ಬಸ್‌ ಟಿಕೆಟ್‌ ದರ ಏರಿಕೆ: ಗ್ರಾಮೀಣ ಪ್ರದೇಶಕ್ಕೆ ವಿನಾಯಿತಿ, ಇಲ್ಲಿದೆ ಪರಿಷ್ಕೃತ ದರ ಪಟ್ಟಿ

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಗಳ ಬಸ್‌ ಪ್ರಯಾಣ ದರವನ್ನು ಶೇ.12ರಷ್ಟು ಹೆಚ್ಚಳ ಮಾಡಲಾಗಿದೆ. ಮಂಗಳವಾರ ಮಧ್ಯರಾತ್ರಿಯಿಂದಲೇ ದರ ಪರಿಷ್ಕರಣೆ ಜಾರಿಗೆ ಬಂದಿದೆ. ಬಿಎಂಟಿಸಿ ಹೊರತುಪಡಿಸಿ , ವಾಯವ್ಯ ಸಾರಿಗೆ ಹಾಗೂ ಈಶಾನ್ಯ ಸಾರಿಗೆ ಈ ಮೂರು ನಿಗಮಗಳ ಬಸ್‌ ಪ್ರಯಾಣ ದರವನ್ನು ಮಾತ್ರ ಹೆಚ್ಚಳ ಮಾಡಲಾಗಿದೆ. ವೋಲ್ವೊ ಬಸ್‌ ಪ್ರಯಾಣದ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸುಮಾರು 6 ವರ್ಷಗಳ ಬಳಿಕ ದರ ಏರಿಸಲಾಗಿದೆ. ಮೇ 2014ರಲ್ಲಿ ಪ್ರಯಾಣ ದರ ಹೆಚ್ಚಿಸಲಾಗಿತ್ತು. ತೈಲ ದರ ಹೆಚ್ಚಳ, ಸಿಬ್ಬಂದಿ ವೇತನ ಪರಿಷ್ಕರಣೆ, ತುಟ್ಟಿಭತ್ಯೆ ಹೆಚ್ಚಳದ ಹೊರೆ ಸರಿದೂಗಿಸಲು ಶೇ.20 ಪ್ರಯಾಣ ದರ ಏರಿಕೆಗೆ ಸಾರಿಗೆ ನಿಗಮಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಶೇ.12ರಷ್ಟು ಏರಿಕೆಗೆ ಸರಕಾರ ಮಂಗಳವಾರ ಅನುಮೋದನೆ ನೀಡಿದೆ. ಗ್ರಾಮೀಣರಿಗೆ ರಿಲೀಫ್‌ಗ್ರಾಮೀಣ ಪ್ರದೇಶಗಳ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಮೊದಲ 3 ಕಿ.ಮೀ ಪ್ರಯಾಣಕ್ಕೆ 7 ರೂ. ಇದ್ದ ಹಾಲಿ ಪ್ರಯಾಣ ದರವನ್ನು 5 ರೂ.ಗೆ ಇಳಿಸಲಾಗಿದ್ದು, 2 ರೂ. ಕಡಿತ ಮಾಡಲಾಗಿದೆ. ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಮೊದಲ 12 ಮತ್ತು 15 ಕಿ.ಮೀ ಪ್ರಯಾಣಿಸುವ ಪ್ರಯಾಣಿಕರ ದರವನ್ನು ಹೆಚ್ಚಿಸಿಲ್ಲ. ವೇಗದೂತ ಸಾರಿಗೆಗಳಲ್ಲಿ ಮೊದಲ 6 ಕಿ.ಮೀ ಪ್ರಯಾಣಕ್ಕೆ ಹಾಲಿ ದರವನ್ನೇ ಮುಂದುವರಿಸಲಾಗಿದೆ. ನಷ್ಟ ಸರಿದೂಗಿಸುವ ಅನಿವಾರ್ಯತೆ2014ರಲ್ಲಿ ದರ ಪರಿಷ್ಕರಣೆ ನಂತರ ಡೀಸೆಲ್‌ ತೈಲದ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ಒಟ್ಟು 11.27 ರೂ. ಹೆಚ್ಚಳವಾಗಿದೆ. ಇದರಿಂದ ಕೆಎಸ್ಸಾರ್ಟಿಸಿ ನಿಗಮವೊಂದಕ್ಕೇ ವಾರ್ಷಿಕ 260.83 ಕೋಟಿ ರೂ. ಆರ್ಥಿಕ ಹೊರೆಯಾಗಿದೆ. ಸಂಸ್ಥೆಯ ನೌಕರರಿಗೆ ತುಟ್ಟಿಭತ್ಯೆ ಪರಿಷ್ಕರಣೆಯಿಂದ ವಾರ್ಷಿಕ ಒಟ್ಟಾರೆ 601.21 ಕೋಟಿ ರೂ. ಹೆಚ್ಚುವರಿ ವೆಚ್ಚವಾಗುತ್ತಿದೆ. ಈ ಆರ್ಥಿಕ ಹೊರೆಗಳನ್ನು ಸರಿದೂಗಿಸಲು ಬಸ್‌ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ ಎಂದು ಸಮಜಾಯಿಷಿ ನೀಡಲಾಗಿದೆ. ವಾಪಸ್‌ ಪಡೆದಿದ್ದ ಹಿಂದಿನ ಸರಕಾರಹಿಂದಿನ ಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿ ಸರಕಾರದ ಅವಧಿಯಲ್ಲಿ ಬಸ್‌ ಪ್ರಯಾಣ ದರ ಏರಿಕೆಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ದರ ಪರಿಷ್ಕರಣೆ ಆದೇಶ ನಿರ್ಧಾರ ಪ್ರಕಟಿಸಿದ್ದರು. ಆದರೆ, ಬಳಿಕ ತೀರ್ಮಾನವನ್ನು ಹಿಂಪಡೆಯಲಾಗಿತ್ತು. ಬಿಎಂಟಿಸಿ ಪ್ರಯಾಣಿಕರು ನಿರಾಳಬಿಎಂಟಿಸಿ ಬಸ್‌ ಪ್ರಯಾಣ ದರ ಏರಿಕೆ ಮಾಡಿಲ್ಲ. ಬಿಎಂಟಿಸಿ ನಿತ್ಯ ಸುಮಾರು 1 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಆದರೆ, ಸಮೂಹ ಸಾರಿಗೆ ವ್ಯವಸ್ಥೆಗೆ ಶಕ್ತಿ ತುಂಬುವ ಉದ್ದೇಶದಿಂದ ದರ ಏರಿಸಿಲ್ಲ. ಖಾಸಗಿ ಬಸ್‌ಗಳಿಗೆ ಪೈಪೋಟಿ ನೀಡಲು ಐಷಾರಾಮಿ ವೋಲ್ವೋ ಬಸ್‌ಗಳ ಪ್ರಯಾಣ ದರದಲ್ಲೂ ಯಥಾಸ್ಥಿತಿ ಮುಂದುವರಿಸಲಾಗಿದೆ. ಸಾರಿಗೆ ನಿಗಮಗಳಿಂದ ಬಸ್‌ ಪ್ರಯಾಣ ದರ ಹೆಚ್ಚಳಕ್ಕೆ 6 ವರ್ಷಗಳಿಂದ ಪ್ರಸ್ತಾವನೆ ಇತ್ತು. ಶೇ.20 ಏರಿಕೆಗೆ ಪ್ರಸ್ತಾವನೆ ಇತ್ತಾದರೂ, ಶೇ.12 ದರ ಹೆಚ್ಚಳ ಮಾಡಲಾಗಿದೆ. ಬಿಎಂಟಿಸಿ ಪ್ರತಿದಿನ ಒಂದು ಕೋಟಿ ರೂ.ಗಳಿಗೂ ಹೆಚ್ವು ನಷ್ಟ ಅನುಭವಿಸುತ್ತಿದೆ. ಆದರೂ, ಬಿಎಂಟಿಸಿ ಬಸ್‌ ಪ್ರಯಾಣ ದರ ಏರಿಕೆ ಮಾಡಿಲ್ಲ. - ಲಕ್ಷ್ಮಣ ಸವದಿ, ಸಾರಿಗೆ ಸಚಿವ ಹಾಗೂ ಡಿಸಿಎಂ.


from India & World News in Kannada | VK Polls https://ift.tt/39117YC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...