ಅಸ್ಸಾಂ: ಚುನಾವಣೆಗೂ ಮುನ್ನ ಬಿಜೆಪಿ ಸಖ್ಯ ತ್ಯಜಿಸಿ ಕಾಂಗ್ರೆಸ್ ಕೈ ಹಿಡಿದ ಬಿಪಿಎಫ್!

ಗುವಹಾಟಿ: ವಿಧಾನಸಭೆ ಚುನಾವಣೆಗೂ ಮೊದಲು ಕಾಂಗ್ರೆಸ್‌ಗೆ ಸಿಹಿ ಸುದ್ದಿಯೊಂದು ಬಂದಿದ್ದು, ಆಡಳಿತಾರೂಢ ಪಾಲುದಾರ ಪಕ್ಷ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್() ಮೈತ್ರಿಕೂಟ ತೊರೆದಿದೆ. ಬಿಜೆಪಿ ಸಖ್ಯ ತ್ಯಜಿಸಿರುವ ಬಿಪಿಎಫ್, ವಿಪಕ್ಷ ಮೈತ್ರಿಕೂಟವನ್ನು ಸೇರುವುದಾಗಿ ಘೋಷಿಸಿದೆ. ಅಸ್ಸಾಂನಲ್ಲಿ ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ಕಾಂಗ್ರೆಸ್‌ಗೆ ಈ ನಡೆ ಸಹಜವಾಗಿ ಹೊಸ ಹುಮ್ಮಸ್ಸನ್ನು ನೀಡಿದೆ. ಈ ಕುರಿತು ಮಾತನಾಡಿರುವ ಬಿಪಿಎಫ್ ನಾಯಕ ಹಗ್ರಾಮಾ ಮೊಹಿಲರಿ, ರಾಜ್ಯದ ಅಭಿವೃದ್ಧಿ, ಶಾಂತಿ ಮತ್ತು ಏಕತೆಗಾಗಿ ಕಾಂಗ್ರೆಸ್ ನೇತೃತ್ವದ ಮಹಾಜಥ್(MAHAJATH) ಮೈತ್ರಿಕೂಟ ಸೇರುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆಡಳಿತಾರೂಢ ಬಿಜೆಪಿ ರಾಜ್ಯವನ್ನು ಅಶಾಂತಿಯ ಗೂಡನ್ನಾಗಿ ಪರಿವರ್ತಿಸಿದ್ದು, ದ್ವೇಷದ ರಾಜಕಾರಣ ಮಾಡುವಲ್ಲಿ ನಿರತವಾಗಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಅಭಿವೃದ್ಧಿ ಸಂಪೂರ್ಣ ಮರಿಚೀಕೆಯಾಗಿದ್ದು, ರಾಜ್ಯದಲ್ಲಿ ಮತ್ತೆ ಶಾಂತಿ ನೆಲೆಸುವಂತಾಗಲು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ ಎಂದು ಮೊಹಿಲರಿ ಅಭಿಪ್ರಾಯಪಟ್ಟಿದ್ದಾರೆ. 2005ರಲ್ಲಿ ಅಸ್ತಿತ್ವಕ್ಕೆ ಬಂದ ಬಿಪಿಎಫ್, ಈ ಹಿಂದೆ ಎರಡು ಬಾರಿ ಕಾಂಗ್ರೆಸ್ ಮೈತ್ರಿಕೂಟದ ಪಾಲುದಾರ ಪಕ್ಷವಾಗಿತ್ತು. ಅದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಸೇರಿದ ಬಿಪಿಎಫ್, ಸರ್ಕಾರದಲ್ಲಿ ಮೂವರು ಸಚಿವರನ್ನೂ ಹೊಂದಿದೆ. ಆದರೆ ಬಿಜೆಪಿ ಇದೀಗ ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್(BTC) ಜೊತೆ ಮೈತ್ರಿಗೆ ಮುಂದಾಗಿದ್ದು, ಇದು ಬಿಪಿಎಫ್‌ನ್ನು ಕೆರಳಿಸಿದೆ. ಇದೇ ಕಾರಣಕ್ಕೆ ಬಿಪಿಎಫ್ ಕಾಂಗ್ರೆಸ್ ಮೈತ್ರಿಕೂಟ ಸೇರುವ ಘೋಷಣೆ ಮಾಡಿದೆ. ಒಟ್ಟಿನಲ್ಲಿ ಚುನಾವಣೆ ಹೊಸ್ತಿಲಲ್ಲಿರುವ ಅಸ್ಸಾಂನಲ್ಲಿ ತೀವ್ರ ರಾಜಕೀಯ ಚಟುವಟಿಕೆಗಳು ನಡೆಯುತ್ತಿರುವುದು ರಾಷ್ಟ್ರದ ಗಮನ ಸೆಳೆದಿದೆ ಎಂದು ಹೇಳಬಹುದು.


from India & World News in Kannada | VK Polls https://ift.tt/37Phby7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...