ಬಿಎಸ್‌ವೈ ಬಜೆಟ್‌ 2020: ಮಕ್ಕಳ ಬಜೆಟ್‌ ಸಾಕಾರವಾಗುವುದೇ? ಶಿಕ್ಷಣ ಕ್ಷೇತ್ರದ ನಿರೀಕ್ಷೆಗಳೇನು?

ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಮಂಡಿಸುತ್ತಿರು ಆಯವ್ಯಯ ಪತ್ರದಿಂದ ಶೀಕ್ಷಣ ಕ್ಷೇತ್ರ ಏನೇನು ನಿರೀಕ್ಷಿಸುತ್ತಿದೆ? ಇಲ್ಲಿದೆ ಪಟ್ಟಿ- ಈ ಬಾರಿ ಮಕ್ಕಳ ವಿಶೇಷ ಆಯವ್ಯಯವನ್ನು ಮಂಡಿಸಬೇಕು. - ಶಾಲಾ ಶಿಕ್ಷಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಶೇ.20ರಷ್ಟು ಅನುದಾನ ಮೀಸಲಿಡಬೇಕು. - ಗ್ರಾಮೀಣ ಸರಕಾರಿ ಶಾಲೆಗಳಿಗೆ ಸಮರ್ಥ ಅಂಗ್ಲ ಶಿಕ್ಷಕರನ್ನು ನೇಮಿಸುವ ಬಗ್ಗೆ ಆಯ-ವ್ಯಯದಲ್ಲಿಘೋಷಿಸಬೇಕು. - ಕನ್ನಡ ಶಾಲೆಗಳಲ್ಲಿಆಂಗ್ಲಮಾಧ್ಯಮ ತರಗತಿಗಳನ್ನು ಪ್ರಾರಂಭಿಸುವ ನಿರ್ಧಾರವನ್ನು ಕೈಬಿಡಬೇಕು. - ಶಿಶುಪಾಲನೆಯಿಂದ 12 ನೇ ತರಗತಿವರೆಗೆ ಶಿಕ್ಷಣದಲ್ಲಿ ಖಾಸಗೀಯವರ ಪ್ರವೇಶ ಹಾಗೂ ಹೂಡಿಕೆಯನ್ನು ರದ್ದುಪಡಿಸಬೇಕು. - ಖಾಸಗಿ ಅನುದಾನಿತ ಸಂಸ್ಥೆಗಳ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಶುಲ್ಕ ಮರುಪಾವತಿಗೆ ಸುಮಾರು 1,500 ಕೋಟಿ ರೂ. ಅನುದಾನ. - ಖಾಸಗಿ ಶಿಕ್ಷಣ ಸಂಸ್ಥೆಗಳ ಸುರಕ್ಷತೆಗಾಗಿ ಪ್ರತ್ಯೇಕ ಮಸೂದೆ ಜಾರಿಗೆ ತರಬೇಕು. - ರಾಜ್ಯದ ಸರಕಾರಿ ಪದವಿ ಮತ್ತು ಪ್ರಥಮ ದರ್ಜೆ ಕಾಲೇಜುಗಳ ಅಧ್ಯಾಪಕರ 'ವರ್ಗಾವಣೆ ಕೌನ್ಸೆಲಿಂಗ್‌' ಕಾಯ್ದೆಗೆ ತಿದ್ದುಪಡಿ ಮಾಡಿ ಜಾರಿಗೆ ತರಬೇಕು. ಸರಕಾರಿ ಶಾಲೆಗಳು ಸಬಲೀಕರಣಗೊಂಡರೆ, ಪೋಷಕರು ಮಕ್ಕಳನ್ನು ಈ ಶಾಲೆಗಳಿಗೆ ಸೇರಿಸುತ್ತಾರೆ. ದೆಹಲಿಯ ಸರಕಾರಿ ಶಾಲೆಗಳಲ್ಲಿಈ ಸಂಗತಿ ನಿಜವಾಗಿದೆ. ಆದ್ದರಿಂದ ಪ್ರಾಥಮಿಕ ಶಿಕ್ಷಣದ ಸಮಗ್ರ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿಶೇ.20ರಷ್ಟು ಅನುದಾನ ಮೀಸಲಿಡಬೇಕು. - ಡಾ.ನಿರಂಜನಾರಾಧ್ಯ, ಶಿಕ್ಷಣ ತಜ್ಞ


from India & World News in Kannada | VK Polls https://ift.tt/32A9Tul

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...