IND vs NZ: ಅಂತಿಮ ಟೆಸ್ಟ್‌ನಲ್ಲಿ ಕಿವೀಸ್‌ಗೆ ತಿರುಗೇಟು ನೀಡಿದ ಭಾರತ

ಕ್ರೈಸ್ಟ್‌ಚರ್ಚ್: ಇಲ್ಲಿ ನಡೆಯುತ್ತಿರುವ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡಕ್ಕೆ ಭಾರತ ತಿರುಗೇಟು ನೀಡಿದೆ. ಪ್ರಥಮ ದಿನದಾಟದಲ್ಲಿ ಕಿವೀಸ್ ವೇಗದ ಬೌಲರ್ ಕೈಲ್ ಜೇಮಿಸನ್ ಚೊಚ್ಚಲ ಐದು ವಿಕೆಟ್ ಸಾಧನೆಯ ನೆರವಿನಿಂದ ಕೇವಲ 242 ರನ್‌ಗಳಿಗೆ ಸರ್ವಪತನವನ್ನು ಕಂಡಿತ್ತು. ಬಳಿಕ ಉತ್ತರ ನೀಡಲಾರಂಭಿಸಿದ ಕಿವೀಸ್ ಮೊದಲ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ ಎರಡನೇ ದಿನದಾಟದಲ್ಲಿ ಭಾರತೀಯ ಬೌಲರ್‌ಗಳು ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಣಾಮ ಕಿವೀಸ್ ತಂಡವು ತಾಜಾ ವರದಿಗಳ ವೇಳೆಗೆ 65 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿದೆ. ಬಲಗೈ ವೇಗದ ಬೌಲರ್ ಇಶಾಂತ್ ಶರ್ಮಾ ಅನುಪಸ್ಥಿತಿಯು ಭಾರತವನ್ನು ಕಾಡಿತ್ತು. ಆದರೆ ದ್ವಿತೀಯ ದಿನದಾಟದಲ್ಲಿ , ಮೊಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್ ಲಯಕ್ಕೆ ಮರಳುವ ಮೂಲಕ ಎದುರಾಳಿಗಳನ್ನು ಹೆಡೆಮುರಿ ಕಟ್ಟಿ ಹಾಕಿದರು. ಇವರಿಗೆ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಉತ್ತಮ ಸಾಥ್ ನೀಡಿದರು. ಆರಂಭಿಕರಾದ ಟಾಮ್ ಲೇಥಮ್ ಹಾಗೂ ಟಾಮ್ ಬ್ಲಂಡೆಲ್ (30) ಮೊದಲ ವಿಕೆಟ್‌ಗೆ 66 ರನ್‌ಗಳ ಜೊತೆಯಾಟ ನೀಡಿದರು. ಈ ಪೈಕಿ ಸಮಯೋಚಿತ ಇನ್ನಿಂಗ್ಸ್ ಕಟ್ಟಿದ ಲೇಥಮ್ ಆಕರ್ಷಕ ಅರ್ಧಶತಕ (52) ಸಾಧನೆ ಮಾಡಿದರು. ನಾಯಕ ಕೇನ್ ವಿಲಿಯಮ್ಸ್‌ರನ್ನು (3) ಜಸ್ಪ್ರೀತ್ ಬುಮ್ರಾ ಬಹುಬೇಗನೇ ಹೊರಗಟ್ಟಿದರು. ಅನುಭವಿ ರಾಸ್ ಟೇಲರ್ (15) ಹಾಗೂ ಹೆನ್ರಿ ನಿಕೋಲ್ಸ್‌ರಿಗೂ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ವಿಕೆಟ್ ಕೀಪರ್ ಬಿಜೆ ವಾಟ್ಲಿಂಗ್ ಹಾಗೂ ಟಿಮ್ ಸೌಥಿ ಖಾತೆ ತೆರೆಯುವಲ್ಲಿ ವಿಫಲವಾದರು. ಈ ನಡುವೆ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 26 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಭಾರತದ ಪರ ತಾಜಾ ವರದಿಗಳ ವೇಳೆಗೆ ಜಸ್ಪ್ರೀತ್ ಬುಮ್ರಾ ಮೂರು, ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ತಲಾ ಎರಡು ಮತ್ತು ಉಮೇಶ್ ಯಾದವ್ ಒಂದು ವಿಕೆಟ್ ಕಿತ್ತು ಮಿಂಚಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2TqGONN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...