ಚಿತ್ರದುರ್ಗ: ಕಳವು ಮಾಡಿದ್ದ ₹90 ಲಕ್ಷ ರೂ. ಮೌಲ್ಯದ 300 ಚೀಲ ಅಡಕೆ ಜಪ್ತಿ ಮಾಡಿದ ಪೊಲೀಸರು..!

: ಭೀಮ ಸಮುದ್ರದಿಂದ ಹೊಸದಿಲ್ಲಿಗೆ ಸಾಗಿಸುತ್ತಿದ್ದ ಅಡಕೆ ಲಾರಿ ತಡೆದು, ಅಡಕೆ ಕಳವು ಮಾಡಿದ್ದ ಅಂತಾರಾಜ್ಯ ಡಕಾಯಿತರನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕಳವು ಮಾಡಲಾಗಿದ್ದ 90 ಲಕ್ಷ ರೂ. ಮೌಲ್ಯದ 300 ಚೀಲ ಅಡಕೆ ಜಪ್ತಿ ಮಾಡಿದ್ದಾರೆ. ತಮಿಳುನಾಡು, ಚನ್ನಗಿರಿ, ಚಿಕ್ಕಮಗಳೂರು ಮತ್ತು ಶಿಕಾರಿಪುರಗಳಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಚಿಕ್ಕಮಗಳೂರು ಜಿಲ್ಲೆಅಜ್ಜಂಪುರ ತಾಲೂಕಿನ ಬಿಲ್ಲಹಳ್ಳಿ ಗ್ರಾಮದ ರಿಜ್ವಾನ್‌ ಹಾಗೂ ಪಕ್ಕದ ಢಣಾಯಕಪುರದ ಲಿಂಗರಾಜ, ಚನ್ನಗಿರಿ ತಾಲೂಕಿನ ಸಲ್ಮಾನ್‌ ಬಂಧಿತರು. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಬಂಧನದ ವಿವರ ನೀಡಿದ ಎಸ್ಪಿ ಜಿ. ರಾಧಿಕಾ, ಬಂಧಿತರಿಂದ 90 ಲಕ್ಷ ರೂ. ಮೌಲ್ಯದ 300 ಚೀಲ ಅಡಕೆ ಜಪ್ತಿ ಮಾಡುವುದರ ಜತೆಗೆ 25 ಲಕ್ಷ ಮೌಲ್ಯದ ಲಾರಿ, 6 ಲಕ್ಷ ಮೌಲ್ಯದ ಎರ್ಟಿಗಾ ಕಾರು, 50 ಸಾವಿರ ಮೌಲ್ಯದ ಆಲ್ಟೋ ಸೇರಿ 1.21 ಕೋಟಿ ರೂ. ಮೌಲ್ಯದ ಸ್ವತ್ತು ವಶಪಡಿಸಿ ಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಆಶ್ರಫ್‌ ಅಲಿಯನ್ನು ಆತನ ಸ್ವಗ್ರಾಮ ಬಿಲ್ಲಹಳ್ಳಿಯಲ್ಲಿ ಪೊಲೀಸರು ಬಂಧಿಸಲು ಹೋದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ, ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಆಶ್ರಫ್‌ ಅಲಿ ತಪ್ಪಿಸಿ ಕೊಂಡಿದ್ದಾನೆ. ಪ್ರಕರಣದಲ್ಲಿ ಭಾಗಿಯಾಗಿರುವರೆನ್ನಲಾದ ಇನ್ನೂ ಒಂಬತ್ತು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಮಾಹಿತಿ ನೀಡಿದರು. ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್, ತುರುವನೂರು ಪಿಎಸ್‌ಐ ಶಿವಕುಮಾರ್‌, ಗ್ರಾಮಾಂತರ ಠಾಣೆ ಪಿಎಸ್‌ಐ ಮಹೇಶ್‌ಗೌಡ, ಯಶೋಧಮ್ಮ, ಕೋಟೆ ಠಾಣೆ ಪಿಎಸ್‌ಐ ಗಾದಿಲಿಂಗಪ್ಪ, ಸಿಬ್ಬಂದಿ ಬಿ.ಎನ್‌. ರಘುನಾಥ್‌, ಓಂಕಾರಪ್ಪ, ಪೋಲರೆಡ್ಡಿ, ರಂಗನಾಥ್‌, ಎನ್‌. ಕೆಂಚಪ್ಪ, ಮಂಜಪ್ಪ, ಅವಿನಾಶ್‌, ತಿಪ್ಪೇಸ್ವಾಮಿ, ರಾಜು ಮೂಡಬಾಗಿಲು, ಹರಿ, ರುದ್ರಮುನಿ, ರಾಘವೇಂದ್ರ, ಸತೀಶ್‌ ಮತ್ತು ರಘು ಇವರನ್ನು ಎಸ್ಪಿ ಜಿ. ರಾಧಿಕಾ ಅಭಿನಂದಿಸಿದರು.


from India & World News in Kannada | VK Polls https://ift.tt/37FftPy

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...