ಡಾನ್‌ ರವಿ ಪೂಜಾರಿ: ಇಲ್ಲಿ ಸಮಾಜಘಾತುಕ, ಅಲ್ಲಿ ಸಮಾಜ ಸೇವಕ!

ಸೆನೆಗಲ್‌ನಲ್ಲಿ ಕುಳಿತುಕೊಂಡು ಭಾರತದ ಉದ್ಯಮಿಗಳಿಗೆ, ನಟ-ನಟಿಯರಿಗೆ ಸುಲಿಗೆ ಬೆದರಿಕೆ ಕರೆಗಳನ್ನು ಮಾಡುತ್ತಿದ್ದ ಕ್ರಿಮಿನಲ್‌ ಅಲ್ಲಿ ಮಾತ್ರ ಸಭ್ಯತೆಯ ಸೋಗು ಹಾಕಿಕೊಂಡಿದ್ದ! ಹೋಟೆಲ್‌, ರೆಸ್ಟೋರೆಂಟ್‌, ಟೆಕ್ಸ್‌ಟೈಲ್ಸ್‌ ಮತ್ತು ಎಲೆಕ್ಟ್ರಾನಿಕ್ಸ್‌ ವ್ಯಾಪಾರಿಯಾಗಿ ಗುರುತಿಸಿಕೊಂಡಿದ್ದರಿಂದ ಸೆನೆಗಲ್‌ ದೇಶದ ಗುರುತಿನ ಚೀಟಿ, ಪಾಸ್‌ಪೋರ್ಟ್‌ ಸೇರಿದಂತೆ ಇತ್ಯಾದಿ ನಾಗರಿಕ ದಾಖಲೆಗಳನ್ನು ಪಡೆಯುವುದು ಕಷ್ಟವಾಗಲಿಲ್ಲ. ಸಾಲದ್ದಕ್ಕೆ ಸಮಾಜ ಸೇವಕನಾಗಿಯೂ ಗುರುತಿಸಿಕೊಂಡಿದ್ದ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್‌ಕುಮಾರ್‌ ಪಾಂಡೆ ಸೋಮವಾರ ತಿಳಿಸಿದ್ದಾರೆ. ''ಸೆನೆಗಲ್‌ನಲ್ಲಿ ಆತ ಯಾವುದೇ ಅಪರಾಧ ಕೃತ್ಯ ನಡೆಸಿರಲಿಲ್ಲ. ಬಡವರಿಗೆ ಬಟ್ಟೆ ಕೊಡಿಸುವುದು, ಕುಡಿಯುವ ನೀರಿಗಾಗಿ ಪಂಪ್‌ಸೆಟ್‌ಗಳನ್ನು ಕೊಡಿಸುವುದೂ ಸೇರಿದಂತೆ ನಾನಾ ರೀತಿಯ ಸಾಮಾಜಿಕ ಚಟುವಟಿಕೆ ಮಾಡುತ್ತಿದ್ದ. ಇದರಿಂದ ಸ್ಥಳೀಯವಾಗಿ ಈತನಿಗೆ ಬಹಳ ಬೆಂಬಲ ಇತ್ತು. ಸ್ಥಳಿಯವಾಗಿ ಯಾವುದೇ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳದಿದ್ದರಿಂದ ಅಲ್ಲಿನ ಪೊಲೀಸರೂ ಈತನ ಮೇಲೆ ಕಣ್ಣಿಟ್ಟಿರಲಿಲ್ಲ,'' ಎಂದು ಅವರು ತಿಳಿಸಿದರು. ''ಈತ ಭಾರತಕ್ಕೆ ಬೇಕಾದ ಕುಖ್ಯಾತ ಆರೋಪಿ ಎನ್ನುವುದನ್ನು ದಾಖಲೆಗಳ ಸಮೇತ ಸೆನೆಗಲ್‌ ದೇಶಕ್ಕೆ ಮತ್ತು ಭಾರತದ ರಾಯಭಾರ ಕಚೇರಿಗೆ ಸಲ್ಲಿಸಿದಾಗ ಇಂಟರ್‌ಪೋಲ್‌ ಅಧಿಕಾರಿಗಳ ಮೂಲಕ 2019ರ ಜನವರಿಯಲ್ಲಿ ಆರೋಪಿಯನ್ನು ಬಂಧಿಸುವುದು ಸಾಧ್ಯ ಆಗಿತ್ತು,'' ಎಂದರು. 3 ಹೆಸರು, 2 ನಕಲಿ ಪಾಸ್‌ಪೋರ್ಟ್‌ರವಿಗೆ ಪೋಷಕರು ಇಟ್ಟ ಹೆಸರು ರವಿ ಪ್ರಕಾಶ್‌ ಪೂಜಾರಿ , ಮುಂಬೈ ಭೂಗತ ಲೋಕದ ಗುರು ಇಟ್ಟ ಹೆಸರು ಅಂತೋಣಿ ಫರ್ನಾಂಡೀಸ್‌, ಭಾರತದಿಂದ ಪರಾರಿ ಆಗಿ ಬರ್ಕಿನೋಫಾಸೋದಲ್ಲಿ ನೆಲೆಸಿದಾಗ ಇಟ್ಟುಕೊಂಡ ಹೆಸರು ರಿಕ್ಕಿ ಫರ್ನಾಂಡೀಸ್‌! ಮುಂಬೈನಲ್ಲಿ ಪ್ರಮುಖ ಕೊಲೆ ಪ್ರಕರಣಗಳ ಬಳಿಕ ಪೂಜಾರಿ ತಾನು ಮೈಸೂರಿನ ನಿವಾಸಿ ಎಂದು ನಕಲಿ ವಿಳಾಸ, ನಕಲಿ ಹೆಸರಿನಲ್ಲಿ ಪಾಸ್‌ಪೋರ್ಟ್‌ ಮಾಡಿಸಿಕೊಂಡು ನೇಪಾಳಕ್ಕೆ ಪರಾರಿಯಾಗಿದ್ದ. ಬಳಿಕ ಅಲ್ಲಿಂದ ಉಗಾಂಡಾ ಮೂಲಕ ಬರ್ಕಿನೋಫಾಸೋ ತಲುಪಿದ. ಬರ್ಕಿನೋಫಾಸೋದಲ್ಲಿ ಟೋನಿ ಫರ್ನಾಂಡೀಸ್‌ ಹೆಸರಿನಲ್ಲಿ ಮತ್ತೊಂದು ನಕಲಿ ಪಾಸ್‌ಪೋರ್ಟ್‌ ಮಾಡಿಸಿ ಆ ಪಾಸ್‌ಪೋರ್ಟ್‌ನಲ್ಲಿ ಸೆನೆಗಲ್‌ ತಲುಪಿದ್ದ! 19 ತಿಂಗಳ ಶತಪ್ರಯತ್ನ 2018ರ ಜುಲೈ 18: ರವಿ ಪೂಜಾರಿ ಬಂಧನಕ್ಕೆ ಸರಕಾರ ಸೂಚನೆ 2018ರ ಡಿಸೆಂಬರ್‌: ರವಿ ಸೆನೆಗಲ್‌ನಲ್ಲೇ ಇರುವುದು ದೃಢ 2019 ಜ.31: ಸೆನೆಗಲ್‌ನ ಸಲೂನ್‌ನಲ್ಲಿ ಪೂಜಾರಿ ಬಂಧನ 2020 ಫೆ.19: ಹಸ್ತಾಂತರ ವಿರುದ್ಧ ಸೆನೆಗಲ್‌ ಕೋರ್ಟ್‌ಗೆ, ಕೋರ್ಟ್‌ ತಿರಸ್ಕಾರ ಫೆಬ್ರವರಿ 20: ಸೆನೆಗಲ್‌ ತಲುಪಿದ ಕರ್ನಾಟಕ ಪೊಲೀಸರು ಫೆಬ್ರವರಿ 22: ಕಾನೂನು ಪ್ರಕ್ರಿಯೆ ಮುಗಿಸಿ ವಶಕ್ಕೆ ಫೆಬ್ರವರಿ 23ರ ಮಧ್ಯರಾತ್ರಿ ಬೆಂಗಳೂರಿಗೆ ಆಗಮನ ರವಿ ಪೂಜಾರಿಯನ್ನು ಬೆಂಗಳೂರಿಗೆ ಕರೆತಂದ ತಂಡದ ನೇತೃತ್ವ ವಹಿಸಿದ್ದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್‌ಕುಮಾರ್‌ ಪಾಂಡೆ ಅವರು ಸೋಮವಾರ ಮಾಧ್ಯಮಗಳಿಗೆ ವಿವರ ನೀಡಿದರು. ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಜತೆಗಿದ್ದರು. ಆರೋಪಿಯನ್ನು ಸೋಮವಾರ ಬೆಳಗ್ಗೆ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ರವಿ ಪೂಜಾರಿ ವಿರುದ್ಧ ರಾಜ್ಯದಲ್ಲಿರುವ 97 ಪ್ರಕರಣಗಳ ಬಗ್ಗೆ ಪೊಲೀಸರು ಹಂತ ಹಂತವಾಗಿ ಮಾಹಿತಿ ಪಡೆಯಲಿದ್ದಾರೆ. ಒಂದುವರೆ ವರ್ಷದ ಹಿಂದೆ ಸೆನೆಗಲ್‌ನಲ್ಲಿ ಸಿಕ್ಕಿಬಿದ್ದ ಪಾತಕಿ ತಾನು ರವಿ ಪೂಜಾರಿ ಅಲ್ಲವೇ ಅಲ್ಲ, ಸೆನೆಗಲ್‌ ಪ್ರಜೆ ಎಂದು ವಾದಿಸಿ ಅಲ್ಲಿನ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿದ್ದ. ಅಂತಿಮವಾಗಿ ಕೋರ್ಟ್‌ ಆತನ ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಕರೆ ತರಲು ಸಾಧ್ಯವಾಯಿತು. ಅಲ್ಲಿನ ತನಿಖಾ ಸಂಸ್ಥೆಗಳೂ ಸಹಕರಿಸಿದವು.


from India & World News in Kannada | VK Polls https://ift.tt/2PnkHGB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...