ದೆಹಲಿ ಸಿಎಎ ಗಲಭೆ: ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 19ಕ್ಕೆ ಏರಿಕೆ

ಹೊಸದಿಲ್ಲಿ: (ಸಿಎಎ) ಪರ-ವಿರೋಧ ಸಂಘರ್ಷದಲ್ಲಿ ಭುಗಿಲೆದ್ದ ಹಿಂಸಾಚಾರ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಸಂಘರ್ಷದಲ್ಲಿ ಬಲಿಯಾದವರ ಸಂಖ್ಯೆ ಏರುತ್ತಲೆ ಇದೆ. ಇದುವರೆಗೂ ಹಿಂಸಾಚಾರಕ್ಕೆ 19 ಜನ ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ತಹಬದಿಗೆ ತರಲು ಕಂಡಲ್ಲಿ ಗುಂಡಿಗೆ ಆದೇಶ ಹೊರಡಿಸಲಾಗಿದ್ದು, ಈಶಾನ್ಯ ದೆಹಲಿಯಲ್ಲಿ 1 ತಿಂಗಳು 144 ಸೆಕ್ಷನ್ ಜಾರಿ ಮಾಡಲಾಗಿದೆ. ಇದರ ಜೊತೆ ದೆಹಲಿಯ ಹಲವೆಡೆ ಕರ್ಫ್ಯೂ ಹೇರಲಾಗಿದೆ. ಕಲ್ಲುತೂರಾಟ, ವಾಹನಗಳು ಮತ್ತು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ, ಪರಸ್ಪರ ಗುಂಡಿನ ದಾಳಿಗಳಿಂದಾಗಿ ನಿನ್ನೆ ಇಡೀ ದಿನ ದೆಹಲಿಯಲ್ಲಿ ಪ್ರಕ್ಷ್ಯುಬ್ದ ಪರಿಸ್ಥಿತಿ ನೆಲೆಸಿತ್ತು. ಮೌಜ್‌ಪುರ, ಜಫರಾಬಾದ್‌, ಯಮುನಾ ವಿಹಾರ್‌, ವಿಜಯ್‌ ಪಾರ್ಕ್, ಚಾಂದ್‌ಭಾಗ್‌, ಭಜನ್‌ಪುರ, ಖಜೂರಿ ಖಾಸ್‌ ಸೇರಿ ಹಲವು ಪ್ರದೇಶಗಳಲ್ಲಿ ವಾಹನಗಳು ಹಾಗೂ ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ರಸ್ತೆಗಳು ಬಂದ್ ಆಗಿದ್ದರಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಗಲಭೆ ಹಿನ್ನೆಲೆಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಇಂದು ಸಹ ಶಾಲಾ ಕಾಲೇಜುಗಳಿಗೆ ರಜೆ ಮುಂದುವರಿಸಲಾಗಿದ್ದು, ಸಿಬಿಎಸ್‌ಇ ಸೇರಿ ಹಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ. ಸಿಖ್‌ ವಿರೋಧಿ ಗಲಭೆಯ ಬಳಿಕ ಹಲವು ದಶಕಗಳಲ್ಲಿ ರಾಜಧಾನಿ ದಿಲ್ಲಿಯಲ್ಲಿ ಇಷ್ಟೊಂದು ತೀವ್ರ ಪ್ರಮಾಣದ ಹಿಂಸಾಚರ ಕಂಡುಬಂದಿದ್ದು ಇದೇ ಮೊದಲು. ಗಲಭೆ ಸ್ಥಳಕ್ಕೆ ದೋವಲ್‌ ಭೇಟಿ ಇನ್ನು ಮಂಗಳವಾರ ತಡರಾತ್ರಿ ಸೀಲಂಪುರದಲ್ಲಿ ಈಶಾನ್ಯ ದೆಹಲಿಯ ಡೆಪ್ಯೂಟಿ ಕಮೀಷನರ್‌ನ್ನು ಭೇಟಿ ಮಾಡಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕಾನೂನು ಸುವ್ಯವಸ್ಥೆ ಹಾಗೂ ಭದ್ರತಾ ಸ್ಥಿತಗತಿಯ ಬಗ್ಗೆ ಮಾಹಿತಿ ಪಡೆದುಕೊಂಡು ಅಲ್ಲಿಂದ ತೆರಳಿದ್ದಾರೆ. ವಿಶೇಷ ಪೊಲೀಸ್ ಆಯುಕ್ತರ ನೇಮಕಈಶಾನ್ಯ ದೆಹಲಿಯಲ್ಲಿನ ಹಿಂಸಾಚಾರ ತಡೆಯಲು ದೆಹಲಿ ಪೊಲೀಸರು ವಿಫಲರಾದ ಕಾರಣ. ಸರಕಾರ ಏಕಾಏಕಿ 1985ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಎಸ್.ಎನ್.ಶ್ರೀವಾಸ್ತವ್ ಅವರನ್ನು ವಿಶೇಷ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ವಿಶೇಷ ಆಯುಕ್ತರಾಗಿ ನೇಮಕವಾದ ಬೆನ್ನಲ್ಲೇ ಶ್ರೀವಾಸ್ತವ್‌ ಕಂಡಲ್ಲಿ ಗುಂಡಿಗೆ ಆದೇಶ ಹೊರಡಿಸಿದ್ದರು.


from India & World News in Kannada | VK Polls https://ift.tt/2PqhCG1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...