ಮುಂಬಯಿ: ಅಪರೂಪದ ನಿದರ್ಶನವೊಂದರಲ್ಲಿ, ಮುಂಬೈನ ಸೆಷನ್ಸ್ ನ್ಯಾಯಾಲಯವು ಗರ್ಭಿಣಿಯಾಗಿದ್ದ ಸೋದರ ಸಂಬಂಧಿಯ ಹೊಟ್ಟೆಯೊಳಗಿದ್ದ ಭ್ರೂಣದ ಸಾವಿಗೆ ಕಾರಣವಾದ ಕಾರಣ 23 ವರ್ಷದ ಯುವಕನಿಗೆ ಮೂರೂವರೆ ವರ್ಷದ ಕಠಿಣ ಶಿಕ್ಷೆ ವಿಧಿಸಿದೆ. ಮುಂಬಯಿ ಮಹಾನಗರದ ಭಂಡಪ್‌ನಲ್ಲಿ ತನ್ನ 24 ವರ್ಷದ ಸೋದರಸಂಬಂಧಿ ಜತೆ 2017ರಲ್ಲಿ ಜಗಳವಾಡಿದಾಗ ಆಕೆಯ ಹೊಟ್ಟೆಗೆ ಹೊಡೆದು ಮಗು ಹುಟ್ಟುವ ಮುನ್ನವೇ ಸಾವಿಗೆ ಕಾರಣನಾದ ಎಂಬ ಆರೋಪದ ಮೇರೆಗೆ ಮುಂಬಯಿಯ ಸೆಷನ್ಸ್ ನ್ಯಾಯಾಲಯ ಈ ಶಿಕ್ಷೆ ನೀಡಿದೆ. ಮನೋಜ್ ಕರಾಖೆ ಎಂಬ ಆರೋಪಿ ಭಾರತೀಯ ದಂಡ ಸಂಹಿತೆಯ ವಿರಳವಾಗಿ ಬಳಸಲಾದ ಸೆಕ್ಷನ್ 316 ರ ಅಡಿಯಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದೆ. ಈ ಸೆಕ್ಷನ್‌ನಡಿ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಬಹುದು. ನೋವನ್ನುಂಟುಮಾಡಿದ ಆರೋಪದಡಿಯೂ ಆರೋಪಿಗೆ ಪ್ರತ್ಯೇಕವಾಗಿ ಶಿಕ್ಷೆಗೊಳಪಡಿಸಲಾಗಿದೆ. ಸಂತ್ರಸ್ತೆ, ಆಕೆಯ ತಾಯಿ, ಸಹೋದರಿ ಮತ್ತು ಪತಿ ಈ ಕೇಸ್‌ನ ಸಾಕ್ಷಿಯಾಗಿದ್ದರು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಾಂಜಲಿ ಜೋಶಿ ತಿಳಿಸಿದ್ದಾರೆ. ಘಟನೆಯ ಹಿನ್ನೆಲೆ ಏನು? ಒಂದು ಮಗುವಿನ ತಾಯಿಯಾಗಿರುವ ಸಂತ್ರಸ್ತೆ ತನ್ನ ಗಂಡನೊಂದಿಗೆ ವಾಸಿಸುತ್ತಿದ್ದು, ತನ್ನ ತಾಯಿ, ಸಹೋದರಿ ಮತ್ತು ಕರಾಖೆ ತಮ್ಮ ಮನೆಯ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅಕ್ಟೋಬರ್ 16, 2017 ರಂದು ಅಂದರೆ ಈ ಘಟನೆ ನಡೆದ ಸಮಯದಲ್ಲಿ ತಾನು ನಾಲ್ಕು ತಿಂಗಳ ಎಂದು ಅವರೆಲ್ಲರಿಗೂ ಮತ್ತು ಅವರ ಸಂಬಂಧಿಕರಿಗೂ ತಿಳಿದಿತ್ತು. ಬೆಳಿಗ್ಗೆ 10 ರ ಸುಮಾರಿಗೆ ಆರೋಪಿ ಮತ್ತು ಆಕೆಯ ಸಹೋದರಿ ನೀರು ತುಂಬುವ ವಿಚಾರದಲ್ಲಿ ಜಗಳವಾಡಿದ್ದಾರೆ. ಈ ವಿಚಾರದಲ್ಲಿ ತಾನು ಮಧ್ಯಪ್ರವೇಶಿಸಿದಾಗ ಆರೋಪಿ ತನ್ನನ್ನು ಮಾತಿನಿಂದ ನಿಂದಿಸಿದ್ದ. ಜತೆಗೆ ತಾನು ಗರ್ಭಿಣಿ ಎಂದು ತಿಳಿದಿದ್ದರೂ ತನ್ನ ಹೊಟ್ಟೆಗೆ ಹೊಡೆದಿದ್ದಾನೆ. ನಂತರ ತಾನು ಕೆಳಕ್ಕೆ ಬಿದ್ದು, ಪ್ರಜ್ಞಾಹೀನ ಸ್ಥಿತಿ ತಲುಪಿದೆ ಎಂದು ಸಂತ್ರಸ್ಥೆ ಭಂಡಪ್ ಪೊಲೀಸರಿಗೆ ಹೇಳಿಕೊಂಡಿದ್ದಾರೆ. ನಂತರ ತನ್ನ ಪತಿ ಹಾಗೂ ತನ್ನ ತಾಯಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ತನಗೆ ಮತ್ತೆ ಪ್ರಜ್ಞೆ ವಾಪಸ್ ಬಂತು. ನಂತರ ತಾನು ಗರ್ಭಿಣಿ ಎಂದು ವೈದ್ಯರಿಗೆ ಹೇಳಿದಾಗ ಕೂಡಲೇ ಸಿಯಾನ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಅವರು ಸೂಚಿಸಿದರು. ಬಳಿಕ ಕೂಡಲೇ ಆಂಬ್ಯುಲೆನ್ಸ್‌ನಲ್ಲಿ ಅಲ್ಲಿಗೆ ಧಾವಿಸಿ ಆಸ್ಪತ್ರೆಯಲ್ಲಿ ದಾಖಲಾದೆ. ಸೋನೋಗ್ರಫಿ ಪರೀಕ್ಷೆ ಬಳಿಕ ಭ್ರೂಣವು ಉಳಿದುಕೊಂಡಿಲ್ಲ ಮತ್ತು ಅಬಾರ್ಷನ್ ಮಾಡಿಸಿಕೊಳ್ಳಬೇಕಾಗುತ್ತದೆ ಎಂದೂ ಸಂತ್ರಸ್ಥೆ ಮಹಿಳೆ ತಿಳಿಸಿದ್ದಾರೆ. ಈ ಹಿನ್ನೆಲೆ ಭ್ರೂಣದ ಸಾವಿಗೆ ಆರೋಪಿ ಮನೋಜ್ ಕಾರಣ ಎಂದು ಸಂತ್ರಸ್ಥೆ ಆರೋಪಿಸಿದ್ದು, ಬಳಿಕ ಮರುದಿನ ಆತನ ವಿರುದ್ಧ ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿತ್ತು.
from India & World News in Kannada | VK Polls https://ift.tt/2vo5sqf