ಹೊಸದಿಲ್ಲಿ: ಅಮೆರಿಕದ ಪ್ರಮುಖ ಸುದ್ದಿ ವೆಬ್ಸೈಟ್ ವಾಲ್ ಸ್ಟ್ರೀಟ್ ಜರ್ನಲ್ (ಡಬ್ಲ್ಯುಎಸ್ಜೆ) ಕೊಲೆಗೀಡಾದ ಅಂಕಿತ್ ಶರ್ಮಾ ಅವರ ಸಹೋದರ ಅಂಕುರ್ ಶರ್ಮಾ ಅವರನ್ನು ಉಲ್ಲೇಖಿಸಿ, 'ಜೈ ಶ್ರೀ ರಾಮ್' ಎಂದು ಜಪಿಸುತ್ತಿದ್ದವರು ಅಂಕಿತ್ ಶರ್ಮಾರನ್ನು ಹತ್ಯೆ ಮಾಡಿದ್ದಾರೆ ಎಂದು ವರದಿ ಮಾಡಿದೆ. ವಾಲ್ ಸ್ಟ್ರೀಟ್ ಜರ್ನಲ್ ವರದಿ ಏನು ಹೇಳಿದೆ? ದಿಲ್ಲಿ ಹಿಂಸಾಚಾರದಲ್ಲಿ ಭಾರತದ ಆಡಳಿತಾರೂಢ ಪಕ್ಷ ಹಾಗೂ ಸರಕಾರದ ವಿರುದ್ಧ ಟೀಕೆ ಎಂದು ಶೀರ್ಷಿಕೆ ಉಪಯೋಗಿಸಿರುವ ವಾಲ್ ಸ್ಟ್ರೀಟ್ ಜರ್ನಲ್, ಕೊಲೆಗೀಡಾದ ಐಬಿ ಅಧಿಕಾರಿ ಅಂಕಿತ್ ಶರ್ಮಾ ಅವರ ಸಹೋದರ ಅಂಕುರ್ ಶರ್ಮಾರನ್ನು ಸಂರ್ಪಿಸಿದ್ದೇವೆ ಎಂದು ಹೇಳಿಕೊಂಡಿದೆ. ಈ ವರದಿ ಪ್ರಕಾರ ಅಂಕಿತ್ ಮನೆಗೆ ಹಿಂದಿರುಗುತ್ತಿದ್ದಾಗ ಗಲಭೆಕೋರರ ಗುಂಪು ಕಲ್ಲುಗಳನ್ನು ಎಸೆಯಲು ಪ್ರಾರಂಭಿಸಿತು ಮತ್ತು ಅವರ ಮನೆ ಇರುವ ಬೀದಿಯಲ್ಲಿ ದಾಳಿ ಮಾಡಿತ್ತು. ಅವರು ಕಲ್ಲುಗಳು, ಕಡ್ಡಿಗಳು, ಚಾಕುಗಳು ಮತ್ತು ಕತ್ತಿಗಳನ್ನು ಹಿಡಿದು ಶಸ್ತ್ರಸಜ್ಜಿತರಾಗಿದ್ದರು; ಅವರು 'ಜೈ ಶ್ರೀ ರಾಮ್' ಎಂದು ಕೂಗುತ್ತಿದ್ದರು; ಕೆಲವರು ಹೆಲ್ಮೆಟ್ಗಳನ್ನು ಸಹ ಧರಿಸಿದ್ದರು ಎಂದು ವಾಲ್ ಸ್ಟ್ರೀಟ್ ಜರ್ನಲ್ಗೆ ಅಂಕುರ್ ದೂರವಾಣಿ ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ಹೇಳಿಕೊಂಡಿದೆ. ಜತೆಗೆ, ಅಂಕಿತ್ಗೆ ಸಹಾಯ ಮಾಡಲು ಬಂದ ನಿವಾಸಿಗಳತ್ತ ಕಲ್ಲು, ಇಟ್ಟಿಗೆಗಳನ್ನು ಎಸೆಯಲು ಪ್ರಾರಂಭಿಸಿದರು, ನಂತರ, ಅವರ ದೇಹ ಮೋರಿಯಲ್ಲಿ ಪತ್ತೆಯಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ್ದಾರೆ. ಅಂಕುರ್ ಅವರನ್ನು ಉಲ್ಲೇಖಿಸಿದ ವರದಿಯ ಈ ವಾಕ್ಯಗಳ ಸ್ಕ್ರೀನ್ ಶಾಟ್ ಇಲ್ಲಿದೆ. ಈ ವರದಿಯನ್ನು ವಾಲ್ ಸ್ಟ್ರೀಟ್ ಜರ್ನಲ್ನ ಚಂದಾದಾರರು ಮಾತ್ರ ವೀಕ್ಷಿಸಬಹುದು. ಈ ಸಂಬಂಧ ಅಂಕುರ್ ಟೈಮ್ಸ್ ಫ್ಯಾಕ್ಟ್ ಚೆಕ್ಗೆ ಹೇಳಿದ್ದೇನು? ಅಂಕುರ್ ಶರ್ಮಾ ಅವರನ್ನು ಟೈಮ್ಸ್ ಫ್ಯಾಕ್ಟ್ ಚೆಕ್ ಸಂಪರ್ಕ ಮಾಡಿದೆ. ಟೈಮ್ಸ್ ಫ್ಯಾಕ್ಟ್ ಚೆಕ್ನೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ, ಹತ್ಯೆಗೀಡಾದ ಐಬಿ ಅಧಿಕಾರಿ ಅಂಕಿತ್ ಶರ್ಮಾ ಸಹೋದರ ಅಂಕುರ್ ವಾಲ್ ಸ್ಟ್ರೀಟ್ ಜರ್ನಲ್ಗೆ ಅಂತಹ ಯಾವುದೇ ಉಲ್ಲೇಖವನ್ನು ನೀಡಿರುವುದನ್ನು ನಿರಾಕರಿಸಿದರು. ಅವರು ಸುಳ್ಳು ಹೇಳುತ್ತಿದ್ದಾರೆ. ನನ್ನ ಸಹೋದರನನ್ನು ಆಮ್ ಆದ್ಮಿ ಪಕ್ಷದ ಕಾರ್ಪೊರೇಟರ್ (ನೆಹರೂ ವಿಹಾರ್) ತಾಹಿರ್ ಹುಸೇನ್ ಕಡೆಯ ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ ಎಂದು ನಾನು ಯಾವಾಗಲೂ ಹೇಳಿದ್ದೇನೆ. ಅವರು ಅಂಕಿತ್ ಮೇಲೆ ಹಲ್ಲೆ ನಡೆಸಿ ಹುಸೇನ್ ಮನೆಯೊಳಗೆ ಎಳೆದೊಯ್ದರು ಎಂದು ಅಂಕುರ್ ತಿಳಿಸಿದ್ದಾರೆ. ಈ ಹಿಂದೆ ಹಿಂದೂಸ್ತಾನ್ ಟೈಮ್ಸ್ನೊಂದಿಗೆ ಮಾತನಾಡಿದ್ದ ಅಂಕುರ್, ಉದ್ರಿಕ್ತ ಜನಸಮೂಹರ ಕೈಯಲ್ಲಿ ಅಂಕಿತ್ ಸಾವಿಗೆ ತಾಹಿರ್ ಹುಸೇನ್ ಸಂಚು ರೂಪಿಸಿದ್ದಾರೆ ಎಂದು ಆರೋಪ ಮಾಡಿದ್ದರು. ನನ್ನ ಸಹೋದರನನ್ನು ಹಿಡಿದುಕೊಂಡ ಜನಸಮೂಹವು ಹುಸೇನ್ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿತ್ತು. ಆ ಕಟ್ಟಡದ ಟೆರೇಸ್ನಿಂದಲೇ ಜನಸಮೂಹ ಕಲ್ಲುಗಳನ್ನು ಎಸೆಯುತ್ತಿತ್ತು ಎಂದು ಹತ್ಯೆಗೀಡಾದ ಅಂಕಿತ್ ಶರ್ಮಾ ಸಹೋದರ ಅಂಕುರ್ ಶರ್ಮಾ ಹಿಂದೂಸ್ತಾನ್ ಟೈಮ್ಸ್ ಮಾಧ್ಯಮಕ್ಕೆ ತಿಳಿಸಿದ್ದರು. ಅಂಕುರ್ ಜತೆ ದೂರವಾಣಿ ಸಂಭಾಷಣೆ ನಡೆಸಿದ್ದೇವೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿಕೊಂಡಿದ್ದು, ಈ ಬಗ್ಗೆ ನಮ್ಮ ಬಳಿ ದಾಖಲೆಗಳಿಲ್ಲ. ಈ ಹಿನ್ನೆಲೆ ಈ ಪ್ರಶ್ನಾರ್ಹ ವರದಿ ಬಗ್ಗೆ ನಾವು ಅವರನ್ನು ಸಂಪರ್ಕಿಸಿದ್ದೇವೆ. ಈ ಬಗ್ಗೆ ಅವರು ಪ್ರತಿಕ್ರಿಯಿಸಿದರೆ ಈ ವರದಿಯನ್ನು ನಾವು ನವೀಕರಿಸುತ್ತೇವೆ. ಟೈಮ್ಸ್ ಫ್ಯಾಕ್ಟ್ ಚೆಕ್ ಕೇವಲ ಸತ್ಯಾಂಶವನ್ನು ಹೇಳುತ್ತಿದೆ ಮತ್ತು ಯಾವುದೇ ತೀರ್ಮಾನವನ್ನು ಓದುಗರ ಮುಂದೆ ಇಡುತ್ತಿಲ್ಲ.
from India & World News in Kannada | VK Polls https://ift.tt/2VuRptq