ರಿಯಾದ್: ರಾಜಧಾನಿ ರಿಯಾದ್ ಮೇಲೆ ಯೆಮೆನ್ನ ಹೌತಿ ಬಂಡುಕೋರರು ನಡೆಸಿದ ಸರಣಿ ಕ್ಷಿಪಣಿ ದಾಳಿಗಳನ್ನು ವಿಫಲಗೊಳಿಸಿರುವುದಾಗಿ ಹೇಳಿದೆ. ಈ ಕುರಿತು ಸೌದಿ ಅರೇಬಿಯಾದ ಅಧಿಕೃತ ಸರ್ಕಾರಿ ಸುದ್ದಿ ವಾಹಿನಿ ಮಾಹಿತಿ ನೀಡಿದ್ದು, ರಾಜಧಾನಿ ರಿಯಾದ್ ಮೇಲೆ ಹೌತಿ ಬಂಡುಕೋರರು ನಡೆಸಿದ ವಿಧ್ವಂಸಕ ಕ್ಷಿಪಣಿ ದಾಳಿಗಳನ್ನು ವಿಫಲಗೊಳಿಸಿದ್ದಾಗಿ ಸ್ಪಷ್ಟಪಡಿಸಿದೆ. ರಾಜಧಾನಿ ರಿಯಾದ್ನಲ್ಲಿ ಸರಣಿ ಸ್ಫೋಟದ ಶಬ್ಧ ಕೇಳಿಸಿದ್ದು, ಇದು ಕ್ಷಿಪಣಿ ದಾಳಿಗಳನ್ನು ವಿಫಲಗೊಳಿಸಿದ ಪ್ರಕ್ರಿಯೆ ಎಂದು ಸೌದಿ ಸರ್ಕಾರಿ ಮಾಧ್ಯಮ ಹೇಳಿದೆ. ಆದರೆ ಹೌತಿ ಉಗ್ರ ಸಂಘಟನೆ ಮಾತ್ರ ಇದುವರೆಗೂ ಈ ಕ್ಷಿಪಣಿ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಸೌದಿ ಅರೇಬಿಯಾದ ದಕ್ಷಿಣ ಭಾಗದ ಮೇಲೆ ನಿರಂತರವಾಗಿ ದಾಳಿ ಮಾಡುವ ಹೌತಿ ಭಯೋತ್ಪಾದಕರು, ಪ್ರಮುಖವಾಗಿ ತೈಲ ಬಾವಿಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿಗಳನ್ನು ನಡೆಸುತ್ತಲೇ ಇರುತ್ತಾರೆ. ಸೌದಿ ಅರೇಬಿಯಾ ರಾಜಧಾನಿ ರಿಯಾದ್ನಲ್ಲಿ ಫಾರ್ಮುಲಾ ಇ ಚಾಂಪಿಯನ್ಶಿಪ್ ನಡೆಯುತ್ತಿದ್ದು, ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಇದರ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಕ್ಷಿಪಣಿ ದಾಳಿಗಳನ್ನು ನಡೆಸಲಾಗಿದ್ದು, ರಾಜಧಾನಿ ಜನರ ಆತಂಕಕ್ಕೆ ಕಾರಣವಾಗಿದೆ. ಇರಾನ್ ಬೆಂಬಲಿತ ಹೌತಿ ಉಗ್ರ ಸಂಘಟನೆ, ಸೌದಿ ಅರೇಬಿಯಾ ಬೆಂಬಲಿತ ಸರ್ಕಾರವನ್ನು ಉರುಳಿಸುವ ಪ್ರಯತ್ನ ನಡೆಸುತ್ತಿದ್ದು, ಸೌದಿ ಅರೇಬಿಯಾ ಮೇಲೆ ಮೇಲಿಂದ ಮೇಲೆ ದಾಳಿಗಳನ್ನು ನಡೆಸುವುದು ಸಾಮಾನ್ಯ ಸಂಗತಿ.
from India & World News in Kannada | VK Polls https://ift.tt/3sBFdES