ಐಪಿಎಲ್‌ 2020: ಕೇನ್‌ ವಿಲಿಯಮ್ಸನ್‌ರಿಂದ ನಾಯಕತ್ವ ಹಿಂಪಡೆದ ಸನ್‌ರೈಸರ್ಸ್‌!

ಹೊಸದಿಲ್ಲಿ: ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಕೇನ್‌ ವಿಲಿಯಮ್ಸನ್‌ ಮತ್ತು ಭುವನೇಶ್ವರ್‌ ಕುಮಾರ್‌ಗೆ ನಾಯಕತ್ವದಿಂದ ಮುಕ್ತಿ ನೀಡಿರುವ ತಂಡ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ಗೆ ಮರಳಿ ತಂಡದ ಜವಾಬ್ದಾರಿ ವಹಿಸಿದೆ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ತನ್ನ ಅಧಿಕೃತ ಟ್ವಿಟರ್‌ ಖಾತೆ ಮೂಲಕ ಟೂರ್ನಿಯಲ್ಲಿ 'ಆರೆಂಜ್‌ ಆರ್ಮಿ'ಯನ್ನು ಮುನ್ನಡೆಸಲಿದ್ದಾರೆ ಎಂದು ಖಾತ್ರಿ ಪಡಿಸಿದೆ. ಇದರೊಂದಿಗೆ ಸನ್‌ರೈಸರ್ಸ್‌ ತಂಡ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಮರಳಿ ನಾಯಕತ್ವ ಪಡೆದಿರುವ ಬಗ್ಗೆ ಡೇವಿಡ್ ವಾರ್ನರ್‌ ಮಾತನಾಡಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿ ನ್ಯೂಜಿಲೆಂಡ್‌ನ ತಾರೆ ಕೇನ್‌ ವಿಲಿಯಮ್ಸನ್‌ ತಂಡವನ್ನು ಮುನ್ನಡೆಸಿದ್ದರು. ಕೆಲ ಪಂದ್ಯಗಳಲ್ಲಿ ಭುವನೇಶ್ವರ್‌ ಕುಮಾರ್‌ ಕೂಡ ನಾಯಕತ್ವ ವಹಿಸಿದ್ದರು. "ಮುಂಬರುವ ಐಪಿಎಲ್‌ ಟೂರ್ನಿಯಲ್ಲಿ ಮರಳಿ ತಂಡದ ನಾಯಕತ್ವ ಪಡೆದಿರುವುದಕ್ಕೆ ರೋಮಾಂಚನವಾಗಿದೆ. ಈ ಅವಕಾಶ ನೀಡಿರುವುದಕ್ಕೆ ನಾನು ಧನ್ಯ. ಕಳೆದ ಬಾರಿ ತಂಡವನ್ನು ಮುನ್ನಡೆಸಿರುವ ಕೇನ್‌ ವಿಲಿಯಮ್ಸನ್‌ ಮತ್ತು ಭುವನೇಶ್ವರ್‌ ಕುಮಾರ್‌ಗೆ ಧನ್ಯವಾದಗಳು. ಇದೀಗ ತಂಡ ಪ್ರಶಸ್ತಿ ಗೆಲ್ಲುವಂತೆ ಮಾಡಲು ನನ್ನಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡಲಿದ್ದೇನೆ," ಎಂದು ವಾರ್ನರ್‌ ವಿಡಿಯೋ ಸಂದೇಶ ರವಾನಿಸಿದ್ದಾರೆ. ವಾರ್ನರ್‌ ಸದ್ಯ ಟಿ20 ಸರಣಿ ಸಲುವಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ. 2019ರ ಆವೃತ್ತಿಯಲ್ಲಿ ವಿಲಿಯಮ್ಸನ್‌ ತಂಡದ ನಾಯಕತ್ವ ಪಡೆದಿದ್ದರು. ಆದರೆ ಗಾಯದ ಸಮಸ್ಯೆ ಕಾರಣ ಅವರಿ ಕೆಲ ಪಂದ್ಯಗಳಲ್ಲಿ ಆಡದೇ ಇದ್ದ ಕಾರಣಕ್ಕೆ ಭುವನೇಶ್ವರ್‌ ಕುಮಾರ್‌ ತಂಡದ ಜವಾಬ್ದಾರಿ ಹೊತ್ತಿದ್ದರು. ಇನ್ನು 2018ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕ್ಯಾಪ್ಟನ್‌ ಸ್ಟೀವ್‌ ಸ್ಮಿತ್‌ ಜೊತೆಗೆ ಬಾಲ್‌ ಟ್ಯಾಂಪರಿಂಗ್‌ನಲ್ಲಿ ಸಿಕ್ಕಿಬಿದಗದು ಒಂದು ವರ್ಷ ನಿಷೇಧಕ್ಕೊಳಗಾಗಿದ್ದ ಡೇವಿಡ್‌ ವಾರ್ನರ್‌, ಆ ವರ್ಷ ಐಪಿಎಲ್‌ ಆಡಿರಲಿಲ್ಲ. ಬಳಿಕ ಅದೇ ಕಾರಣಕ್ಕೆ 2019ರಲ್ಲಿ ಸನ್‌ರೈಸರ್ಸ್‌ ತಂಡದ ನಾಯಕತ್ವವನ್ನೂ ಕಳೆದುಕೊಂಡಿದ್ದರು. ಇದೀಗ ಮರಳಿ ತಂಡದ ನಾಯಕನ ಪಟ್ಟ ಪಡೆದಿದ್ದಾರೆ. 2013ರ ಆವೃತ್ತಿಯಲ್ಲಿ ಐಪಿಎಲ್‌ಗೆ ಕಾಲಿಟ್ಟ ಸನ್‌ರೈಸರ್ಸ್‌ ತಂಡ, 2016ರಲ್ಲಿ ತನ್ನ ಏಕೈಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇನ್ನು 2017 ಮತ್ತು 2019ರಲ್ಲಿ ಪ್ಲೇಆಫ್ಸ್‌ಗೆ ತಲುಪಿದ ಸಾಧನೆ ಮಾಡಿರುವ ಹೈದರಾಬಾದ್‌ ತಂಡ 2018ರಲ್ಲಿ ಕೇನ್‌ ವಿಲಿಯಮ್ಸನ್‌ ಸಾರಥ್ಯದಲ್ಲಿ ರನ್ನರ್ಸ್ಅಪ್‌ ಸ್ಥಾನ ಪಡೆದಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32vO5zJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...