ಮೈಸೂರು: ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದ ಹಿನ್ನೆಲೆ ನಾಯಕರ ವಿರುದ್ದ ಶಾಸಕ ರಾಮದಾಸ್ ಪರೋಕ್ಷವಾಗಿಯೇ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ನನಗೆ 25 ವರ್ಷದ ರಾಜಕೀಯ ಅನುಭವ ಇದೆ. ಈ ಆಧಾರದ ಮೇಲೆ ಎರಡೂ ಪಕ್ಷಗಳು ನಮ್ಮನ್ನು ದಾಳವಾಗಿ ಉಪಯೋಗಿಸಿಕೊಳ್ಳುತ್ತಾರೆ ಎಂದು ಎಚ್ಚರಿಸಿದ್ದೆ. ಅಲ್ಲದೇ ಈ ವಿಚಾರವಾಗಿ ಅಂತಿಮ ಕ್ಷಣದವರೆಗೂ ನಾನು ಏನೂ ಕಾಮೆಂಟ್ ಮಾಡಲ್ಲ ಅಂತನೂ ತಿಳಿಸಿದ್ದೆ ಎಂದರು. ಈ ಹಿಂದೆ ನಾನು ಜಿಲ್ಲಾ ಮಂತ್ರಿಯಾಗಿದ್ದಾಗ ಜೆಡಿಎಸ್ ಮೈತ್ರಿಯೊಂದಿಗೆ ಪಾಲಿಕೆ ಅಧಿಕಾರ ಹಿಡಿದಿತ್ತು. ನಾಲ್ಕು ವರ್ಷಗಳ ಕಾಲ ಯಶಸ್ವಿ ಆಡಳಿತ ನಡೆಸಿದ್ದೆವು. ಕಳೆದ ನಾಲ್ಕು ವರ್ಷಗಳಿಂದ ಸ್ವಚ್ಚ ನಗರಿ ಹಾಳಾಗಿದೆ. ಈಗ ಸ್ವಚ್ಛ ನಗರಿಯತ್ತ ಗಮನ ಕೊಡಬೇಕೇ ಹೊರತು ಈ ವಿಚಾರವಲ್ಲ ಎಂದರು. ಕೋಮುವಾದಿ ಬಿಜೆಪಿಯನ್ನು ದೂರ ಇಡಲು ಈ ಮೈತ್ರಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೈಸೂರಲ್ಲಿ ಬಿಜೆಪಿಯನ್ನು ದೂರ ಇಡುವುದಾದರೇ 48 ಗಂಟೆಯೊಳಗೆ ತುಮಕೂರು ಪಾಲಿಕೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಹೇಗಾಯ್ತು? ಎಂಬುದಕ್ಕೆ ಉತ್ತರ ಕೊಡಿ. ರಾಜಕಾರಣದಲ್ಲಿ ಸೋಲು - ಗೆಲುವು ಸಹಜ. ಅದಕ್ಕೆ ತಲೆ ಕೆಡಿಸಿಕೊಳ್ಳಬಾರದು ಎಂದರು. ಇನ್ನು ಮೇಯರ್ ಚುನಾವಣೆಯಲ್ಲಿ ಪರಾಜಿತಗೊಂಡ ಸುನಂದಾ ಪಾಲನೇತ್ರ ರಾಜೀನಾಮೆ ಬಗ್ಗೆ ಗೊತ್ತಿಲ್ಲ. ಅದು ವೈಯುಕ್ತಿಕ ವಿಚಾರ ಎಂದರು.
from India & World News in Kannada | VK Polls https://ift.tt/3uFh6Xp