ಬೆಂಗಳೂರು: ಕಳೆದ ಕೆಲವು ದಿನಗಳಿಂದ ನಿರಂತರ ದಾಳಿ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ () ಅಧಿಕಾರಿಗಳು ಬೆಂಗಳೂರಿನಲ್ಲಿ ಸಿನಿಮೀಯ ರೀತಿಯಲ್ಲಿ ಉಗ್ರನನ್ನು ಚೇಸ್ ಮಾಡಿ ಬಂಧಿಸಿದ್ದಾರೆ. ಅಲ್ ಹಿಂದ್ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಸೈಯದ್ ಫಸಿವುರ್ ಅಲಿಯಾಸ್ ರೆಹಮಾನ್ ಬಂಧಿತ . ಮಹಬೂಬ್ ಪಾಪಾ ಮತ್ತು ಖ್ವಾಜಿ ತಂಡದೊಂದಿಗೆ ಈತ ನಂಟು ಹೊಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈತನನ್ನು ಎನ್ ಐಎ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಅಧಿಕಾರಿಗಳು. 4 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಡಿಜಿ ಹಳ್ಳಿಯ ಟ್ಯಾನರಿ ಸಮೀಪ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಫಜಿ ಉರ್ ರೆಹಮಾನ್ ಪರಾರಿಯಾಗಲು ಯತ್ನಿಸಿದ. ಕೂಡಲೇ ಅಧಿಕಾರಿಗಳು ಈತನನ್ನು ಬೆನ್ನಟ್ಟಿ ಬಂಧಿಸಿದರು. ಕಳೆದ 2 ದಿನಗಳಿಂದ ದೇಶದ 19 ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಏಕಕಾಲಕ್ಕೆ ಈ ಕಾರ್ಯಾಚರಣೆ ನಡೆಸಲಾಗಿದೆ. ಐಸಿಸ್ ಪ್ರಚೋದಿತ ಅಲ್ ಹಿಂದ್ ಉಗ್ರ ಸಂಘಟನೆಯಿಂದ ವಿಧ್ವಂಸಕ ಕೃತ್ಯಗಳಿಗೆ ಸಂಚು ಪ್ರಕರಣದಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
from India & World News in Kannada | VK Polls https://ift.tt/2VppQ50