ಕನ್ಹಯ್ಯಾ ವಿರುದ್ಧದ ದೇಶದ್ರೋಹದ ಪಕ್ರರಣದ ವಿಚಾರಣೆಗೆ ಸೈ ಎಂದ ಆಪ್ ಸರ್ಕಾರ!

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಜೆಎನ್'ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ, ಸಿಪಿಐ ನಾಯಕ ವಿರುದ್ಧದ ದೇಶದ್ರೋಹ ಪ್ರಕರಣದ ವಿಚಾರಣೆಗೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಗ್ರೀನ್ ಸಿಗ್ನಲ್ ಕೊಟ್ಟಿದೆ. ಕನ್ಹಯ್ಯಾ ವಿರುದ್ಧದ ವಿಚಾರಣೆಗೆ ಸೈ ಎಂದಿರುವ ಆಪ್ ಸರ್ಕಾರ ಪ್ರಾಸಿಕ್ಯೂಶನ್ ವಕೀಲರನ್ನೂ ಕೂಡ ನೇಮಕ ಮಾಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಕನ್ಹಯ್ಯಾ ಕುಮಾರ್ ವಿರುದ್ಧದ ದೇಶದ್ರೋಹದ ಪ್ರಕರಣ ನ್ಯಾಯಾಯಲಯದಲ್ಲಿ ವಿಚಾರಣೆಗೆ ಬರಲಿದೆ. ಇನ್ನು ತಮ್ಮ ವಿರುದ್ಧದ ದೇಶದ್ರೋಹ ಪ್ರಕರಣದ ವಿಚಾರಣೆಯನ್ನು ಸ್ವಾಗತಿಸಿರುವ ಕನ್ಹಯ್ಯಾ ಕುಮಾರ್, ಈ ಕಾರಣಕ್ಕೆ ದೆಹಲಿ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕನ್ಹಯ್ಯಾ ಕುಮಾರ್, ವಿಚಾರಣೆಗೆ ಸಮ್ಮತಿಸಿದ ಆಪ್ ಸರ್ಕಾರಕ್ಕೆ ಧನ್ಯವಾದಗಳು. ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಸುವಂತೆ ಆಪ್ ಸರ್ಕಾರಕ್ಕೆ ಮನವಿ ಮಾಡುತ್ತಿದ್ದು, ಶೀಘ್ರ ನ್ಯಾಯ ದೊರೆಯುವ ಭರವಸೆ ಇದೆ ಎಂದು ಹೇಳಿದ್ದಾರೆ. ಸರ್ಕಾರಗಳು ದೇಶದ್ರೋಹ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ವಿಚಾರಣೆಯ ಮೂಲಕ ಇದಕ್ಕೆ ಬ್ರೇಕ್ ಬಿದ್ದರೆ ತಮಗೆ ಅದಕ್ಕಿಂತ ಆನಂದ ಮತ್ತೊಂದಿಲ್ಲ ಎಂದು ಕನ್ಹಯ್ಯಾ ಕುಮಾರ್ ಟ್ವೀಟ್ ಮಾಡಿದ್ದಾರೆ. 2016ರ ಫೆಬ್ರವರಿಯಲ್ಲಿ ಜೆಎನ್'ಯು ಕ್ಯಾಂಪಸ್'ನಲ್ಲಿ ಮಾತನಾಡಿದ್ದ ಕನ್ಹಯ್ಯಾ ಕುಮಾರ್ ಹಾಗೂ ಬೆಂಬಲಿಗರು ದೇಶದ ವಿರುದ್ಧ ಘೋಷಣೆ ಕೂಗಿದ ಆರೋಪ ಕೇಳಿ ಬಂದಿತ್ತು. ವಿಚಿತ್ರ ಎಂದರೆ ಕನ್ಹಯ್ಯಾ ಕುಮಾರ್ ಅವರ ಅಂದಿನ ಭಾಷಣವನ್ನು ಖುದ್ದು ಅರವಿಂದ್ ಕೇಜ್ರಿವಾಲ್ ಶ್ಲಾಘಿಸಿದ್ದರು. ಇದೀಗ ಕನ್ಹಯ್ಯಾ ವಿರುದ್ಧದ ದೇಶದ್ರೋಹದ ಪ್ರಕರಣದ ವಿಚಾರಣಗೆ ಮುಂದಾಗಿರುವುದು ಕುತೂಹಲ ಮೂಡಿಸಿದೆ.


from India & World News in Kannada | VK Polls https://ift.tt/2Tcz577

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...