ಚೆನ್ನೈ: ಕಳೆದ ವಾರ ಇಲ್ಲಿನ ಟೈಲ್ಸ್ ತಯಾರಿಕಾ ಕಂಪನಿ ಮೇಲೆ ದಾಳಿ ಮಾಡಿದ್ದ ಇಲಾಖೆ ಬರೋಬ್ಬರಿ ₹220 ಕೋಟಿ ರುಪಾಯಿ ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ನೇರ ತೆರಿಗೆ ಪ್ರಾಧಿಕಾರ (ಸಿಬಿಡಿಟಿ) ಹೇಳಿದೆ. ತಮಿಳುನಾಡು ಮೂಲದ ಕಂಪನಿ ಇದಾಗಿದ್ದು, ಫೆಬ್ರವರಿ 26 ರಂದು ತಮಿಳುನಾಡು, ಗುಜರಾತ್ ಹಾಗೂ ಕೋಲ್ಕತಾ ಸೇರಿ ಒಟ್ಟು 20 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಇದೀಗ ಬರೋಬ್ಬರಿ ₹220 ಕೋಟಿ ರುಪಾಯಿ ತೆರಿಗೆ ವಂಚಿಸಿದ ಹಣ ಮುಟ್ಟುಗೋಲು ಹಾಕಲಾಗಿದೆ. ದಾಳಿ ವೇಳೆ ಸುಮಾರು ₹8.30 ಕೋಟಿ ಹಣ ವಶಕ್ಕೆ ಪಡೆಯಲಾಗಿತ್ತು. ಇದೀಗ ಮತ್ತೆ ಕಪ್ಪು ಹಣ ಪತ್ತೆಯಾಗಿದ್ದು, ₹220 ಕೋಟಿ ಕಪ್ಪು ಹಣ ವಶ ಪಡಿಸಿಕೊಳ್ಳಲಾಗಿದೆ ಎಂದು ಸಿಬಿಡಿಟಿ ಹೇಳಿದೆ. ಆದರೆ ಆ ಕಂಪನಿಯ ಹೆಸರನ್ನು ಸಿಬಿಡಿಟಿ ಗೌಪ್ಯವಾಗಿಟ್ಟಿದ್ದು, ಟೈಲ್ಸ್ ಉತ್ಪಾದನೆಯಲ್ಲಿ ದಕ್ಷಿಣ ಭಾರತದಲ್ಲೇ ಅತೀ ದೊಡ್ಡ ಕಂಪನಿ ಎಂದಷ್ಟೇ ಹೇಳಿದೆ. ಪರಿಶೀಲನೆ ವೇಳೆ ಲೆಕ್ಕ ಪುಸ್ತಕಗಳಲ್ಲಿ ದಾಖಲಿಸದ ಟೈಲ್ ಖರೀದಿಗಳು ಪತ್ತೆಯಾಗಿದೆ. ಅಧಿಕೃತ ದಾಖಲೆಗಳಿಲ್ಲದವುಗಳ ಕಡತಗಳನ್ನು ಗೌಪ್ಯ ಕಚೇರಿಯಲ್ಲಿ ಇರಿಸಿ, ಅದಕ್ಕೆಂದೇ ಪ್ರತ್ಯೇಕ ಸಾಫ್ಟ್‌ವೇರ್‌ಗಳನ್ನು ಇಟ್ಟುಕೊಳ್ಳಲಾಗಿತ್ತು ಎಂದು ಸಿಬಿಟಿಡಿ ಹೇಳಿದೆ. ಅಲ್ಲದೇ ಒಟ್ಟು ಆಯವ್ಯಯದ ಶೇ.50 ರಷ್ಟು ಲೆಕ್ಕಾಚಾರಗಳನ್ನು ಲೆಕ್ಕ ಪುಸ್ತಕದಲ್ಲಿ ದಾಖಲಿಸಿಯೇ ಇಲ್ಲ. ಹಿಂದಿನ ವರ್ಷದ ಲೆಕ್ಕಗಳನ್ನು ನೋಡಿದರೆ ಸುಮಾರು ₹120 ಕೋಟಿಗೆ ತೆರಿಗೆ ವಂಚನೆ ಮಾಡಲಾಗಿದೆ. ಹೊಸದಾಗಿ ₹100 ಕೋಟಿ ಆದಾಯದ ಬಗ್ಗೆ ಘೋಷಣೆಯೇ ಮಾಡಿಕೊಂಡಿಲ್ಲ. ಖೊಟ್ಟಿ ಕಂಪನಿ ಹೆಸರಲ್ಲಿ ಈ ಹಣ ಇತ್ತು. ಒಟ್ಟು ತೆರಿಗೆ ಪಾವತಿ ಮಾಡದ ₹220 ಕೋಟಿ ಪತ್ತೆಯಾಗಿದೆ ಎಂದು ಸಿಬಿಡಿಟಿ ಹೇಳಿದೆ. ಇದೇ ವೇಳೇ ಇಂಥ ತೆರಿಗೆ ವಂಚನೆ ವಿರುದ್ಧ ಸಮರ ಸಾರುವುದಾಗಿ ಸಿಬಿಡಿಟಿ ಹೇಳಿದ್ದು, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಈ ಕಂಪನಿಯ ಮೂಲವನ್ನೇ ಜಾಲಾಡುತ್ತೇವೆ ಎಂದಿದೆ.
from India & World News in Kannada | VK Polls https://ift.tt/3pXlf5r