
ಜನರ ಎಟಿಎಂನ್ನು ಸ್ಕಿಮ್ಮಿಂಗ್ ಮಾಡಿ ಅದರಿಂದ ಹಣ ಲಪಟಾಯಿಸುತ್ತಿದ್ದ ಖದೀಮರನ್ನು ಪೊಲೀಸರುಯ ಅರೆಸ್ಟ್ ಮಾಡಿದ್ದಾರೆ. ಎಟಿಎಂಗೆ ಸ್ಕಿಮ್ಮಿಂಗ್ ಯಂತ್ರ ಅಳವಡಿಸುವ ವೇಳೆ ಸಾರ್ವಜನಿಕರೊಬ್ಬರು ನೋಡಿ ಅವರನ್ನು ಅಟ್ಟಾಡಿಸಿಕೊಂಡು ಹೋಗಿ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಬಗ್ಗೆ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ.

ಮಂಗಳೂರು:
ನಗರದ ಹಲವು ಕಡೆಗಳಲ್ಲಿ ಎಟಿಎಂ ಯಂತ್ರಗಳನ್ನು ಸ್ಕಿಮ್ಮಿಂಗ್ ಮಾಡಿ, ಬ್ಯಾಂಕ್ ಖಾತೆಗಳಿಂದ ಹಣ ಲಪಟಾಯಿಸುತ್ತಿದ್ದ ಕೃತ್ಯದಲ್ಲಿ ದಿಲ್ಲಿ ಮೂಲದ ವ್ಯಕ್ತಿ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬ ದಿಲ್ಲಿ ಹಾಗೂ ಇನ್ನೊಬ್ಬಾತ ಕಾಸರಗೋಡಿನ ನಿವಾಸಿಯಾಗಿದ್ದು, ಮತ್ತಷ್ಟು ಮಂದಿಯ ಬಂಧನ ಬಾಕಿಯಿರುವ ಕಾರಣ ಆರೋಪಿಗಳ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಕೃತ್ಯದಲ್ಲಿ 6ಮಂದಿ ಶಾಮೀಲಾಗಿದ್ದು, ಕೃತ್ಯದ ಕಿಂಗ್‌ಪಿನ್ ಸೇರಿದಂತೆ ಉಳಿದ ಆರೋಪಿಗಳಿಗೆ ಶೋಧ ಮುಂದುವರಿದಿದೆ. ಅಂತಾರಾಜ್ಯ ಕಳ್ಳರ ಜಾಲ ಇದಾಗಿದ್ದು, ಈ ತಂಡ ನಗರದ ಬೈಕಂಪಾಡಿ, ಮಲ್ಲಿಕಟ್ಟೆ, ಗಾಂಧಿನಗರ, ಕಾಟಿಪಳ್ಳ ಸೇರಿದಂತೆ ನಾನಾ ಕಡೆ ಸ್ಕಿಮ್ಮಿಂಗ್ ಕೃತ್ಯ ನಡೆಸಿದ ಆರೋಪಿಗಳ ಒಂದೇ ತಿಂಗಳಲ್ಲಿ ಲಕ್ಷಾಂತರ ರೂ. ಲಪಟಾಯಿಸಿದೆ. ದಿನೇ ದಿನೇ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ಜಾಡು ಪತ್ತೆ ಹಚ್ಚುವುದು ಬ್ಯಾಂಕ್ ಸಿಬ್ಬಂದಿ ಮತ್ತು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು.
ಪತ್ತೆಯಾದದ್ದು ಹೇಗೆ?

ಕಾರಿನಲ್ಲಿ ಬಂದ ಯುವಕರ ತಂಡ ಮಂಗಳಾದೇವಿ ಎಟಿಎಂನಲ್ಲಿ ಸ್ಕಿಮ್ಮಿಂಗ್ ಕೃತ್ಯಕ್ಕೆ ಹೊಂಚು ಹಾಕುತ್ತಿತ್ತು.ಇದನ್ನು ಪೆಟ್ರೋಲ್ ಬಂಕ್ ಸಿಬ್ಬಂದಿ ಗಮನಿಸಿ, ಎಟಿಎಂನತ್ತ ತೆರಳಿದ್ದಾರೆ. ಇದನ್ನು ನೋಡಿದ ಯುವಕರಿಬ್ಬರು ಅಲ್ಲಿಂದ ಓಡಿ ತಪ್ಪಿಸಲು ಯತ್ನಿಸಿದ್ದಾರೆ. ಕೂಡಲೇ ಪೆಟ್ರೋಲ್ ಸಿಬ್ಬಂದಿ ಮತ್ತು ಸಾರ್ವಜನಿಕರು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆರೋಪಿಗಳನ್ನು ಪಾಂಡೇಶ್ವರ ಪೊಲೀಸರಿಗೆ ಒಪ್ಪಿಸಲಾಗಿದ್ದು, ಪ್ರಕರಣ ಸೈಬರ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಉಪ್ಪಿನಂಗಡಿ: ಬಸ್‌ನಲ್ಲಿ ವಿದ್ಯಾರ್ಥಿಗೆ ಮೈ ಮುಟ್ಟಿ ಲೈಂಗಿಕ ಕಿರುಕುಳ, ಅರೆಬಿಕ್ ಶಾಲಾ ಶಿಕ್ಷಕನ ಬಂಧನ!
ದಿಲ್ಲಿ ಮೂಲದ ತಂಡ!

