ಮುಂಬೈ: ಉತ್ತರ ಬಿಜೆಪಿಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರನ್ನು ಎನ್ನುವ ಆರೋಪದಡಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ರುಬೇಲ್ ಜೋನು ಶೇಖ್ ಎಂಬವರೇ ಬಂಧಿತ ಆರೋಪಿ. ನಕಲಿ ದಾಖಲೆಗಳೊಂದಿಗೆ ದೇಶದಲ್ಲಿ ವಾಸ ಮಾಡುತ್ತಿದ್ದ ಸದಸ್ಯನನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಅನಿಲ್ ದೇಶ್‌ಮುಖ್ ಹೇಳಿದ್ದಾರೆ. ಅವರ ವಿರುದ್ದ ಭಾರತೀಯ ದಂಡ ಸಂಹಿತೆ, ಪಾಸ್‌ಪೋರ್ಟ್ ಕಾಯ್ದೆ ಹಾಗೂ ವಿದೇಶಿ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ. ರುಬೇಲ್ ಮುಂಬೈನಲ್ಲಿ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಪಡೆದುಕೊಂಡಿದ್ದು, ತನಿಖೆ ನಡೆಸಿದಾಗ ಅವರ ಶಾಲಾ ದಾಖಲೆಗಳು ಪಶ್ಚಿಮ ಬಂಗಾಳದ 24 ಉತ್ತರ ಪರಗಣ ಜಿಲ್ಲೆಯದ್ದು ಎಂದು ನಕಲಿ ದಾಖಲೆ ತೋರಿಸಿ ಆಧಾರ್ ಹಾಗೂ ಪಾನ್‌ಕಾರ್ಡ್ ಪಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರ ಪ್ರಕಾರ ರುಬೇಲ್ 2011ರಿಂದ ಮುಂಬೈನಲ್ಲಿ ಅಕ್ರಮವಾಗಿ ವಾಸ ಮಾಡುತ್ತಿದ್ದು, ಖೊಟ್ಟಿ ದಾಖಲೆಗಳನ್ನು ನೀಡಿ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದ. ಮೂಲ ದಾಖಲೆಗಳು ಪಶ್ಚಿಮ ಬಂಗಾಳದ 24 ಉತ್ತರ ಪರಗಣ ಜಿಲ್ಲೆಯ ವಿಳಾಸ ತೋರಿಸುತ್ತಿದ್ದು, ಅಲ್ಲಿ ಹೋಗಿ ಪರಿಶೀಲನೆ ನಡೆಸಿದಾಗ ಮುಂಬೈ ಪೊಲೀಸರಿಗೆ ಅದೊಂದು ನಕಲಿ ದಾಖಲೆ ಎಂದು ಗೊತ್ತಾಗಿದೆ. ಈ ಘಟನೆ ಬಗ್ಗೆ ಬಿಜೆಪಿ ವಿರುದ್ಧ ಕಿಡಿ ಕಾರಿರುವ ಅನಿಲ್ ದೇಶ್‌ಮುಖ್, ವ್ಯಕ್ತಿಯ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡದೇ ಅವರನ್ನು ಪಕ್ಷದ ಉನ್ನತ ಸ್ಥಾನದಲ್ಲಿ ಕೂರಿಸಿದ್ದು ಆಶ್ಚರ್ಯ ಉಂಟು ಮಾಡಿದೆ. ಹೀಗಾಗಿ ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. ಘಟನೆಯ ಬಗ್ಗೆ ಬಿಜೆಪಿ ಹೇಳಿಕೆ ನೀಡಿದ್ದು, ಪಕ್ಷದ ಸದಸ್ಯರ ಯಾವುದೇ ತಪ್ಪುಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದೇ ರೀತಿ ಎನ್‌ಸಿಪಿ, ಕಾಂಗ್ರೆಸ್ ಹಾಗೂ ಇತರೆ ಪಕ್ಷದಲ್ಲಿರುವ ಇಂಥವರನ್ನು ಕೂಡ ಗುರುತಿಸಿ ಎಂದು ಬಿಜೆಪಿ ಹೇಳಿದೆ.
from India & World News in Kannada | VK Polls https://ift.tt/3qHqE1I