ಬೇಸಿಗೆ ಆರಂಭದಲ್ಲೇ ಏರಿದ ಧಗೆ: ಕಲಬುರಗಿಯಲ್ಲಿ 38 ಡಿಗ್ರಿ ಉಷ್ಣಾಂಶ, ರಾಜಧಾನಿಯಲ್ಲೂ ಬೇಗೆ!

ಬೆಂಗಳೂರು ಬೇಸಿಗೆಯ ಆರಂಭದಲ್ಲೇ ಬಿಸಿಲ ಬೇಗೆ ಏರತೊಡಗಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಹೆಚ್ಚಾಗಿದ್ದು, ಬಿಸಿಲಲ್ಲಿ ಬೇಯುವಂತಾಗಿದೆ. ಸಾಮಾನ್ಯವಾಗಿ ಮಾರ್ಚ್ ಬಳಿಕ ಏರುತ್ತದೆ. ಆದರೆ, ಈ ಬಾರಿ ಫೆಬ್ರವರಿ ಮಧ್ಯ ಭಾಗದಿಂದಲೇ ಸರಾಸರಿ 33-35 ಡಿಗ್ರಿ ಸೆಲ್ಸಿಯಸ್‌ ದಾಖಲಾಗುತ್ತಿದೆ. ಮಧ್ಯಾಹ್ನವಾಗುತ್ತಿದ್ದಂತೆ ಬಿಸಿಲಿನ ಧಗೆ ತೀವ್ರಗೊಂಡು ಸಂಜೆವರೆಗೆ ಮುಂದುವರಿಯುತ್ತದೆ. ಹೀಗಾಗಿ ಮಾರ್ಚ್, ಏಪ್ರಿಲ್‌, ಮೇನಲ್ಲಿ ತಾಪಮಾನ ಇನ್ನಷ್ಟು ಏರುವ ಸಾಧ್ಯತೆಗಳಿವೆ ಎನ್ನುತ್ತಿದೆ . ಕಲಬುರಗಿಯಲ್ಲಿ ಭಾನುವಾರ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ರಾಯಚೂರು 37 ಡಿಗ್ರಿ, ವಿಜಯಪುರ 35.6 ಡಿಗ್ರಿ, ಗದಗದಲ್ಲಿ 35.2 ಡಿಗ್ರಿ, ಮಂಡ್ಯ 34.6 ಡಿಗ್ರಿ, ಹೊನ್ನಾವರ 32.1 ಡಿಗ್ರಿ, ಹಾಸನ 32.2 ಡಿಗ್ರಿ ಗರಿಷ್ಠ ತಾಪಮಾನ ದಾಖಲಾಗಿದೆ. ಅಷ್ಟೇ ಏಕೆ ಗ್ರೀನ್‌ಸಿಟಿ ಬೆಂಗಳೂರಿನಲ್ಲಿ ಕೂಡ ಭಾನುವಾರ ಗರಿಷ್ಠ 34 ಡಿಗ್ರಿ ತಾಪಮಾನ ದಾಖಲಾಗಿದೆ. ರಾಜ್ಯಾದ್ಯಂತ ತಾಪಮಾನ ಹೆಚ್ಚಾಗಿದೆ. ಇನ್ನೂ ಮೂರು ದಿನಗಳ ಕಾಲ ಈಗಿರುವ ತಾಪಮಾನದ ಜತೆಗೆ ಮತ್ತೆ ಒಂದೆರಡು ಡಿಗ್ರಿಯವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ ಒಂದು ವಾರದ ನಂತರ ಮಳೆಯಾಗುವ ಸಾಧ್ಯತೆಯಿದ್ದು, ವಾತಾವರಣದಲ್ಲಿ ತಂಪು ಕಾಣಬಹುದು. ಸಿ. ಎಸ್. ಪಾಟೀಲ್ ನಿರ್ದೇಶಕರು, ಹವಾಮಾನ ಇಲಾಖೆ


from India & World News in Kannada | VK Polls https://ift.tt/3q4MtXS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...