭೇಟಿಗೆ ಧನ್ಯವಾದಗಳು’ ಎಂದು ಬರೆದಿದ್ದಾರೆ. ಸಂದರ್ಶಕರ ಪುಸ್ತಕದಲ್ಲಿ ಬರೆದಿರುವ ಟ್ರಂಪ್ ಅಭಿಪ್ರಾಯ ಟ್ವಿಟ್ಟರ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಟ್ರಂಪ್‌ ಗಾಂಧಿಯ ಬಗ್ಗೆ ಬರೆದಿದ್ದಾರೆ ಎಂದು ನೋಡಿದರೆ ಇದೇನಿದು? ಎಂದು ಸಾಮಾಜಿಕ ಕಾರ್ಯಕರ್ತೆ ಹಾಗೂ ಪತ್ರಕರ್ತೆ ರಾಣಾ ಅಯ್ಯೂಬ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಬಿಜೆಪಿ ಕೂಡಾ ಇದನ್ನು ಟ್ವೀಟ್‌ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಟ್ರಂಪ್ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದನ್ನು ನಮಸ್ತೇ ಟ್ರಂಪ್ ಹ್ಯಾಶ್ ಟ್ಯಾಗ್ ಮೂಲಕ ಹಂಚಿಕೊಂಡಿದೆ. ಸ್ವಾತಿ ಚತುರ್ವೇದಿ ಎಂಬಿವವರು ಮಹಾತ್ಮಾ ಗಾಂಧಿ ಹೆಸರು ಕೂಡಾ ಟ್ರಂಪ್‌ ಸಂದರ್ಶಕರ ಪುಸ್ತಕದಲ್ಲಿ ಬರೆದಿಲ್ಲ. ಗಾಂಧಿ ಬಗ್ಗೆ ಟ್ರಂಪ್‌ಗೆ ಒಂದಿಷ್ಟು ಮಾಹಿತಿಯನ್ನು ನೀಡಬೇಕಿತ್ತು ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಮೋದಿ ಅಭಿಮಾನಿಗಳು ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್ ಪ್ರಧಾನಿ ಮೋದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.


from India & World News in Kannada | VK Polls https://ift.tt/2PlfH5l

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...