'ಡಯಾನಾ ಬೆಂಚ್‌' ಹಿನ್ನೆಲೆ ತಿಳಿದು ಕುಳಿತುಕೊಳ್ಳದ ಮೆಲೆನಿಯಾ, ನಿಂತೇ ಪೋಟೋಗೆ ಪೋಸ್!

ಆಗ್ರಾ: ಟ್ರಂಪ್‌ ದಂಪತಿ ಐತಿಹಾಸಿಕ ಪ್ರೇಮಗೋಪುರ ''ಗೆ ಭೇಟಿ ನೀಡಿ ಸೌಂದರ್ಯ ಕಣ್ತುಂಬಿಕೊಂಡರು. ಸೂರ್ಯಾಸ್ತಕ್ಕೆ ಮೊದಲು ತಾಜ್‌ಮಹಲ್‌ ಪ್ರವೇಶಿಸಿದ ಗಣ್ಯ ದಂಪತಿ, ಕೈಕೈ ಹಿಡಿದು ಪ್ರಾಂಗಣದಲ್ಲಿ ಹೆಜ್ಜೆ ಹಾಕಿದರು. ಪ್ರೇಮಸೌಧದ ಮುಂಭಾಗದಲ್ಲಿ ನಿಂತು ಫೋಟೊಗೆ ಪೋಸ್‌ ನೀಡಿದರು. ಆದರೆ ಮೆಲೆನಿಯಾ ಅವರು '' ಮೇಲೆ ಕುಳಿತುಕೊಳ್ಳದೇ ಮುಂದೆ ನಡೆದದ್ದು ಗಮನ ಸೆಳೆಯಿತು. 1992ರಲ್ಲಿ ಇಂಗ್ಲೆಂಡ್‌ ರಾಣಿ ಡಯಾನಾ ಇಲ್ಲಿಗೆ ಭೇಟಿ ನೀಡಿ, ಈ ಬೆಂಚ್‌ ಮೇಲೆ ಒಂಟಿಯಾಗಿ ಕುಳಿತು ಫೋಟೊ ತೆಗೆಸಿಕೊಂಡ ಬಳಿಕ ಅದಕ್ಕೆ 'ಡಯಾನಾ ಬೆಂಚ್‌' ಎಂದು ಹೆಸರು ಬಂದಿತ್ತು. ಈ ಹಿನ್ನೆಲೆ ತಿಳಿದ ಮೆಲೆನಿಯಾ, ಅದರ ಮೇಲೆ ಕುಳಿತು ಫೋಟೊ ಪೋಸ್‌ ನೀಡುವ ಬದಲು ನಿಂತುಕೊಂಡೇ ಚಿತ್ರ ತೆಗೆಸಿಕೊಂಡರು. ಟ್ರಂಪ್‌ ಪುತ್ರಿ ಇವಾಂಕಾ ಮತ್ತು ಅವರ ಪತಿ ಜಾರೇಡ್‌ ಕುಷ್ನರ್‌ ಸಹ ತಾಜ್‌ಮಹಲ್‌ ಎದುರು ಫೋಟೊಗೆ ಪೋಸ್‌ ನೀಡಿ ಖುಷಿ ಪಟ್ಟರು. 'ತಾಜ್‌ಮಹಲ್‌ ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಸೌಂದರ್ಯದ ಪ್ರತೀಕ' ಎಂದು ಟ್ರಂಪ್‌ ದಂಪತಿ ಸಂದರ್ಶಕರ ಪುಸ್ತಕದಲ್ಲಿ ದಾಖಲಿಸಿದರು.


from India & World News in Kannada | VK Polls https://ift.tt/2VqoWF4

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...