ದಿಲ್ಲಿ ಮೂಲದ ಒಂದೇ ತಂಡ ಸುಮಾರು ಮೂರು ತಿಂಗಳಿನಿಂದೀಚೆಗೆ ನಗರದ ನಾನಾ ಕಡೆ ಎಟಿಎಂಗಳಿಗೆ ಹೋಗಿ ಸ್ಕಿಮ್ಮಿಂಗ್ ನಡೆಸಿ 5ಲಕ್ಷಕ್ಕೂ ಅಧಿಕ ರೂ. ವಂಚನೆ ಮಾಡಿದೆ. ಈ ಪ್ರಕರಣದ ಸೂತ್ರಧಾರ ದಿಲ್ಲಿ ಮೂಲದವನಾಗಿದ್ದಾನೆ. ಇನ್ನು ಸ್ಕಿಮ್ಮಿಂಗ್ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ, ಬೆನ್ನಟ್ಟಿ ಹಿಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ ಮತ್ತು ಸಾರ್ವಜನಿಕರ ಬಗ್ಗೆ ಬ್ಯಾಂಕ್ ಸಿಬ್ಬಂದಿ, ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಂಗಳಾದೇವಿಯಲ್ಲಿ ಎಟಿಎಂನಲ್ಲಿ ಸ್ಕಿಮ್ಮಿಂಗ್ ಆರೋಪಿಗಳನ್ನು ಸಾರ್ವಜನಿಕರು ಬೆನ್ನಟಿ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಮಂಗಳೂರು ಸರ್ವೇಯರ್!
ಏನಿದು ಸ್ಕಿಮ್ಮಿಂಗ್ ಸಿಸ್ಟಂ ?

ಎಟಿಎಂ ಯಂತ್ರಗಳಲ್ಲಿ ದುಷ್ಕರ್ಮಿಗಳು ಸೂಕ್ಷ್ಮ ಉಪಕರಣ ಅಳವಡಿಸಿ ಎಟಿಎಂ ಕಾರ್ಡ್‌ಗಳ ಮಾಹಿತಿಯನ್ನು ಕಾಪಿ ಮಾಡುತ್ತಾರೆ. ಇದಕ್ಕಾಗಿ ವಂಚಕರು ಅಳವಡಿಸುವ ಉಪಕರಣವು ಬಳಕೆದಾರರು ಎಟಿಎಂ ಕಾರ್ಡ್ ಸ್ವೈಪ್ ಮಾಡಿದಾಗ ಅದರಲ್ಲಿರುವ 16 ಅಂಕಿಗಳ ಸಂಖ್ಯೆ ಮತ್ತು ಸಿವಿಸಿ ಸಂಖ್ಯೆಗಳನ್ನು ದಾಖಲಿಸಿಕೊಳ್ಳುತ್ತದೆ. ನಂತರ ನಕಲಿ ಕಾರ್ಡ್ ತಯಾರಿಸಿ ಹಣ ವಿತ್ ಡ್ರಾ ಮಾಡುವುದಕ್ಕೆ 'ಸ್ಕಿಮ್ಮಿಂಗ್' ಎಂದು ಕರೆಯಲಾಗುತ್ತದೆ. ಇದೇ ರೀತಿ ನಗರದ ನಾನಾ ಬ್ಯಾಂಕ್‌ನಿಂದ ಖದೀಮರು ಗಣ ಲಪಟಾಯಿಸಿದ್ದಾರೆ. ಇಂತಹ ಯಾವುದೇ ಸ್ಕಿಮ್ಮಿಂಗ್ ಮಿಷನ್‌ಗಳು ಕಂಡು ಬಂದಲ್ಲಿ ತಮ್ಮ ವ್ಯವಹಾರಗಳನ್ನು ಕೂಡಲೇ ನಿಲ್ಲಿಸಿ ಸಂಬಂಧಪಟ್ಟ ಬ್ಯಾಂಕ್‌ಗೆ ಅಥವಾ ಸೈಬರ್ ಕ್ರೈಂ ಪೊಲೀಸರಿಗೆ ನೀಡಲು ಸೂಚಿಸಲಾಗಿದೆ. ಇನ್ನು ನಗರದ ನಾನಾ ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ನಡೆಸುವ ಅಂತಾರಾಜ್ಯ ಜಾಲ ಕಾರ್ಯಪ್ರವೃತ್ತವಾಗಿರುವ ಬಗ್ಗೆ ಜ.24ರಂದು ವಿಜಯ ಕರ್ನಾಟಕ 'ಬ್ಯಾಂಕ್ ಖಾತೆಯಿಂದಲೇ ಹಣ ಮಾಯ!' ವಿಶೇಷ ವರದಿ ಮಾಡಿ ಎಚ್ಚರಿಸಿದ್ದಲ್ಲದೆ, ಸಾರ್ವಜನಿಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಿತ್ತು. ಈ ವರದಿಯಲ್ಲಿ ಡಿ.15ರಿಂದ ಜ.16ವರೆಗೆ ಒಂದು ತಿಂಗಳ ಅಂತರದಲ್ಲಿ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ 12 ಪ್ರಕರಣಗಳು ಹಾಗೂ ಈ ಕೃತ್ಯದಲ್ಲಿ ಬ್ಯಾಂಕ್ ಖಾತೆದಾರರು 5.73ಲಕ್ಷ ರೂ. ಕಳೆದುಕೊಂಡ ಬಗ್ಗೆ ಉಲ್ಲೇಖ ಮಾಡಲಾಗಿತ್ತು. ಇದೀಗ ಆರೋಪಿಗಳ ಬಂಧನ ಮೂಲಕ ಜಾಲವೊಂದನ್ನು ಬೇಧಿಸಿದಂತಾಗಿದೆ.
from India & World News in Kannada | VK Polls https://ift.tt/3aKTBo3