ಮುನಿಸಿನ ವಿರಾಮದ ಬಳಿಕ ತವರಿಗೆ ಮರಳಿದ ವಸುಂಧರಾ ರಾಜೇ

ಜೈಪುರ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅವರು ಸುಮಾರು ಮೂರು ತಿಂಗಳ ವಿರಾಮದ ಬಳಿಕ ದಿಲ್ಲಿಯಿಂದ ಮತ್ತೆ ತವರಿಗೆ ಮರಳಿದ್ದು, ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಹಾಲಿ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್‌ ಪುನಿಯಾ ಜತೆಗಿನ ಸಂಘರ್ಷದಿಂದ ರಾಜ್ಯ ರಾಜಕಾರಣದಿಂದ ದೂರ ಸರಿದಿದ್ದ ವಸುಂಧರಾ ರಾಜೇ ಅವರು, ಕೆಲವು ತಿಂಗಳಿಂದ ಬಿಜೆಪಿಯ ಕೋರ್‌ ಕಮಿಟಿ ಸಭೆಗಳಿಗೆ ಹಾಜರಾಗದೇ ಅಸಮಾಧಾನ ಹೊರಹಾಕಿದ್ದರು. ಬುಧವಾರ ಅವರು ರಸ್ತೆ ಮಾರ್ಗದ ಮೂಲಕ ದಿಲ್ಲಿಯಿಂದ ನಗರಕ್ಕೆ ಬಂದಾಗ ಅಭಿಮಾನಿಗಳ ದೊಡ್ಡ ಬಳಗವೇ ಅವರನ್ನು ಸ್ವಾಗತಿಸಿತು. ತಮಗೆ ಮತಗಳನ್ನು ಸೆಳೆಯುವ ಶಕ್ತಿ ಇದ್ದು, ಕಡೆಗಣಿಸಿದರೆ ಪಕ್ಷಕ್ಕೆ ನಷ್ಟವಾದೀತು ಎಂಬ ಸಂದೇಶವನ್ನೂ ಪರೋಕ್ಷವಾಗಿ ರವಾನಿಸಿದರು. ಬುಧವಾರ ನಡೆದ ಬಿಜೆಪಿ ಕೋರ್‌ ಕಮಿಟಿ ಸಭೆಗೆ ಒಂದು ಗಂಟೆ ತಡವಾಗಿ ಆಗಮಿಸಿದ್ದರು. ಮುಂಬರುವ ನಾಲ್ಕು ರಾಜ್ಯಗಳ ಚುನಾವಣೆ ತಂತ್ರಗಾರಿಕೆ ಹಿನ್ನೆಲೆಯಲ್ಲಿ ಈ ಸಭೆ ಮಹತ್ವದ್ದಾಗಿತ್ತು. ಜೈಪುರಕ್ಕೆ ಮರಳುವ ವಾರದ ಮುನ್ನ ರಾಜೇ ಅವರು ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಪಕ್ಷದ ಹಿರಿಯ ಮುಖಂಡರನ್ನು ಭೇಟಿಯಾಗಿದ್ದರು.


from India & World News in Kannada | VK Polls https://ift.tt/37MVoHd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...