ಬಲಿ ಸರಣಿ ಶುರುವಾಯ್ತು: ಕೊರೊನಾಗೆ ಮೊದಲ ಭಾರತೀಯನ ಸಾವಾಯ್ತು!

ಎರ್ನಾಕುಲಂ: ಇಡೀ ಜಗತ್ತನ್ನು ತಲ್ಲಣಗೊಳಿಸಿರುವ ಮಾರಕ ಕೊರೊನಾ ವೈರಸ್, ಭಾರತದಲ್ಲಿ ತನ್ನ ಕಬಂದಬಾಹುಗಳನ್ನು ಚಾಚಿಯಾಗಿದೆ. ಕೇರಳದಲ್ಲಿ ಶಂಕಿತ ಪೀಡಿತ ಮೊದಲ ಭಾರತೀಯ ವ್ಯಕ್ತಿ ಅಸುನೀಗಿದ್ದು, ಭಾರತದಲ್ಲಿ ಸಾವಿನ ಸರಣಿ ಶುರುವಾಗುವ ಆತಂಕ ಇದೀಗ ಎದುರಾಗಿದೆ. ಹೌದು, ಶಂಕಿತ ಕೊರೊನಾ ಪೀಡಿತ ವ್ಯಕ್ತಿ ಕೇರಳದ ಎರ್ನಾಕುಲಂ ಆಸ್ಪತ್ರೆಯಲ್ಲಿ ಅಸುನೀಗಿದ್ದು, ಭಾರತದಲ್ಲಿ ಕೊರೊನಾ ಮರಣ ಮೃದಂಗ ಆರಂಭಿಸುವ ಮುನ್ಸೂಚನೆ ನೀಡಿ ಇಹಲೋಕ ತ್ಯಜಿಸಿದ್ದಾನೆ. ಇತ್ತಿಚೀಗಷ್ಟೇ ಮಲೇಷ್ಯಾದಿಂದ ಮರಳಿದ್ದ ಈ ವ್ಯಕ್ತಿಯನ್ನು ಪರೀಕ್ಷಿಸಿದಾಗ ನಕಾರಾತ್ಮಕ ಫಲಿತಾಂಶ ಬಂದಿತ್ತು. ಆದರೂ ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದ ಈತ ಅಸುನೀಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಅಸುನೀಗಿದ್ದಾನೆ ಎಂದು ಎರ್ನಾಕುಲಂ ಆಸ್ಪತ್ರೆಯ ಮೂಲಗಳು ಸ್ಷಷ್ಟಪಡಿಸಿವೆ. ಕೊರೊನಾ ವೈರಸ್'ಗೆ ಬಲಿಯಾಗಿರುವ ಮೊದಲ ಭಾರತೀಯ ಪ್ರಜೆ ಎಂಬ ಶಂಕೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಭಾರತದಲ್ಲಿ ಇದುವರೆಗೂ ಮೂವರಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವುದು ದೃಢಪಟ್ಟಿತ್ತು. ಆದರೂ ಸೂಕ್ತ ಪರೀಕ್ಷೆ ಬಳಿಕ ಮೂವರನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಚೀನಾ ಮತ್ತು ಮಲೇಷ್ಯಾದಿಂದ ಮರಳುವ ಭಾರತೀಯರ ತಿವ್ರ ವೈದ್ಯಕೀಯ ವಿಚಾರಣೆ ನಡೆಯುತ್ತಿದೆ. ಅತ್ತ ಚೀನಾದಲ್ಲಿ ಕೊರೊನಾ ಮಾನವ ಬೇಟೆ ಮತ್ತಷ್ಟು ವೇಗ ಪಡೆದುಕೊಂಡಿದ್ದು, ಮಾರಕ ರೋಗಕ್ಕೆ ಇದುವರೆಗೂ 2,870 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಲ್ಲದೇ ಸುಮಾರು 79,824 ಜನರಲ್ಲಿ ವೈರಾಣುವಿನ ಸೋಂಕು ಕಾಣಿಸಿಕೊಂಡಿದೆ.


from India & World News in Kannada | VK Polls https://ift.tt/2Pz1j9W

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...