ಗ್ರೀನ್‌ ಕಾರ್ಡ್‌ ಮೇಲಿದ್ದ ನಿಷೇಧ ಹಿಂಪಡೆದ ಜೋ ಬಿಡೆನ್‌: ಲಕ್ಷಾಂತರ ಭಾರತೀಯರಿಗೆ ರಿಲೀಫ್‌

ವಾಷಿಂಗ್ಟನ್‌: ವಿದೇಶಿಯರಿಗೆ ಶಾಶ್ವತ ವಾಸ್ತವ್ಯ ಕಲ್ಪಿಸುವ ಗ್ರೀನ್‌ ಕಾರ್ಡ್‌ಗೆ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ್ದ ತಡೆಯನ್ನು ಹಾಲಿ ಅಧ್ಯಕ್ಷ ತೆಗೆದು ಹಾಕಿದ್ದಾರೆ. ಆ ಮೂಲಕ ಪಡೆಯಲು ಯತ್ನಿಸುತ್ತಿರುವ ಭಾರತೀಯರು ಸೇರಿದಂತೆ ಲಕ್ಷಾಂತರ ಮಂದಿಗೆ ರಿಲೀಫ್‌ ಸಿಕ್ಕಿದೆ. ಹೊಸದಾಗಿ ಗ್ರೀನ್‌ ಕಾರ್ಡ್‌ ಪಡೆಯಲು ಇನ್ನು ಮುಂದೆ ಅರ್ಜಿ ಸಲ್ಲಿಸಬಹುದಾಗಿದೆ. ಕೊರೊನಾದಿಂದಾಗಿ ಲಕ್ಷಾಂತರ ಮಂದಿ ಅಮೆರಿಕನ್ನರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದರು. ಹೀಗಾಗಿ ಅವರ ಉದ್ಯೋಗ ರಕ್ಷಣೆಗೆ ಹಾಗೂ ಉದ್ಯೋಗದಲ್ಲಿ ಸ್ವದೇಶಿಯರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿದೇಶಿಯರಿಗೆ ನೀಡಲಾಗುತ್ತಿದ್ದ ಗ್ರೀನ್‌ ಕಾರ್ಡ್‌ ಸೌಲಭ್ಯಕ್ಕೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ತಡೆ ನೀಡಿದ್ದರು. ಟ್ರಂಪ್‌ ಅವರು ಈ ನಿರ್ಧಾರವನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆಯನ್ನುಗುರಿಯಾಗಿಸಿಕೊಂಡು ತೆಗೆದುಕೊಂಡಿದ್ದರು ಎನ್ನುವ ಟೀಕೆ ಕೂಡ ಕೇಳಿ ಬಂದಿತ್ತು. ಮೊದಲು 2020ರ ಡಿಸೆಂಬರ್‌ 31ರ ವರಗೆ ಹೊಸ ಗ್ರೀನ್ ಕಾರ್ಡ್‌ ಪಡೆಯಲು ನಿರ್ಬಂಧ ಹೇರಲಾಗಿತ್ತು. ಬಳಿಕ ಅದನ್ನು ಟ್ರಂಪ್‌ 2021ರ ಮಾರ್ಚ್‌ 31 ರ ವರೆಗೆ ವಿಸ್ತರಿಸಿದ್ದರು. ಬಿಡೆನ್‌ ಈಗ ಅದನ್ನು ತೊಡೆದು ಹಾಕಿದ್ದಾರೆ. ಹೊಸ ಗ್ರೀನ್‌ ಕಾರ್ಡ್‌ಗೆ ತಡೆ ನೀಡಿದ್ದರಿಂದ ಅಮೆರಿಕ ಉದ್ಯಮಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಬಿಡೆನ್ ಟ್ರಂಪ್‌ ಕಾಲದ ನಿರ್ಬಂಧವನ್ನು ಹಿಂಪಡೆದಿದ್ದಾರೆ. ಅಲ್ಲದೇ ಇದು ಅಮೆರಿಕದ ಹಿತಾಸಕ್ತಿಗೆ ವಿರುದ್ದವಾಗಿದೆ ಎಂದು ಬಿಡೆನ್‌ ಅಭಿಪ್ರಾಯ ಪಟ್ಟಿದ್ದಾರೆ. ಡೊನಾಲ್ಡ್‌ ಟ್ರಂಪ್‌ ಅವರ ಕಠಿಣ ವಲಸೆ ನೀತಿಗಳನ್ನು ತೆಗೆದು ಹಾಕುವುದಾಗಿ ಚುನಾವಣೆ ಪ್ರಚಾರದ ವೇಳೆಯಲ್ಲೇ ಬಿಡೆನ್‌ ಹೇಳಿಕೆ ನೀಡಿದ್ದರು.


from India & World News in Kannada | VK Polls https://ift.tt/3dNrHto

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...