ನವದೆಹಲಿ: ರಾಷ್ಟ್ರೀಯ ವಿಜ್ಞಾನ ದಿನದ (ಫೆ.28) ಅಂಗವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ದೇಶದ ವಿಜ್ಞಾನಿಗಳ ಪ್ರತಿಭೆ ಮತ್ತು ಸ್ಥಿರತೆಗೆ ಧನ್ಯವಾದ ತಿಳಿಸಲು ಇದು ಸುಸಂದರ್ಭ. ಅವರ ನವೀನ ಸಂಶೋಧನೆಗಳು ದೇಶಕ್ಕೆ ಹಾಗೂ ಇಡೀ ಪ್ರಪಂಚಕ್ಕೆ ಉಪಯೋಗಕಾರಿಯಾಗಿವೆ. ಇತ್ತೀಚೆಗೆ ನಡೆದ 'ಭಾರತೀಯ ಸೈನ್ಸ್ ಕಾಂಗ್ರೆಸ್' ನಲ್ಲಿ ವಿಜಾನ ಕ್ಷೇತ್ರದ ಕುರಿತಂತೆ ಮಾತನಾಡಿದ್ದೆ. ಅದನ್ನು ಇಲ್ಲಿ ಮತ್ತೆ ಹಂಚಿಕೊಳ್ಳುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಭಾರತೀಯ ವಿಜ್ಞಾನವು ಪ್ರವರ್ಧಮಾನಕ್ಕೆ ಬರಲಿ ಮತ್ತು ನಮ್ಮ ಯುವ ಮನಸ್ಸುಗಳು ವಿಜ್ಞಾನದ ಬಗ್ಗೆ ಇನ್ನೂ ಹೆಚ್ಚಿನ ಕುತೂಹಲವನ್ನು ಬೆಳೆಸಿಕೊಳ್ಳಲಿ ಎಂದು ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ. ಪ್ರಪಂಚ ಕಂಡ ಭಾರತದ ಶ್ರೇಷ್ಠ ವಿಜ್ಞಾನಿ ಸಿ.ವಿ. ರಾಮನ್ ಅವರ ನೆನಪಿಗಾಗಿ ದೇಶದಲ್ಲಿ ವಿಜ್ಞಾನ ದಿನವನ್ನು ಆಚರಣೆ ಮಾಡಲಾಗುತ್ತದೆ. 1928 ರ ಫೆಬ್ರವರಿ 28ರಂದು ಭೌತಶಾಸ್ತ್ರಜ್ಞ ಸರ್.ಸಿ.ವಿ.ರಾಮನ್ ಅವರು ರಾಮನ್ ಪರಿಣಾಮ (ರಾಮನ್ ಎಫೆಕ್ಟ್) ಸಿದ್ದಾಂತವನ್ನು ವಿಶ್ವಕ್ಕೆ ಪರಿಚಯಿಸಿದ್ದರು. ಅದರ ಸವಿನೆನಪಿಗಾಗಿ ಫೆಬ್ರವರಿ 28ನ್ನು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ.
from India & World News in Kannada | VK Polls https://ift.tt/3adRdTO