ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತಿಚೀಗಷ್ಟೇ ಅಧಿಕಾರಕ್ಕೆ ಬಂದ ನೇತೃತ್ವದ ಪಕ್ಷ ತೀವ್ರ ಮುಜುಗರ ಎದುರಿಸುವಂತಾಗಿದೆ. ಸಿಎಎ ದಂಗೆಯಲ್ಲಿ ಪಕ್ಷದ ಶಾಸಕ ಪಾತ್ರ ಇರುವುದನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ತಾಹೀರ್ ಹುಸೇನ್ ವಿರುದ್ಧ ಸಿಎಎ ದಂಗೆಗೆ ಪ್ರಚೋದನೆ ನೀಡಿದ ಆರೋಪ ಹೊರಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಿಕೊಳ್ಳಲಳಾಗಿದೆ. ಈ ಹಿನ್ನೆಲೆಯಲ್ಲಿ ತಾಹೀರ್ ಹುಸೇನ್ ಅವರನ್ನು ಪಕ್ಷದಿಂದ ಅಮಾನತು ಮಾಡಿ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ. ದಂಗೆಯ ಸಂದರ್ಭದಲ್ಲಿ ಉದ್ರಿಕ್ತ ಗುಂಪೊಂದು ಗುಪ್ತಚರ ಇಲಾಖೆ ಅಧಿಕಾರಿ ಅಂಕತ್ ಶರ್ಮಾ ಅವರ ಮೇಲೆ ದಾಳಿ ಮಾಡಿ ಹತೈಗೈದಿತ್ತು. ತಾಹೀರ್ ಹುಸೇನ್ ವಿರುದ್ಧ ಇದೀಗ ಅಂಕಿತ್ ಶರ್ಮಾ ಅವರ ಕೊಲೆಗೆ ಪ್ರಚೋದನೆ ನೀಡಿದ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ತಾಹೀರ್ ಹುಸೇನ್ ಅವರನ್ನು ಆಪ್ ಅಮಾನತುಗೊಳಿಸಲಾಗಿದೆ. ತಾಹೀರ್ ಹುಸೇನ್ ಬೆಂಬಲಿಗರು ತಮ್ಮ ಪುತ್ರನನ್ನು ಹತೈಗೈದಿದ್ದಾರೆ ಎಂದು ಅಂಕತ್ ಶರ್ಮಾ ತಂದೆ ರವೀಂದ್ರ ಶರ್ಮಾ ಹೇಳಿದ್ದು, ತಾಹೀರ್ ಅಣತಿಯಂತೆಯೇ ಹತ್ಯೆ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ತಾಹೀರ್ ಹಿಂಸೆಗೆ ಪ್ರಚೋದನೆ ನೀಡುತ್ತಿರುವ ದೃಶ್ಯ ಸೆರೆಯಾಗಿದೆ. ಆದರೆ ವಿಡಿಯೋದಲ್ಲಿ ತಾವಿರುವುದು ನಿಜವಾದರೂ ತಮ್ಮ ವಿರುದ್ಧ ನಡೆದ ಹಲ್ಲೆಯ ಕುರಿತು ಉಲ್ಲೇಖಿಸಿದ್ದಾಗಿ ತಾಹೀರ್ ಸ್ಪಷ್ಟಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತನಿಖೆ ಪೂರ್ಣಗೊಳ್ಳುವವರೆಗೂ ತಾಹೀರ್ ಹುಸೇನ್ ಅವರನ್ನು ಪಕ್ಷದಿಂದ ಅಮಾನತು ಮಾಡಿ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ. ನಿನ್ನೆಯಷ್ಟೇ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಅರವಿಂದ್ ಕೇಜ್ರಿವಾಲ್, ದಂಗೆಯಲ್ಲಿ ತಮ್ಮ ಪಕ್ಷದ ಶಾಸಕರ ಪಾತ್ರವಿದ್ದರೆ ಅವರಿಗೆ ಇಮ್ಮಡಿ ಶಿಕ್ಷೆ ನೀಡಿ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
from India & World News in Kannada | VK Polls https://ift.tt/2VuVE8E