ದೇಶ ತೊರೆಯಲು ಬಾಂಗ್ಲಾದೇಶದ ವಿದ್ಯಾರ್ಥಿನಿಗೆ ಕೇಂದ್ರದ ಸೂಚನೆ!

ಕೋಲ್ಕೊತಾ: ನಗರದ ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಬಾಂಗ್ಲಾದೇಶದ ವಿದ್ಯಾರ್ಥಿನಿ ಅಫ್ಸರಾ ಅನಿಕಾ ಮೀಮ್‌ ಅವರಿಗೆ ದೇಶ ತೊರೆಯುವಂತೆ ಕೇಂದ್ರ ಗೃಹ ಸಚಿವಾಲಯವು ಆದೇಶಿಸಿದೆ. ಕೇಂದ್ರ ಸರಕಾರದ ವಿರುದ್ಧದ ಚಟುವಟಿಕೆಗಳಲ್ಲಿ ಭಾಗವಹಿಸಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿದ್ದು, ವೀಸಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ತಿಳಿಸಲಾಗಿದೆ. ಕೋಲ್ಕೊತಾದಲ್ಲಿರುವ ಗೃಹ ಸಚಿವಾಲಯದ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಮೂಲಕ 'ಲೀವ್‌ ಇಂಡಿಯಾ ನೋಟಿಸ್‌' ಜಾರಿಗೊಳಿಸಲಾಗಿದೆ. 15 ದಿನಗಳ ಒಳಗಾಗಿ ಭಾರತ ತೊರೆಯುವಂತೆ ಸೂಚನೆ ನೀಡಲಾಗಿದೆ. ಅಫ್ಸರಾ ಕೆಲದಿನಗಳ ಹಿಂದೆ ಶಾಂತಿನಿಕೇತನದಲ್ಲಿ ನಡೆದ ಪೌರತ್ವ ತಿದ್ದುಪಡಿ ವಿಧೇಯಕ ವಿರೋಧಿ ಹೋರಾಟದ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದರು. ಇದು ಟ್ರೋಲ್‌ ಆಗಿತ್ತಲ್ಲದೇ ಆಕೆಯನ್ನು 'ಬಾಂಗ್ಲಾದೇಶಿ ಟೆರರಿಸ್ಟ್‌' ಎಂದು ಟೀಕಿಸಲಾಗಿತ್ತು. ನೋಟಿಸ್‌ನಿಂದ ಅಫ್ಸರಾ ಆಘಾತಗೊಂಡಿರುವುದಾಗಿ ಆಕೆಯ ಸ್ನೇಹಿತೆಯುರು ತಿಳಿಸಿದ್ದಾರೆ. ಸಿಪಿಎಂ ನಾಯಕ ಮೊಹಮದ್‌ ಸಲೀಮ್‌ ಕೇಂದ್ರ ಸರಕಾರದ ಕ್ರಮವನ್ನು ಟೀಕಿಸಿದ್ದಾರೆ.


from India & World News in Kannada | VK Polls https://ift.tt/2uDMlYM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...