
ಮಧುಗಿರಿ: ಆಡಳಿತವೇ ಶ್ರೇಷ್ಠ ಎನ್ನುವ ಕಾಲ ಮುಗಿದಿದೆ, ಈಗ ಅಭಿವೃದ್ಧಿಯೇ ಶ್ರೇಷ್ಠ, ಗಾಂಧೀಜಿಯವರು ಸ್ವತಂತ್ರ್ಯ ಅಪೇಕ್ಷೆ ಪಟ್ಟಿದ್ದು ಪ್ರತಿ ವ್ಯಕ್ತಿಯ ಶ್ರೇಯಸ್ಸಿಗೆ ಎಂದು ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ತಿಳಿಸಿದರು. ಕೊಡಿಗೇನಹಳ್ಳಿ ಹೋಬಳಿಯ ಮುದ್ದೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು, ಆರೋಗ್ಯ ಇಲಾಖೆಯ ಸೇವೆ ದೇವರ ಸೇವೆ ಎಂದು ಭಾವಿಸಬೇಕು. ಮೋದಿಯವರು ಅಟಲ್ ಭೋಜಲ್ ಜಿಲ್ಲೆಯ ಯೋಜನೆಯಡಿ ಜಿಲ್ಲೆಗೆ 1208 ಕೋಟಿ ಅನುದಾನ ನೀಡಿದ್ದು ತಾಲೂಕುಗಳಲ್ಲಿ ಅನುಷ್ಠಾನ ಮಾಡಲಿದ್ದೇವೆ, ಮಧುಗಿರಿ ತಾಲೂಕಿನ ದೊಡ್ಡ ಗ್ರಾಮವನ್ನು ಆಯ್ಕೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು. ರೈತರ ಸೇವೆ ಮಾಡುವ ಉದ್ದೇಶದಿಂದ ಹಟ ಮಾಡಿ ಸಣ್ಣ ನೀರಾವರಿ ಖಾತೆ ಮರಳಿ ಪಡೆದಿದ್ದು ಹೇಮಾವತಿ ಮೂಲಕ ಮಧುಗಿರಿಗೆ ಸಿದ್ಧಾಪುರ ಕೆರೆಗೆ 0.9 ಟಿಎಂಸಿ ನೀರು ಹರಿಸಿದ್ದೇನೆ, ಎತ್ತಿನಹೊಳೆ, ಹೇಮಾವತಿ ಭದ್ರ ಮೇಲ್ದಂಡೆಯಲ್ಲಿ ನೀರಿದ್ದು ಇದನ್ನು ಕೇಂದ್ರೀಕರಿಸುವ ಇಚ್ಛಾಶಕ್ತಿ ಕೊರತೆ ಎದುರಾಗಿದ್ದು ನಾನು ಯಾರಿಗೂ ದೂರುವುದಿಲ್ಲ, 3 ಇಲಾಖೆಗಳನ್ನು ಸಭೆ ಕರೆದು ಜಿಲ್ಲೆಯಲ್ಲಿ ಬರವನ್ನು ಹೋಗಲಾಡಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ಶಾಸಕ ಎಂ.ವಿ ವೀರಭದ್ರಯ್ಯ ಮಾತನಾಡಿ ಈ ಭಾಗದ ಗ್ರಾಮೀಣ ಭಾಗಕ್ಕೆ ಈ ಆರೋಗ್ಯ ಕೇಂದ್ರ ಅತ್ಯವಶ್ಯಕವಾಗಿತ್ತು. ಈಗ ಬಹುದಿನಗಳ ಬೇಡಿಕೆ ಈಡೇರಿದೆ, ಕೇವಲ ಕಟ್ಟಡವಾದರೆ ಸಾಲದು, ಇದರ ನಿರ್ವಹಣೆಯೂ ಅಚ್ಚುಕಟ್ಟಾಗಿ ಮಾಡಬೇಕಿದೆ, ಆರೋಗ್ಯವಾಗಿದ್ದೇವೆ ಎಂಬ ಭಾವನೆ ಬೇಡ, ರೋಗ ರುಜಿನುಗಳ ಬಗ್ಗೆ ನಿರ್ಲಕ್ಷ್ಯ ಬೇಡ, ಈ ಭಾಗದ ರೈತರು ವ್ಯವಸಾಯವನ್ನು ನಂಬಿ ಜೀವನ ಮಾಡುತ್ತಿದ್ದು ಬರಗಾಲಕ್ಕೆ ತುತ್ತಾಗಿದೆ. ಈ ಭಾಗದಲ್ಲಿ ಕೈಗಾರಿಕೆ ಗಣಿಗಾರಿಕೆ ಇಲ್ಲ. ನಮ್ಮ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮಾಡುತ್ತೇನೆ ಎಂದು ಸಚಿವರು ಭರಸವೆ ನೀಡಿದ್ದಾರೆ ಎಂದರು. ಶಿಷ್ಟಾಚಾರ ಉಲ್ಲಂಘನೆ ಆರೋಪ..!ಆರೋಗ್ಯ ಕೇಂದ್ರ ಸ್ಥಾಪಿಸಲು ಭೂ ದಾನ ಮಾಡಿ ಬುನಾದಿ ಹಾಕಿದ ಕುಟುಂಬಸ್ಥರಿಗೆ ಹಾಗೂ ಗ್ರಾಪಂ ಸದಸ್ಯರಿಗೆ ಆರೋಗ್ಯ ಇಲಾಖೆ ಆಹ್ವಾನಿಸದೆ ಶಿಷ್ಟಾಚಾರ ಉಲ್ಲಘಿಸಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ಟಿ.ಜೆ ವೇಣುಗೋಪಾಲ್ ಆರೋಪಿಸಿದ್ದಾರೆ. ಇನ್ನೂ ಪೆದ್ದಾರೆಡ್ಡಿ ಮತ್ತು ಮಾರಯ್ಯ ಎಂಬುವವರು ಸರ್ವೆ ನಂ 41 ರಲ್ಲಿ 4 ಎಕರೆ ಜಾಗ ನೀಡಿದ್ದು ದಾನಿಗಳ ಕುಟುಂಬಸ್ಥರನ್ನು ಆಹ್ವಾನ ನೀಡದೆ ಕಡೆಗಣಿಸಿದ್ದಾರೆ ಎಂದು ಮಾಜಿ ತಾಪಂ ಅಧ್ಯಕ್ಷ ಎಂ.ಪಿ ಪ್ರಭಾಕರ್ ರೆಡ್ಡಿ ಆರೋಪಿಸಿದ್ದಾರೆ.
from India & World News in Kannada | VK Polls https://ift.tt/3pPSpnu