ಬಿಎಸ್‌ವೈ ಸಂಪುಟ: ಖಾಲಿಯುಳಿಯುವ ಇನ್ನೂ ಮೂರು ಸ್ಥಾನ ಯಾರಿಗಾಗಿ ಮೀಸಲು?

ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ 16 ಸ್ಥಾನಗಳ ಪೈಕಿ 13 ಅನ್ನು ಭರ್ತಿ ಮಾಡಿ ಇನ್ನೂ ಮೂರನ್ನು ಬಾಕಿ ಉಳಿಸಿಕೊಳ್ಳುತ್ತಿರುವುದು ಏಕೆ? ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ 17 ಮಂದಿ ಶಾಸಕರ ಪೈಕಿ ರಾಣೆಬೆನ್ನೂರು ಅನರ್ಹ ಶಾಸಕ ಆರ್‌.ಶಂಕರ್‌ ಕೂಡ ಒಬ್ಬರು. ಆದರೆ ಕಳೆದ ಡಿಸೆಂಬರ್‌ನಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆರ್‌.ಶಂಕರ್‌ಗೆ ಬಿಜೆಪಿಯಿಂದ ಟಿಕೆಟ್‌ ನೀಡಿರಲಿಲ್ಲ, ಬದಲಿಗೆ ಅವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡುವುದಾಗಿ ಮನವೊಲಿಸಿ ಅರುಣಕುಮಾರ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಹೀಗಾಗಿ ಶಂಕರ್‌ ಅವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡಬೇಕಿದೆ. ಆದರೆ ಮೇಲ್ಮನೆ ಸ್ಥಾನಗಳು ಮುಂಬರುವ ಜೂನ್‌ ತನಕ ಖಾಲಿ ಆಗುವುದಿಲ್ಲ. ಅಲ್ಲಿಯವರೆಗೂ ಶಂಕರ್‌ ಕಾಯುವುದು ಅನಿವಾರ್ಯವಾಗಿದೆ. ಕಾನೂನು ತೊಡಕು ಇರುವ ಕಾರಣ ಅವರು ಮೊದಲು ಮೇಲ್ಮನೆ ಸದಸ್ಯರಾದ ಬಳಿಕವೇ ಸಚಿವರಾಗಬೇಕಿದೆ. ಹೀಗಾಗಿ ಜೂನ್‌ ತನಕ ಅವರನ್ನು ಸಚಿವರನ್ನಾಗಿ ಮಾಡುವಂತಿಲ್ಲ. ಈಗಾಗಲೇ ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ವರಿಷ್ಠರು ಶಂಕರ್‌ಗೆ ಮೇಲ್ಮನೆ ಸದಸ್ಯತ್ವ ಹಾಗೂ ಸಚಿವ ಸ್ಥಾನ ಖಾತರಿಪಡಿಸಿರುವುದರಿಂದ ಶಂಕರ್‌ಗೋಸ್ಕರ ಒಂದು ಸಚಿವ ಸ್ಥಾನ ಮೀಸಲಿಡಲಾಗಿದೆ. ಖಾಲಿ ಉಳಿಸಿಕೊಳ್ಳಲಿರುವ ಮೂರು ಸಚಿವ ಸ್ಥಾನಗಳ ಪೈಕಿ ಒಂದು ಶಂಕರ್‌ ಪಾಲಾಗಲಿದೆ. ಇನ್ನು ಉಳಿದ ಎರಡು ಸ್ಥಾನಗಳನ್ನು ಅನರ್ಹಗೊಂಡಿರುವ ರಾಜರಾಜೇಶ್ವರಿ ನಗರದ ಮುನಿರತ್ನ ಹಾಗೂ ಮಸ್ಕಿಯ ಪ್ರತಾಪಗೌಡ ಪಾಟೀಲ್‌ ಅವರಿಗೆ ಮೀಸಲಿಡಬೇಕಾಗುತ್ತದೆ. ಈ ಇಬ್ಬರ ಆಯ್ಕೆಯನ್ನು ಪ್ರಶ್ನಿಸಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿದ್ದವರು ಚುನಾವಣಾ ತಕರಾರು ಅರ್ಜಿ ಸಲ್ಲಿಸಿರುವುದರಿಂದ ಅದು ಸದ್ಯ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಈ ಎರಡೂ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿಲ್ಲ. ಇನ್ನೊಂದೆಡೆ ಆ ತಕರಾರು ಅರ್ಜಿಗಳನ್ನು ವಾಪಸ್‌ ಪಡೆಯುವಂತೆ ಮನವೊಲಿಸುವ ಪ್ರಯತ್ನಗಳು ನಡೆದಿವೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮುನ್ನ ನಡೆದಿರುವ ಮಾತುಕತೆಯಂತೆ ಮುನಿರತ್ನ ಹಾಗೂ ಪ್ರತಾಪಗೌಡ ಪಾಟೀಲ್‌ಗೂ ಸಚಿವ ಸ್ಥಾನ ನೀಡಬೇಕಿದೆ. ಹೀಗಾಗಿ ಉಳಿದ ಎರಡು ಸ್ಥಾನಗಳು ಇವರಿಗೆ ಮೀಸಲಾಗಿದ್ದು ಮುಂದೆ ನಡೆಯುವ ಉಪ ಚುನಾವಣೆಯಲ್ಲಿ ಗೆದ್ದರೆ ಸಚಿವರಾಗುತ್ತಾರೆ, ಇಲ್ಲದಿದ್ದರೆ ಇವು ಬಿಜೆಪಿಯ ಇತರ ಶಾಸಕರ ಪಾಲಾಗುತ್ತವೆ.


from India & World News in Kannada | VK Polls https://ift.tt/384cPkw

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...