ದೆಹಲಿ ಹಿಂಸಾಚಾರ: ತುರ್ತು ಸಭೆ ಕರೆದ ಸಿಎಂ ಅರವಿಂದ್‌ ಕೇಜ್ರಿವಾಲ್‌

ದೆಹಲಿ: ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಹಿಂಸಾಚಾರಕ್ಕೆ ತಿರುಗಿ 5 ಜನ ಮೃತಪಟ್ಟ ಬೆನ್ನಲ್ಲೆ ದೆಹಲಿ ಸಿಎಂ ತುರ್ತು ಸಭೆ ಕರೆದಿದ್ದಾರೆ. ಕೇಜ್ರಿವಾಲ್‌ ನಿವಾಸದಲ್ಲಿ ನಡೆಯುವ ಮಹತ್ವದ ಸಭೆಯಲ್ಲಿ ಗಲಭೆಯ ನಿಯಂತ್ರಣದ ಬಗ್ಗೆ ಚರ್ಚೆ ನಡೆಯಲಿದ್ದು, ನಿಯಂತ್ರಣ ಕ್ರಮಗಳ ಬಗ್ಗೆ ಮಾತುಕತೆ ನಡೆಯಲಿದೆ. ಸಭೆ ಬಗ್ಗೆ ಟ್ವೀಟ್‌ ಮಾಡಿರುವ ದೆಹಲಿ ಸಿಎಂ ಗಲಭೆಗ್ರಸ್ತ ಪ್ರದೇಶಗಳ ಶಾಸಕರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಹೇಳಿದ್ದಾರೆ. ಬೆಳಗ್ಗೆ 10.30ಕ್ಕೆ ಕೇಜ್ರಿವಾಲ್‌ ನಿವಾಸದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಗಲಭೆಗೆ ಕಾರಣ ಮತ್ತು ಶಾಂತಿ ಸ್ಥಾಪಿಸುವ ಕುರಿತು ಚರ್ಚೆ ನಡೆಯಲಿದೆ. ಇನ್ನು, ದೆಹಲಿಯ ಕೆಲವು ಭಾಗಗಳಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಯ ಬಗ್ಗೆ ಯೋಚಿಸುತ್ತಿದ್ದೇನೆ. ಎಲ್ಲರೂ ಸೇರಿ ಮತ್ತೆ ನಮ್ಮ ನಗರದಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸೋಣ. ಹಿಂಸೆಯಿಂದ ದೂರವಿರುವಂತೆ ಮತ್ತೆ ಒತ್ತಾಯಿಸುತ್ತೇನೆ ಎಂದಿದ್ದಾರೆ. ನಿನ್ನೆ ಸಂಜೆ ಈಶಾನ್ಯ ದೆಹಲಿಯಲ್ಲಿ ನಡೆಯುತ್ತಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಿ ಹೋರಾಟ ಹಿಂಸಾಚಾರಕ್ಕೆ ತಿರುಗಿತ್ತು. ಈ ಹಿಂಸಾಚಾರದಲ್ಲಿ 4 ಜನ ನಾಗರಿಕರು ಸೇರಿ ಒಬ್ಬ ಪೊಲೀಸ್‌ ಪೇದೆ ಸಾವನ್ನಪ್ಪಿದ್ದಾರೆ. ಶಹೀನ್‌ಬಾಗ್‌ ಮಾದರಿಯಲ್ಲಿಯೇ ಈಶಾನ್ಯ ದಿಲ್ಲಿಯ ಜಫ್ರಾಬಾದ್‌ ಮತ್ತು ಮೌಜ್‌ಪುರ ಮೆಟ್ರೋ ನಿಲ್ದಾಣದ ಎದುರು ಕೆಲವರು ಶನಿವಾರ ರಾತ್ರಿಯಿಂದ ಪ್ರತಿಭಟನೆ ನಡೆಸುತ್ತಿದ್ದರು. ಜಾಫರ್‌ಬಾದ್‌ಗೆ ಸಮೀಪ ಸಿಎಎ ಪರವಾಗಿಯೂ ಅನೇಕರು ಧರಣಿ ನಡೆಸುತ್ತಿದ್ದರು. ಭಾನುವಾರ ಎರಡೂ ಬಣಗಳ ನಡುವೆ ಸಣ್ಣದಾಗಿ ಪ್ರಾರಂಭವಾಗಿದ್ದ ಗಲಾಟೆ ತಣ್ಣಗಾಗಿತ್ತು. ಆದರೆ, ನಿನ್ನೆ ಸಂಜೆ ಎರಡು ಗಂಪುಗಳ ನಡುವೆ ಸಂಘರ್ಷ ದಿಢೀರ್‌ ಭುಗಿಲೆದ್ದು, ಸಿಎಎ ಪರ-ವಿರೋಧಿ ಪ್ರತಿಭಟನಾಕಾರರ ನಡುವೆ ಪರಸ್ಪರ ಕಲ್ಲುತೂರಾಟ ನಡೆಯಿತು. ಈ ವೇಳೆ ಹಲವು ಅಂಗಡಿಗಳು, ಮನೆಗಳು, ವಾಹನಗಳು ಬೆಂಕಿಗಾಹುತಿಯಾಗಿವೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ರ‍್ಯಾಪಿಡ್‌ ಪೊಲೀಸ್‌ ಪೋರ್ಸ್‌ ಹಾಗೂ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.


from India & World News in Kannada | VK Polls https://ift.tt/32pY5uv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...